Ayodhya Ram Mandir: 20 ಅರ್ಚಕರ ಹುದ್ದೆಗೆ ಅರ್ಜಿ ಹಾಕಿದ್ದು ಬರೊಬ್ಬರಿ 3000 ಮಂದಿ, ಆಯ್ಕೆ ಆದವರೆಷ್ಟು?, ನೇಮಕಾತಿ ಮಾಹಿತಿ
ಬೆಂಗಳೂರು, ನವೆಂಬರ್ 21: ಭಾರತೀಯರ ನೆಚ್ಚಿನ ಧಾರ್ಮಿಕ ತಾಣಗಳಲ್ಲಿ ಪ್ರಮುಖವಾದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕೆಲಸವು ಪೂರ್ಣಗೊಂಡಿದೆ. ಮುಂದಿನ 2024 ಜನವರಿಯಲ್ಲಿ ಭಕ್ತರಿಗೆ ದೇವಾಲಯ ಮುಕ್ತವಾಗಲಿದೆ. ಸದ್ಯ ಇಲ್ಲಿ ಅರ್ಚಕರ ನೇಮಕಾತಿ ನಡೆದಿದ್ದು, ಅಗತ್ಯವಿದ್ದ ಅರ್ಚಕರ ಸಂಖ್ಯೆ ಎಷ್ಟು, ಅರ್ಜಿ ಹಾಕಿದವರೆಷ್ಟು? ಆಯ್ಕೆ, ತರಬೇತಿಯ ಮಾಹಿತಿ ಇಲ್ಲಿದೆ.
ಅಯೋಧ್ಯ ಶ್ರೀರಾಮಂದಿರಕ್ಕೆ ಸುಮಾರು 20ಅರ್ಚಕರ ಅಗತ್ಯವಿತ್ತು. ಆದರೆ ದೇಶಾದ್ಯಂತೆ ಈ ಹುದ್ದೆಗಳಿಗೆ ಬರೋಬ್ಬರಿ 3000 ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀರಾಮ ಸೇವೆ ಮಾಡಲು ಇಚ್ಚಿಸುವವರ ಸಂಖ್ಯೆ ಅಪಾರ ಸಂಖ್ಯೆಯಲ್ಲಿದೆ ಎಂಬುದು ತಿಳಿಯುತ್ತಿದೆ.

ಒಟ್ಟು ಅರ್ಜಿ ಹಾಕಿದವರಲ್ಲಿ ಉದ್ದೇಶಿತ 20 ಅರ್ಚಕರ ಹುದ್ದೆಯ ಸಂದರ್ಶನಕ್ಕೆ ಸಂಬಂಧಿಸಿದ ಆಡಳಿತ ಮಂಡಳಿ/ ಸರ್ಕಾರ 200 ಮಂದಿಯನ್ನು ಆಯ್ಕೆ ಮಾಡಿದೆ. ಇವರೆಲ್ಲರನ್ನು ಸದ್ಯ ಅಯೋಧ್ಯೆಯಲ್ಲಿನ ವಿಎಚ್‌ಪಿಯ ಕರಸೇವಕಪುರಂ ಸಂದರ್ಶನಕ್ಕೆ ಒಳಪಡಿಸಲಾಗಿದೆ.
3 ಧರ್ಮ ಗುರುಗಳಿಂದ ಸಂದರ್ಶನ
ಒಟ್ಟು 200 ಮಂದಿಯನ್ನು ಮೂರು ಧರ್ಮಗಳು ಗುರುಗಳು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಆಯ್ಕೆ ಆದವರಿಗೆ ಸುಮಾರು ಆರು ತಿಂಗಳ ತರಬೇತಿ ನಡೆಸಿ, ನಂತರ ಅರ್ಚಕರ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನೇಮಕ ಆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ವಸತಿ ಊಟ ಸಹಿತ ತರಬೇತಿ
ಶ್ರೀರಾಮ ಮಂದಿರ ಉದ್ಘಾಟನೆ ಬಳಿಕ ಜನವರಿ ನಂತರದ ದಿನಗಳಲ್ಲಿ ಹೊಸ ಅರ್ಚಕರ ನೇಮಕ ಅಗತ್ಯವಿದ್ದಲ್ಲಿ ಈಗಿನ ಸಂದರ್ಶನದಲ್ಲಿ ಆಯ್ಕೆ ಮಾಡಿ ಬಿಟ್ಟವರನ್ನು ಮುಂದೆ ಮತ್ತೆ ಪರಿಗಣಿಸಲಾಗುವುದು ಎಂದು ಧರ್ಮಗುರುಗಳು ತಿಳಿಸಿದ್ದಾರೆ.
ಸಂದರ್ಶನದಲ್ಲಿ ಪಾಸಾಗಿ ತರಬೇತಿ ಪಡೆಯುತ್ತಿರುವವರಿಗೆ ಉಚಿತ ವಸತಿ, ಆಹಾರ ಜೊತೆಗೆ ತಲಾ 2000 ತಂಗುವ ನಿಧಿ (ಸ್ಟೇಫಂಡ್) ಒದಗಿಸಲಾಗುತ್ತಿದೆ. ಇವರು ಇಲ್ಲಿ ತರಬೇತಿ ಅವಧಿ ಪೂರ್ಣಗೊಳಿಸಿದ ನಂತರ ಅವರು ಭವ್ಯ ಶ್ರೀರಾಮಂದಿರದಲ್ಲಿ ನಿಯೋಜನೆಗೊಳ್ಳಲಿದ್ದಾರೆ.
ಜನವರಿ ಪ್ರಾಣಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮ
ಜನವರಿ ಮೂರನೇ ವಾರದಂದು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಅಂದು ರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಧಾನಿ ಮೋದಿ ಅವರ ಸಾರಥ್ಯದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯವಾಗಲಿದೆ. ಆ ದಿನದಿಂದಲೇ ಭಕ್ತರ ದರ್ಶನಕ್ಕೆ ರಾಮ ಮಂದಿರ ಮುಕ್ತವಾಗಲಿದೆ.
ಅಷ್ಟೇ ಅಲ್ಲದೇ ಬರೋಬ್ಬರಿ 48 ದಿನಗಳ ಕಾಲ ಬ್ರಹ್ಮಕಲಶೋತ್ಸವ ಸೇರಿದಂತೆ ಕೆಲವು ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.
ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಹಿಂದೂ ಧರ್ಮೀಯರು ಮನೆ ಮನೆಗಳಲ್ಲಿ ದೀಪ ಬೆಳಗಿ ರಾಮ ನಾಮ ಸ್ಮರಣೆ ಮಾಡಲಿದ್ದಾರೆ. ವಿಶೇಷ ಪೂಜೆ-ಪುನಸ್ಕಾರ, ಹೋಮ ಹವನಗಳು ಜರುಗಲಿವೆ. ತನ್ ವಾಸ್ತುಶಿಲ್ಪ, ಐತಿಹಾಸಿಕತೆಯಿಂದ ಅತ್ಯಾಕರ್ಷಕವಾಗಿ ಸಿದ್ಧವಾಗಿರುವ ಈ ಅಯೋಧ್ಯೆ ಶ್ರೀರಾಮಮಂದಿರ ಭಕ್ತಗಣವನ್ನು ಈಗಿನಿಂದಲೇ ತನ್ನತ್ತ ಸೆಳೆಯುತ್ತಿದೆ.












Click it and Unblock the Notifications