ಕೊರೊನಾವೈರಸ್ ನಿಂದ ಪಾರಾಗಲು 'MEN' ಮತ್ತು 'WOMEN' ನಿಯಮ!
ನವದೆಹಲಿ, ಸಪ್ಟೆಂಬರ್.03: ಕೊರೊನಾವೈರಸ್ ಸೋಂಕಿನಿಂದ ಸುರಕ್ಷಿತವಾಗಿರಲು ಹಲವು ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾಂಕ್ರಾಮಿಕ ರೋಗ ತಜ್ಞರು, ವೈದ್ಯರು ಹಾಗೂ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
Recommended Video
ಕೊವಿಡ್-19 ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಹೊಸ ನಿಯಮವನ್ನು ಪರಿಚಯಿಸಲಾಗಿದೆ. MEN ಕ್ರಮದಿಂದ ಅಂತರ ಕಾಯ್ದುಕೊಳ್ಳಿರಿ ಹಾಗೂ WOMEN ಕ್ರಮವನ್ನು ಪಾಲಿಸಿ ಎನ್ನುವ ನಿಯಮ ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ.
ಅಸಲಿಗೆ MEN ನಿಯಮವು ಬಾಯಿ, ಕಣ್ಣು ಮತ್ತು ಮೂಗುಗಳನ್ನು ಪದೇ ಪದೆ ಮುಟ್ಟಿಕೊಳ್ಳಬಾರದು ಎಂಬ ಸೂಚನೆಯನ್ನು ನೀಡುತ್ತದೆ. ಇನ್ನೊಂದೆಡೆ WOMEN ಎಂಬ ನಿಯಮವು ಕೈಗಳನ್ನು ಆಗಾಗ ಸೋಪಿನಿಂದ ತೊಳೆಯುತ್ತಿರಬೇಕು. ನಿರ್ದೇಶಗಳನ್ನು ಪಾಲಿಸಬೇಕು. ಜನನಿಬಿಡ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಹಾಗೂ ಎಚ್ಚರಿಕೆ ಮತ್ತು ಸೂಚನೆಗಳನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶವನ್ನನು ಸಾರುತ್ತಿದೆ.

MEN ಕ್ರಮ ಎಂದರೇನು?:
M - Mouth (ಬಾಯಿ)
E - Eyes ( ಕಣ್ಣು )
N - Nose ( ಮೂಗು )
day 1 of class pic.twitter.com/gjl8g2D6yH
— ur grandma mia (@itsmiameera) September 2, 2020
WOMEN ಕ್ರಮ ಎಂದರೇನು?:
W - Wash your Hands With Soap ( ನಿಮ್ಮ ಕೈಗಳನ್ನು ಸೋಪಿನಿಂದ ತೊಳೆಯಿರಿ )
O - Obey Directives ( ನಿರ್ದೇಶನಗಳನ್ನು ಸರಿಯಾಗಿ ಪಾಲಿಸಿ )
M - Move Away From Crowded Places ( ಜನನಿಬಿಡ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳಿರಿ )
E - Exercise Regularly ( ಪ್ರತಿನಿತ್ಯ ವ್ಯಾಯಾಮ ಮಾಡಿ )
N - Never Ignore Warning Signals. ( ಎಚ್ಚರಿಕೆ ಮತ್ತು ಸೂಚನೆಗಳನ್ನು ನಿರ್ಲಕ್ಷಿಸಬೇಡಿ )












Click it and Unblock the Notifications