School Holidays: ಭಾರೀ ಮಳೆ, ಆಗಸ್ಟ್ 21ರಂದು ಈ ಭಾಗದ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಅಪ್ಡೇಟ್ಸ್
School Holidays: ದೇಶವ್ಯಾಪಿ ಮಳೆ ಸುರಿಯುತ್ತಿದೆ. ಈ ಪೈಕಿ ದಕ್ಷಿಣ ಭಾರತ ಸೇರಿ ವಿವಿಧ ರಾಜ್ಯಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ. ಗುರುವಾರ ಆಗಸ್ಟ್ 21ರಂದು ಸುಮಾರು 200 ಮಿಲಿ ಮೀಟರ್‌ವರೆಗೆ ಈ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಶಿಕ್ಷಣ ಇಲಾಖೆ, ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ವಿವಿಧ ಶಾಲೆಗಳು, ಅಂಗನವಾಡಿ ಕೇಂದ್ರ ಮತ್ತು ಕಾಲೇಜುಗಳಿಗೆ ಮಳೆ ರಜೆ ಘೋಷಿಸಿವೆ.
ಮುಂಬೈನಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಪ್ರವಾಹ ಸೃಷ್ಟಿಯಾಗಿದೆ. ಇಲ್ಲಿ ಕಳೆದ ಎರಡು ದಿನಗಳಿಂದ ರಜೆ ಘೋಷಣೆ ಆಗಿದೆ. ಇದೀಗ ಪುಣೆಯ ಲೋನಾವಾಲಾ ಮುನ್ಸಿಪಲ್ ಕೌನ್ಸಿಲ್ ಗುರುವಾರ, ಆಗಸ್ಟ್ 21 ರಂದು ಎಲ್ಲಾ ಶಾಲೆಗಳಿಗೆ ಎರಡು ದಿನಗಳ ರಜೆ ಘೋಷಿಸಿ ಆದೇಶಿಸಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅನುಮತಿ ಮೇರೆಗೆ ಕೆಲವು ಶಾಲೆಗಳು ಸ್ವಯಂ ಆನ್‌ಲೈನ್ ತರಗತಿ ನಡೆಸಲು ಮುಂದಾಗಿವೆ.

ಅದೇ ರೀತಿ ನೋಯ್ಡಾದಲ್ಲಿ ಸಹ ಭಾರೀ ಮಳೆ ಹಿನ್ನೆಲೆಯ ಗೌತಮ್ ಬುದ್ಧ ನಗರದ ಶಾಲೆಗಳು ಗುರುವಾರ ರಜೆ ಘೋಷಿಸಲಾಗಿದೆ. ಮಾತ್ರವಲ್ಲದೇ ದ್ರೋಣಾಚಾರ್ಯ ದೇಗುಲದ ಜಾತೆ ನಡೆಯಲಿದ್ದು, ದಟ್ಟಣೆ ಹೆಚ್ಚಾಗಿರಲಿದೆ. ಮಕ್ಕಳ ಹಿತದೃಷ್ಟಿಯಿಂದ ಆ ಭಾಗದ ಶಾಲೆಗಳಿಗೆ ಆಗಸ್ಟ್ 21ಕ್ಕೆ ರಜೆ ನೀಡಲಾಗಿದೆ.
ಮಹಾರಾಷ್ಟ್ರ-ಹಿಮಾಚಲ ಪ್ರದೇಶದಲ್ಲಿ ಶಾಲೆಗೆ ರಜೆ
ಮಹಾರಾಷ್ಟ್ರ ರಾಜ್ಯದಲ್ಲಿ ಈ ತಿಂಗಳಲ್ಲಿ ಹಲವು ಭಾರಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದೀಗ ಮುಂಗಾರು ತೀವ್ರಗೊಂಡ ಹಿನ್ನೆಲೆಯಲ್ಲಿ ಶಾಲೆಗಳನ್ನು ಗುರುವಾರ ಮುಚ್ಚಲಾಗುತ್ತದೆ. ಅದೇ ರೀತಿ ಹಿಮಾಚಲ ಪ್ರದೇಶದಲ್ಲಿ ಸಹ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಟ್ಟಿವೆ. ಈ ಮಳೆ ರಜೆ ಗುರುವಾರ ಆಗಸ್ಟ್ 21ರಂದು ಸಹ ಮುಂದುವರಿಯಲಿವೆ. ಉನಾದಲ್ಲಿ, ಅಂಬ್ ಮತ್ತು ಗಾಗ್ರೆಟ್ ಉಪವಿಭಾಗಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಆಗಿದೆ. ಈ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಹಾನಿ, ಪ್ರವಾಹ ಸಂಭವಿಸಿದೆ.
ಇದರೊಂದಿಗೆ ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ದೆಹಲಿ ಹಾಗೂ ಕರ್ನಾಟಕದಲ್ಲೂ ಗುರುವಾರ ಶಾಲೆಗಳಿಗೆ ರಜೆ ಘೋಷಣೆಯ ನಿರೀಕ್ಷೆ ಇದೆ.












Click it and Unblock the Notifications