• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ

|

ಬೆಂಗಳೂರು, ಆಗಸ್ಟ್ 14: ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸಿದಾಗಲೂ ವಿಚಿತ್ರ ಸಂದೇಶವೊಂದು ಮೊಬೈಲ್, ಇ-ಮೇಲ್‌ಗಳಲ್ಲಿ ಹರಿದಾಡುತ್ತಿರುತ್ತದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಅದನ್ನು ಹಂಚಿಕೊಂಡವರು ಅದು ಸತ್ಯವೇ ಅಥವಾ ಸುಳ್ಳೇ ಎಂದು ಯೋಚಿಸುವ ಗೋಚಿಗೆ ಹೋಗುವುದಿಲ್ಲ. ಆ ಸಂದೇಶವನ್ನು ನೀವೂ ನೋಡಿರಬಹುದು. ತಮಾಷೆ ಎನಿಸಿ ಕೆಲವರು ನಕ್ಕು ಸುಮ್ಮನಾದರೆ, ಇನ್ನು ಕೆಲವರು ಅದು ನಿಜ ಎಂದುಕೊಂಡು ಉಳಿದವರಿಗೂ ಫಾರ್ವರ್ಡ್ ಮಾಡುತ್ತಾರೆ.

ಮೊದಲು ಬೆಳ್ಳಗೆ ಇದ್ದ ದೆಹಲಿ ಕೆಂಪು ಕೋಟೆಯ ಇಂಟರೆಸ್ಟಿಂಗ್ ಮಾಹಿತಿ ಮೊದಲು ಬೆಳ್ಳಗೆ ಇದ್ದ ದೆಹಲಿ ಕೆಂಪು ಕೋಟೆಯ ಇಂಟರೆಸ್ಟಿಂಗ್ ಮಾಹಿತಿ

ಭೂತಾನಕ್ಕೆ ಇಂಗ್ಲಿಷ್‌ನಲ್ಲಿ Bhutan ಎನ್ನುವರು. ಶ್ರೀಲಂಕಾಕ್ಕೆ ಇಂಗ್ಲಿಷ್‌ನಲ್ಲಿ Srilanka ಎನ್ನುವರು. ನೇಪಾಳಕ್ಕೆ ಇಂಗ್ಲಿಷ್‌ನಲ್ಲಿ Nepal ಎನ್ನುವರು. ಇಷ್ಟೇ ಅಲ್ಲ, ನಮ್ಮ ಸಮೀಪವಿರುವ ಪಾಕಿಸ್ತಾನಕ್ಕೆ ಇಂಗ್ಲಿಷ್‌ನಲ್ಲಿ Pakistan ಎನ್ನುವರು. ಆದರೆ ಭಾರತಕ್ಕೆ ಮಾತ್ರ ಇಂಗ್ಲಿಷ್‌ನಲ್ಲಿ India ಎನ್ನುವರು.

ಭಾರತ ಸ್ವಾತಂತ್ರ್ಯ ದಿನದಂದೇ ಈ ದೇಶಗಳಲ್ಲೂ ಸ್ವಾತಂತ್ರ್ಯ ದಿನದ ಸಂಭ್ರಮ ಭಾರತ ಸ್ವಾತಂತ್ರ್ಯ ದಿನದಂದೇ ಈ ದೇಶಗಳಲ್ಲೂ ಸ್ವಾತಂತ್ರ್ಯ ದಿನದ ಸಂಭ್ರಮ

ಆಕ್ಸ್‌ಫರ್ಡ್ ಡಿಕ್ಷನರಿ ಅನುಸಾರ India ಎಂಬ ಶಬ್ಧಕ್ಕೆ 99% ಜನರಿಗೆ ಮಾಹಿತಿ ಇಲ್ಲದೆ ಇರಬಹುದು.
I- Independent
N- Nation
D- Declared
I- In
A- August. ಆದ್ದರಿಂದ India ಎಂದು ಕರೆಯುತ್ತಾರೆ ಎಂಬಂತಹ ಸಂದೇಶಗಳನ್ನು ಇಂದಿಗೂ ಜನ ನಂಬುತ್ತಾರೆ.

ಪಾಕಿಸ್ತಾನವೂ ಇಂಡಿಯಾ ಆಗಬೇಕಿತ್ತಲ್ಲವೇ?

ಪಾಕಿಸ್ತಾನವೂ ಇಂಡಿಯಾ ಆಗಬೇಕಿತ್ತಲ್ಲವೇ?

ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಇಂಡಿಯಾ ಎಂದು ಭಾರತವನ್ನು ಕರೆಯಲಾಗುತ್ತಿತ್ತು ಎಂಬುದನ್ನು ಇತಿಹಾಸದಲ್ಲಿ ಓದಿದವರೂ ಅದನ್ನು ಜ್ಞಾಪಿಸಿಕೊಳ್ಳುವುದಿಲ್ಲ.

India ಎಂಬ ಪದದ ಹುಟ್ಟಿನ ಬಗ್ಗೆ ಇಂದಿಗೂ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದು ಸಿಂಧೂ ನಾಗರಿಕತೆಯ ಕಾರಣದಿಂದ ಹುಟ್ಟಿದ್ದು ಎಂದರೆ ಇನ್ನು ಅನೇಕರು ಹಿಂದೂ ಧರ್ಮದ ಕಾರಣದಿಂದ ಇಂಡಿಯಾ ಎಂಬ ಪದವನ್ನು ಬ್ರಿಟಿಷರು ಸೃಷ್ಟಿಸಿದರು ಎಂದು ವಾದಿಸುತ್ತಾರೆ.

ಈ ವಾದ ಒಂದು ಮಗ್ಗುಲಾದರೆ, ಭಾರತಕ್ಕಿಂತ ಒಂದು ದಿನ ಮೊದಲು ಸ್ವಾತಂತ್ರ್ಯ ಪಡೆದ ಪಾಕಿಸ್ತಾನವೂ ಆಗಸ್ಟ್‌ನಲ್ಲಿಯೇ ಹುಟ್ಟಿದ್ದಲ್ಲವೇ? ಹಾಗಾದರೆ ಅದರ ಹೆಸರು ಕೂಡ India ಎಂದಾಗಬೇಕಿತ್ತಲ್ಲವೇ? ಮಾತ್ರವಲ್ಲ, ಜಗತ್ತಿನ ಸುಮಾರು 29 ದೇಶಗಳು ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಇವುಗಳೆಲ್ಲವೂ ಇಂಡಿಯಾ ಎಂದೇ ಹೆಸರಾಗಬೇಕಿತ್ತಲ್ಲವೇ?

ಅಂದಹಾಗೆ, ಆಗಸ್ಟ್ 15 ಭಾರತಕ್ಕೆ ಮಾತ್ರವಲ್ಲ, ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ.

ಭಾರತ

ಭಾರತ

1947ರ ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ. ಒಂದು ದಿನ ಮುಂಚೆ ಅಖಂಡ ಭಾರತವನ್ನು ವಿಭಜಿಸಿ ಪಾಕಿಸ್ತಾನ ಎಂಬ ದೇಶ ಸೃಷ್ಟಿಸಿ ಅದಕ್ಕೆ ಸ್ವಾತಂತ್ರ್ಯ ನೀಡಿದ ಬ್ರಿಟಿಷರು, ಮರು ದಿನ ಮಧ್ಯರಾತ್ರಿ ಭಾರತದಿಂದಲೂ ನಿರ್ಗಮಿಸಿದರು. ಹೀಗಾಗಿ ಪ್ರತಿ ವರ್ಷ ಆಗಸ್ಟ್ 15ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ವ್ಯಾಪಾರಕ್ಕೆಂದು ಬಂದ ಯುರೋಪಿಯನ್ನರು ಭಾರತವನ್ನು ವಸಾಹತುವನ್ನಾಗಿಸಿಕೊಂಡು ಇಲ್ಲಿನ ಜನರನ್ನೇ ಶತಮಾನಗಳವರೆಗೆ ಆಳಿದರು. ಅದರ ವಿರುದ್ಧ ನಡೆದ ಹೋರಾಟಗಳು, ಚಳವಳಿಗಳ ಕಥೆ ಇಂದಿಗೂ ಮೈನವಿರೇಳಿಸುತ್ತವೆ.

ದೇಶ ಸ್ವಾತಂತ್ರ್ಯ ಪಡೆದದ್ದು ಆಗಸ್ಟ್ 15ಕ್ಕೆ, ಆದರೆ ಮೈಸೂರಿನ ಲೆಕ್ಕ ಬೇರೆ!ದೇಶ ಸ್ವಾತಂತ್ರ್ಯ ಪಡೆದದ್ದು ಆಗಸ್ಟ್ 15ಕ್ಕೆ, ಆದರೆ ಮೈಸೂರಿನ ಲೆಕ್ಕ ಬೇರೆ!

ರಿಪಬ್ಲಿಕ್ ಆಫ್ ಕಾಂಗೊ

ರಿಪಬ್ಲಿಕ್ ಆಫ್ ಕಾಂಗೊ

ಆಫ್ರಿಕಾದ ಕೇಂದ್ರ ಭಾಗದಲ್ಲಿರುವ ರಿಪಬ್ಲಿಕ್ ಆಫ್ ಕಾಂಗೊ 1960ರ ಆಗಸ್ಟ್ 15ರಂದು ಫ್ರಾನ್ಸ್ ವಸಾಹತುವಿನಿಂದ ಮುಕ್ತಗೊಂಡಿತು.

15ನೇ ಶತಮಾನದಲ್ಲಿ ಯುರೋಪಿನ ವ್ಯಾಪಾರಿಗಳು ಬಂಟು ಬುಡಕಟ್ಟು ಸಮುದಾಯ ಮತ್ತು ಪೋರ್ಚುಗೀಸ್ ನಡುವೆ ವ್ಯಾಪಾರ ಸಂಬಂಧಕ್ಕಾಗಿ ಕಾಂಗೊ ನದಿಯನ್ನು ಬಳಸಿಕೊಳ್ಳಲು ಆರಂಭಿಸಿದರು. ಬಳಿಕ ಪೋರ್ಚುಗೀಸರು ಕಾಂಗೊದಿಂದ ಗುಲಾಮರನ್ನು ಬ್ರೆಜಿಲ್‌ನ ಕಾಫಿ ಫ್ಲಾಂಟೇಷನ್‌ಗಳಿಗೆ ಸಾಗಿಸಿದರು. ಈ ಗುಲಾಮ ವ್ಯಾಪಾರ ಭಾರಿ ಪ್ರಮಾಣದ ದಂಗೆ, ಗಲಭೆಗಳಿಗೆ ಕಾರಣವಾಗಿ ಕೊನೆಗೂ ಸ್ವಾತಂತ್ರ್ಯ ತಂದುಕೊಟ್ಟಿತು.

ಕೊರಿಯಾ

ಕೊರಿಯಾ

ಆಗಸ್ಟ್ 15ರಂದು ರಾಷ್ಟ್ರೀಯ ವಿಮೋಚನಾ ದಿನವನ್ನು ದಕ್ಷಿಣ ಮತ್ತು ಉತ್ತರ ಕೊರಿಯಾಗಳೆರಡು ದೇಶಗಳಲ್ಲಿಯೂ ಆಚರಿಸಲಾಗುತ್ತದೆ. ಎರಡನೆಯ ಮಹಾಯುದ್ಧದ ಸಂದರ್ಭದವರೆಗೆ ಜಪಾನ್ ಹಿಡಿತದಲ್ಲಿದ್ದ ಕೊರಿಯಾವನ್ನು ಅಮೆರಿಕ ಮತ್ತು ಸೋವಿಯತ್ ಪಡೆಗಳು ವಿಮೋಚನೆಗೊಳಿಸಿದವು. ಇದನ್ನು ಜಪಾನ್ ವಿರುದ್ಧದ ಜಯದ ದಿನ ಎಂದೂ ಕರೆಯಲಾಗುತ್ತದೆ. ವಿಶೇಷವೆಂದರೆ ದಕ್ಷಿಣ ಮತ್ತು ಉತ್ತರ ಕೊರಿಯಾಗಳಲ್ಲಿ ಇರುವ ಏಕೈಕ ಸಾರ್ವಜನಿಕ ರಜಾ ದಿನ ಇದು.

1945ರಲ್ಲಿ ಕೊರಿಯಾದ ಪೆನಿನ್ಸುಲಾ ಸ್ವತಂತ್ರಗೊಂಡಿತು. ಮೂರು ವರ್ಷಗಳ ಬಳಿಕ 1948ರ ಆಗಸ್ಟ್ 15ರಂದು ಸ್ವತಂತ್ರ ಕೊರಿಯನ್ ಸರ್ಕಾರಗಳು ಸೃಷ್ಟಿಯಾದವು. ಇದನ್ನು ದಕ್ಷಿಣ ಕೊರಿಯಾದಲ್ಲಿ 'ಬೆಳಕು ಮರುಕಳಿಸಿದ ದಿನ' ಎಂದು ಕರೆಯಲಾಗುತ್ತದೆ. ಉತ್ತರ ಕೊರಿಯಾದಲ್ಲಿ 'ಪಿತೃಭೂಮಿಯ ವಿಮೋಚನಾ ದಿನ' ಎಂದು ಆಚರಿಸಲಾಗುತ್ತದೆ.

ಲೀಚೆಂಸ್ಟೀನ್

ಲೀಚೆಂಸ್ಟೀನ್

ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ನಡುವೆ ಕೇವಲ 160 ಚದರ ಕಿ.ಮೀ. ವ್ಯಾಪ್ತಿ ಹಿಂದಿರುವ ಪುಟ್ಟ ದೇಶ ಲೀಚೆಂಸ್ಟೀನ್. ಇಲ್ಲಿರುವುದು ಜರ್ಮನ್ ಭಾಷೆ ಮಾತನಾಡುವ ಜನರು. 1940ರಲ್ಲಿ ಈ ದೇಶ ಸ್ವತಂತ್ರವಾಯಿತು.

77 ವರ್ಷಗಳಿಂದ ಆಗಸ್ಟ್ 15ಅನ್ನು ರಾಷ್ಟ್ರೀಯ ದಿನವನ್ನಾಗಿ ಇಲ್ಲಿ ಆಚರಿಸಲಾಗುತ್ತಿದೆ. ಆಗಸ್ಟ್ 16 ಇಲ್ಲಿನ ರಾಜಕುಮಾರ ಫ್ರಾನ್ಸ್ ಜೋಸೆಫ್ 2 ಜನ್ಮದಿನ. ಬ್ಯಾಂಕ್ ರಜಾ ದಿನವನ್ನಾಗಿ ಮೊದಲಿನಿಂದಲೂ ಆಚರಿಸಲಾಗುತ್ತಿದ್ದರಿಂದ ಮತ್ತು ಮರುದಿನವೇ ರಾಜಕುಮಾರನ ಜನಿಸಿದ್ದರಿಂದ ರಾಷ್ಟ್ರೀಯ ದಿನವನ್ನಾಗಿ ಆಗಸ್ಟ್ 15ರಂದು ಆಚರಣೆ ಮಾಡಲಾಗುತ್ತದೆ.

ಬಹ್ರೇನ್

ಬಹ್ರೇನ್

1971ರ ಆಗಸ್ಟ್ 15ರಂದು ಬಹ್ರೇನ್ ಸ್ವತಂತ್ರವಾಯಿತು. ಸುಮಾರು 40 ವರ್ಷಗಳವರೆಗೆ ಬಹ್ರೇನ್, ಬ್ರಿಟಿಷರ ಆಡಳಿತದಲ್ಲಿತ್ತು. 1960ರ ದಶಕದಲ್ಲಿ ಸೂಯೆಜ್‌ನ ಪೂರ್ವ ಭಾಗದಿಂದ ತಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಬ್ರಿಟಿಷರು ಘೋಷಿಸಿದ್ದರು.

1971ರ ಆಗಸ್ಟ್ 15ರಂದು ಬ್ರಿಟಿಷರೊಂದಿಗಿದ್ದ ಹಳೆಯ ಒಪ್ಪಂದಗಳನ್ನು ರದ್ದುಗೊಳಿಸಿ ಹೊಸ ಸ್ನೇಹದ ಒಪ್ಪಂದವನ್ನು ಪ್ರಕಟಿಸುವುದರೊಂದಿಗೆ ಬಹ್ರೇನ್ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು.

ಆದರೆ ಆಗಸ್ಟ್ 15 ಅದರ ಸ್ವಾತಂತ್ರ್ಯದ ದಿನವಾದರೂ ಆ ದಿನವನ್ನು ಬಹ್ರೇನ್ ಆಚರಿಸುತ್ತಿಲ್ಲ. ಬದಲಾಗಿ ಮಾಜಿ ರಾಜ ಇಸಾ ಬಿನ್ ಸಲ್ಮಾನ್ ಅಲ್ ಖಲಿಫಾ ಸಿಂಹಾಸನಕ್ಕೇರಿದ ದಿನವಾದ ಡಿಸೆಂಬರ್ 16ರಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ.

English summary
Not only India, four other nations also have their Independence day on August 15. Republic of Congo, Korea, Liechtenstein, and Bahrain also mark their Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X