ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.30ರಿಂದ ರೈಲಿನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರೇ ಇತ್ತ ಗಮನಿಸಿ

|
Google Oneindia Kannada News

ಬೆಂಗಳೂರು ಅಕ್ಟೋಬರ್ 29: ಮಧ್ಯ ರೈಲ್ವೆಯು ಲೋನಾವಲಾ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಕಮೀಷನಿಂಗ್ ಕಾಮಗಾರಿಯ ನಿಮಿತ್ತ ವಿಶೇಷ ಟ್ರ್ಯಾಫಿಕ್ ಬ್ಲಾಕ್ ಸಲುವಾಗಿ ದಿನಾಂಕ 30.10.2021 ರಿಂದ ಈ ಕೆಳಗಿನ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ ಹಾಗೂ ನಿಯಂತ್ರಣವನ್ನು ಸೂಚಿಸಿದೆ. ದಿನಾಂಕ 30.10.21 ರ ರೈಲು ಸಂಖ್ಯೆ 01013 ಲೋಕಮಾನ್ಯ ತಿಲಕ್ ಟರ್ಮಿನಸ್ - ಕೊಯಮತ್ತೂರು ವಿಶೇಷ ಎಕ್ಸ್ ಪ್ರೆಸ್ ರೈಲಿನ ನಿರ್ಗಮನ ಸಮಯವನ್ನು ಅನಿವಾರ್ಯ ಕಾರಣಗಳಿಂದಾಗಿ ದಿನಾಂಕ 31.10.21 ರ ಬೆಳಗ್ಗೆ 04.50 ಗಂಟೆಗೆ ಬದಲಾಯಿಸಲಾಗಿದೆ. ದಕ್ಷಿಣ ರೈಲ್ವೆಯು ಈ ಕೆಳಗಿನ ರೈಲುಗಳ ಕೆಲವು ನಿಲ್ದಾಣಗಳ ಆಗಮನ/ನಿರ್ಗಮನದ ವೇಳೆಯ ಬದಲಾವಣೆಯನ್ನು ಈ ಕೆಳಗೆ ತಿಳಿಸಿದಂತೆ ಸೂಚಿಸಿದೆ.

ದಿನಾಂಕ 01.11.2021 ರಿಂದ ರೈಲು ಸಂಖ್ಯೆ 06315 ಮೈಸೂರು - ಕೊಚ್ಚುವೇಲಿ ವಿಶೇಷ ಎಕ್ಸ್ ಪ್ರೆಸ್ ಪರಿಷ್ಕೃತ ವೇಳೆಯೊಂದಿಗೆ ಸಂಚರಿಸಲಿದ್ದು, ಅದರಂತೆ ಕೊಚ್ಚುವೇಲಿ ನಿಲ್ದಾಣಕ್ಕೆ ಬೆಳಗ್ಗೆ 09:20 ಗಂಟೆಗೆ ಬದಲಾಗಿ ಬೆಳಗ್ಗೆ 09:15 ಗಂಟೆಗೆ ಆಗಮಿಸಲಿದೆ. ದಿನಾಂಕ 05.11.2021 ರಿಂದ ರೈಲು ಸಂಖ್ಯೆ 06320 ಬಾಣಸವಾಡಿ - ಕೊಚ್ಚುವೇಲಿ ದ್ವಿ-ಸಾಪ್ತಾಹಿಕ (ವಾರಕ್ಕೆ ಎರಡು ಬಾರಿ ಸೇವೆಯ) ವಿಶೇಷ ಎಕ್ಸ್ ಪ್ರೆಸ್ ಪರಿಷ್ಕೃತ ವೇಳೆಯೊಂದಿಗೆ ಸಂಚರಿಸಲಿದ್ದು, ಅದರಂತೆ ಕೊಚ್ಚುವೇಲಿ ನಿಲ್ದಾಣಕ್ಕೆ ಬೆಳಗ್ಗೆ 09:35 ಗಂಟೆಗೆ ಬದಲಾಗಿ ಬೆಳಗ್ಗೆ 09:25 ಗಂಟೆಗೆ ಆಗಮಿಸಲಿದೆ. ದಿನಾಂಕ 04.11.2021 ರಿಂದ ರೈಲು ಸಂಖ್ಯೆ. 07385 ಯಶವಂತಪುರ - ಕೊಚ್ಚುವೇಲಿ ವಿಶೇಷ ಎಕ್ಸ್ ಪ್ರೆಸ್ ಚೆಂಗನೂರು ನಿಲ್ದಾಣದ ಆಗಮನ/ನಿರ್ಗಮನ ಸಮಯಗಳು ಬದಲಾಗಿದ್ದು, ಅದರಂತೆ ಚೆಂಗನೂರು ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು ಬೆಳಗ್ಗೆ 04:28/04:30 ಗಂಟೆಗೆ ಬದಲಾಗಿ ಬೆಳಗ್ಗೆ 04:18/04:20 ಗಂಟೆಗೆ ಪರಿಷ್ಕೃತವಾಗಿವೆ.

ದಿನಾಂಕ 03.11.2021 ರಿಂದ ರೈಲು ಸಂಖ್ಯೆ. 02254 ಭಾಗಲ್ಪುರ - ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ನ ರಾಜಮಂಡ್ರಿ, ಓಂಗೋಲ್ ಹಾಗೂ ಗೂಡೂರು ನಿಲ್ದಾಣಗಳ ಆಗಮನ/ನಿರ್ಗಮನ ಸಮಯಗಳು ಬದಲಾಗಿದ್ದು ಅದರಂತೆ ರಾಜಮಂಡ್ರಿ ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು ಮಧ್ಯಾಹ್ನ 04:13/04:15 ಗಂಟೆಗೆ ಬದಲಾಗಿ ಮಧ್ಯಾಹ್ನ 03:33/03:35 ಗಂಟೆಗೆ, ಓಂಗೋಲ್ ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು ರಾತ್ರಿ 08:48/08:50 ಗಂಟೆಗೆ ಬದಲಾಗಿ ರಾತ್ರಿ 08:33/08:35 ಗಂಟೆಗೆ ಹಾಗೂ ಗೂಡೂರು ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು ಮೊದಲಿನ ರಾತ್ರಿ 11:18/11::20 ಗಂಟೆಗೆ ಬದಲಾಗಿ ರಾತ್ರಿ 10::58/11:00 ಗಂಟೆಗೆ ಪರಿಷ್ಕೃತವಾಗಿವೆ.

Attention passengers traveling by train from Oct 30

ದಿನಾಂಕ 02.11.2021 ರಿಂದ ರೈಲು ಸಂಖ್ಯೆ. 06598 ಹೌರಾ - ಯಶವಂತಪುರ ಎಕ್ಸ್ ಪ್ರೆಸ್ ನ ರಾಜಮಂಡ್ರಿ ಮತ್ತು ವಿಜಯವಾಡ ನಿಲ್ದಾಣದ ಆಗಮನ/ನಿರ್ಗಮನ ಸಮಯಗಳು ಬದಲಾಗಿದ್ದು ಅದರಂತೆ ರಾಜಮಂಡ್ರಿ ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು ಬೆಳಗ್ಗೆ 05:03/05:05 ಗಂಟೆಗೆ ಬದಲಾಗಿ ಬೆಳಗ್ಗೆ 04:53/04:55 ಗಂಟೆಗೆ ಹಾಗೂ ವಿಜಯವಾಡ ನಿಲ್ದಾಣದ ಆಗಮನ/ನಿರ್ಗಮನ ಸಮಯಗಳು ಬೆಳಗ್ಗೆ 07:10/07:20 ಗಂಟೆಗೆ ಬದಲಾಗಿ ಬೆಳಗ್ಗೆ 07:13/07:15 ಗಂಟೆಗೆ ಪರಿಷ್ಕೃತವಾಗಿವೆ. ದಿನಾಂಕ 31.10.2021.ರಿಂದರೈಲು ಸಂಖ್ಯೆ.02510ಗುವಾಹಟಿ - ಬೆಂಗಳೂರು ಕ್ಯಾಂಟ್.ಸೂಪರ್ ಫಾಸ್ಟ್ ವಿಶೇಷ ಎಕ್ಸ್ ಪ್ರೆಸ್ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬೆಳಗ್ಗೆ10:00 ಗಂಟೆಗೆ ಬದಲಾಗಿ ಬೆಳಗ್ಗೆ10:50 ಗಂಟೆಗೆ ಆಗಮಿಸಲಿದೆ.

ಇನ್ನೂ ತನ್ನ ಆಯ್ದ ರೈಲುಗಳಲ್ಲಿ ಕೆಲವು ಕಾಯ್ದಿರಿಸಿದ ಬೋಗಿಗಳನ್ನು ಕಾಯ್ದಿರಿಸದ ಬೋಗಿಗಳಾಗಿ ಪರಿವರ್ತಿಸಿ ಸಂಚರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಕೆಲವು ನಾಮನಿರ್ದೇಶಿತ ರೈಲುಗಳಲ್ಲಿ ಕಾಯ್ದಿರಿಸದೇ ಪ್ರಯಾಣಿಸುವುದನ್ನು ಅನುಮತಿಸಲು ಕುಳಿತು ಹೋಗುವ ಎರಡನೇ ದರ್ಜೆಯ ಕಾಯ್ದಿರಿಸಿದ ಕೆಲವು ಬೋಗಿಗಳನ್ನು ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿಡಲು ನಿರ್ಧರಿಸಿದೆ. ಈ ವಿಶೇಷ ರೈಲುಗಳ ಹೆಸರು, ಅವುಗಳಲ್ಲಿ ಕಾಯ್ದಿರಿಸದೇ ಸಂಚರಿಸುವ ಬೋಗಿಗಳ ಸಂಖ್ಯೆ ಹಾಗೂ ಈ ನಿರ್ಧಾರ ಜಾರಿಗೆ ಬರುವ ದಿನಾಂಕ ಇವುಗಳ ವಿವರಗಳು ಈ ಕೆಳಗಿನಂತಿವೆ.

1. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 07301/07302 ಮೈಸೂರು - ಧಾರವಾಡ - ಮೈಸೂರು. ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D4, D5) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

2. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06531 ಕೆ ಎಸ್ ಆರ್ ಬೆಂಗಳೂರು - ಮಂಗಳೂರು ಕೇಂದ್ರ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D3, D4) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

3. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06201/06202 ಮೈಸೂರು - ಕೆ ಎಸ್ ಆರ್ ಬೆಂಗಳೂರು - ಮೈಸೂರು ಸೂಪರ್ ಫಾಸ್ಟ್ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 8 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D11 - D18) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

4. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06295/06296 ಮೈಸೂರು - ತಾಳಗುಪ್ಪ - ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 8 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D11 - D18) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

5. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 07357/07358 ಯಶವಂತಪುರ ಶಿವಮೊಗ್ಗ ಟೌನ್ - ಯಶವಂತಪುರ ಇಂಟರ್ ಸಿಟಿ ಎಕ್ಸ್ ಪ್ರೆಸ್ ಸ್ಪೆಷಲ್ ರೈಲಿನಲ್ಲಿ 4 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D9 - D12) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

6. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06529/06530 ಕೆ ಎಸ್ ಆರ್ ಬೆಂಗಳೂರು - ತಾಳಗುಪ್ಪ - ಕೆ ಎಸ್ ಆರ್ ಬೆಂಗಳೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ಸ್ಪೆಷಲ್ ರೈಲಿನಲ್ಲಿ 8 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D11 - D18) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

7. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 02725/02726 ಕೆ ಎಸ್ ಆರ್ ಬೆಂಗಳೂರು - ಧಾರವಾಡ - ಕೆ ಎಸ್ ಆರ್ ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ಸ್ಪೆಷಲ್ ರೈಲಿನಲ್ಲಿ 7 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D11 - D17) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

8. ದಿನಾಂಕ 08.11.2021.ರಿಂದ ರೈಲು ಸಂಖ್ಯೆ 06589 ಕೆ ಎಸ್ ಆರ್ ಬೆಂಗಳೂರು - ಮೀರಜ್ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 1 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿ (D2) ಕಾಯ್ದಿರಿಸದ ಬೋಗಿಯಾಗಿ ಮೀಸಲಾಗಿರುತ್ತದೆ.

9. ದಿನಾಂಕ 08..11.2021.ರಿಂದ ರೈಲು ಸಂಖ್ಯೆ 06227/06228 ಮೈಸೂರು - ತಾಳಗುಪ್ಪ ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D2, D4) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

10. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06549/06550 ಕೆ ಎಸ್ ಆರ್ ಬೆಂಗಳೂರು - ಬೆಳಗಾವಿ - ಕೆ ಎಸ್ ಆರ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 1 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿ (D3) ಕಾಯ್ದಿರಿಸದ ಬೋಗಿಯಾಗಿ ಮೀಸಲಾಗಿರುತ್ತದೆ.

11. ದಿನಾಂಕ 29.10.2021 ರಿಂದ ರೈಲು ಸಂಖ್ಯೆ 07373 ಯಶವಂತಪುರ - ಎಸ್ ಎಸ್ ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D3, D4) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

12. ದಿನಾಂಕ 30.10.2021 ರಿಂದ ರೈಲು ಸಂಖ್ಯೆ 07374 ಎಸ್ ಎಸ್ ಎಸ್ ಹುಬ್ಬಳ್ಳಿ - ಯಶವಂತಪುರ ಸಾಪ್ತಾಹಿಕ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D3, D4) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

13. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06581 ಎಸ್ ಎಸ್ ಎಸ್ ಹುಬ್ಬಳ್ಳಿ ಮೈಸೂರು - ಎಸ್ ಎಸ್ ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D3, D4 ) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

14. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 06582 ಮೈಸೂರು - ಎಸ್ ಎಸ್ ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D2, D4) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

15. ದಿನಾಂಕ 08.11.2021.ರಿಂದ ರೈಲು ಸಂಖ್ಯೆ. 06535 ಮೈಸೂರು - ಸೋಲಾಪುರ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D2, D4) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

16. ದಿನಾಂಕ 01.11.2021.ರಿಂದ ರೈಲು ಸಂಖ್ಯೆ 07307 ಮೈಸೂರು - ಬಾಗಲಕೋಟೆ- ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D4, D5) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

17.ದಿನಾಂಕ 01.11.2021.ರಿಂದ ರೈಲು ಸಂಖ್ಯೆ 07308 ಬಾಗಲಕೋಟೆ- ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 2 ಎರಡನೇ ದರ್ಜೆಯ ಕುಳಿತು ಹೋಗುವ ಬೋಗಿಗಳು (D2, D5) ಕಾಯ್ದಿರಿಸದ ಬೋಗಿಗಳಾಗಿ ಮೀಸಲಾಗಿರುತ್ತವೆ.

Recommended Video

ಈ ಪವಾಡ ನಡೆದು ಟೀಮ್ ಇಂಡಿಯಾಗೆ ಸೆಮಿಫೈನಲ್ ಚಾನ್ಸ್ ಸಿಗುತ್ತಾ? | Oneindia Kannada

ರೈಲ್ವೆ ಆವರಣದಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್‌ ಧರಿಸುವುದು, ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ಹಾಗೂ ವ್ಯಕ್ತಿಗತ ಅಂತರ ಪಾಲನೆ ಮೊದಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋವಿಡ್‌-19ರ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿ ಎಲ್ಲಾ ಪ್ರಯಾಣಿಕರಲ್ಲಿ ವಿನಂತಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಕೋವಿಡ್‌-19ರ ಮುನ್ನೆಚ್ಚರಿಕೆಯ ಕ್ರಮಗಳನ್ನೂ ನಿಶ್ಚಿತವಾಗಿ ಪಾಲಿಸಬೇಕಾಗಿ ವಿನಂತಿಸಲಾಗಿದೆ.

English summary
Central Railway has notified for rescheduling and regulation of the following trains due to special traffic blocks and under traffic blocks in connection with Lonavala Electronic Interlocking (EI) Commissioning on 30.10.2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X