Hybrid ATM: ಎಟಿಎಂಗಳಲ್ಲೇ ಸಿಗಲಿದೆ ಚಿಲ್ಲರೆ ಹಣ, ಜನಸಾಮಾನ್ಯರ ಸಮಸ್ಯೆಗೆ ಮುಕ್ತಿ
ಚಿಲ್ಲರೆ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ, ಬಸ್, ಆಟೋ ಹಾಗೂ ಅಂಗಡಿಗಳಲ್ಲಿ ಚಿಲ್ಲರೆ ಹಣಕ್ಕಾಗಿ ಒದ್ದಾಡುವ ಸ್ಥಿತಿ ಈಗಲೂ ಇದೆ. ಡಿಜಿಟಲ್ ಪೇಮೆಂಟ್ ಬಂದ ನಂತರವೂ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಇನ್ನು ತುರ್ತು ಸಂದರ್ಭದಲ್ಲಿ ಎಟಿಎಂನಿಂದ ಹಣ ತೆಗೆಯಲು ಹೋದಾಗಲೂ ಹೆಚ್ಚು ಹಣವೇ ಬರುತ್ತದೆ. ಬಳಿಕ ಆ ನೋಟು ಹಿಡಿದು ಚಿಲ್ಲರೆಗಾಗಿ ಮತ್ತೆ ಪರದಾಡಬೇಕು. ಆದರೆ ಇನ್ನು ಮುಂದೆ ಎಟಿಎಂಗಳಲ್ಲೇ ನಿಮಗೆ ಬೇಕಾದ ಚಿಲ್ಲರೆ ಹಣ ಕೂಡ ಸಿಗಲಿದೆ.
ದೊಡ್ಡ ಮೊತ್ತದ ನೋಟುಗಳನ್ನು ಹೊತ್ತುಕೊಂಡು ಹೋಗುವುದು ಸುಲಭವಾದರೂ, ದೈನಂದಿನ ವ್ಯವಹಾರಗಳಲ್ಲಿ ಅವುಗಳನ್ನು ಬಳಸುವುದು ಕೆಲವೊಮ್ಮೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೀಗ ಹೈಟೆಕ್ ಪರಿಹಾರ ಕಂಡುಕೊಂಡಿದೆ. ದೇಶದಾದ್ಯಂತ ಸಣ್ಣ ಮೌಲ್ಯದ ನೋಟುಗಳನ್ನು ವಿತರಿಸುವ ಸಾಮರ್ಥ್ಯ ಹೊಂದಿರುವ ಹೊಸ ಮಾದರಿಯ 'ಹೈಬ್ರಿಡ್ ಎಟಿಎಂ'ಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ಎಟಿಎಂಗಳು ಕೇವಲ ನಗದು ಹಣ ತೆಗೆಯುವುದಕ್ಕೆ ಮಾತ್ರವಲ್ಲದೆ, ದೊಡ್ಡ ಮೌಲ್ಯದ ನೋಟುಗಳನ್ನು ಅಂದರೆ ₹10, ₹20 ಹಾಗೂ ₹50ರಂತಹ ಸಣ್ಣ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ಸಹ ಒದಗಿಸಲಿದೆ. ಇದರಿಂದ ಸಾರ್ವಜನಿಕರಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಸುಲಭವಾಗಿ ಚಿಲ್ಲರೆ ಹಣ ದೊರೆಯಲಿದೆ.
ಮುಂಬೈನಲ್ಲಿ ಪ್ರಯೋಗ
ಈ ಯೋಜನೆಯ ಪ್ರಾಯೋಗಿಕ ಹಂತವು ಈಗಾಗಲೇ ಮುಂಬೈ ನಗರದಲ್ಲಿ ಆರಂಭವಾಗಿದೆ. 'ಮಿಂಟ್' ವರದಿ ಪ್ರಕಾರ ಹೆಚ್ಚಿನ ನಗದು ವ್ಯವಹಾರ ನಡೆಯುವ ಮಾರುಕಟ್ಟೆಗಳು, ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಈ ಹೈಬ್ರಿಡ್ ಎಟಿಎಂಗಳನ್ನು ಅಳವಡಿಸಲಾಗುತ್ತಿದೆ. ದಿನನಿತ್ಯ ಹೆಚ್ಚಿನ ಜನ ಸಂಚಾರ ಇರುವ ಪ್ರದೇಶಗಳಲ್ಲಿ ಇವುಗಳನ್ನು ಸ್ಥಾಪಿಸುವ ಮೂಲಕ ಸಾಮಾನ್ಯ ಜನರ ಚಿಲ್ಲರೆ ಸಮಸ್ಯೆಗೆ ತಕ್ಷಣದ ಪರಿಹಾರ ನೀಡುವ ಉದ್ದೇಶ ಹೊಂದಿದೆ.
ಭಾರತದಲ್ಲಿ ಡಿಜಿಟಲ್ ಪಾವತಿ ವೇಗವಾಗಿ ವಿಸ್ತರಿಸುತ್ತಿದ್ದರೂ ಇನ್ನೂ ಲಕ್ಷಾಂತರ ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರು ನಗದು ಹಣದ ಮೇಲೆಯೇ ಅವಲಂಬಿತರಾಗಿದ್ದಾರೆ. ಇವರಿಗೆ ₹10 ಅಥವಾ ₹20ರಂತಹ ಸಣ್ಣ ನೋಟುಗಳ ಕೊರತೆ ಇದೆ. ಇದರಿಂದ ಕೆಲವೊಮ್ಮೆ ಅವರ ದಿನನಿತ್ಯದ ಆದಾಯಕ್ಕೂ ಸಮಸ್ಯೆಯಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೂಡ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಹೈಬ್ರಿಡ್ ಎಟಿಎಂಗಳು ಸಣ್ಣ ನೋಟುಗಳ ಕೊರತೆಯಿಂದ ಕಾರ್ಯನಿರ್ವಹಿಸದೆ ನಿಲ್ಲದಂತೆ, ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಮೌಲ್ಯದ ನೋಟುಗಳನ್ನು ಮುದ್ರಿಸುವ ಬಗ್ಗೆ ಆರ್‌ಬಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಕ್ರಮ ನಗದು ಹಣವನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದಕ್ಕಲ್ಲ, ಬದಲಾಗಿ ನಗದು ಸರಾಗವಾಗಿ ಚಲಾವಣೆಯಲ್ಲಿ ಉಳಿಯುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.
ಏನೆಲ್ಲ ಸವಾಲುಗಳು?
ಮತ್ತೊಂದೆಡೆ ಈ ವ್ಯವಸ್ಥೆಗೆ ಕೆಲವು ಸವಾಲುಗಳೂ ಎದುರಾಗುವ ಸಾಧ್ಯತೆ ಇದೆ. ಈ ಹೊಸ ಎಟಿಎಂಗಳನ್ನು ಸ್ಥಾಪಿಸಲು ಬೇಕಾಗುವ ವೆಚ್ಚ, ಭದ್ರತಾ ವ್ಯವಸ್ಥೆ ಹಾಗೂ ನಿರ್ವಹಣೆಗೆ ಬ್ಯಾಂಕುಗಳು ಸಿದ್ಧವಾಗಿವೆಯೇ? ಎಂಬ ಪ್ರಶ್ನೆ ಕೂಡ ಮೂಡಿದೆ. ಜೊತೆಗೆ ಕೇವಲ ಎಟಿಎಂಗಳನ್ನು ಅಳವಡಿಸುವುದರಿಂದಲೇ ಸಣ್ಣ ನೋಟುಗಳ ಲಭ್ಯತೆ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುತ್ತದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ.
ಯುಪಿಐ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದರೂ, ನಗದು ಹಣದ ಅವಶ್ಯಕತೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಹೀಗಾಗಿ ಈ ಹೈಬ್ರಿಡ್ ಎಟಿಎಂ ಯೋಜನೆ ಡಿಜಿಟಲ್ ವ್ಯವಸ್ಥೆಗೆ ಪರ್ಯಾಯವಲ್ಲ. ಬದಲಾಗಿ ನಗದು ಮೇಲೆಯೇ ಅವಲಂಬಿತರಾಗಿರುವ ಜನರಿಗೆ ನೆರವಾಗುವ ಉದ್ದೇಶದ ಹೆಜ್ಜೆಯಾಗಿ ಸರ್ಕಾರ ಇದನ್ನು ಮುಂದೂಡುತ್ತಿದೆ ಎನ್ನಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications