ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾದ ಸೇನಾ ಅಧಿಕಾರಿ ಎಟಿಎಂ ಕಾರ್ಡ್‌ನಿಂದ ಹಣ ಡ್ರಾ

|
Google Oneindia Kannada News

ಕಾಂಕೆರ್, ಜೂನ್ 29: ನಾಪತ್ತೆಯಾಗಿರುವ ಸೇನಾ ಅಧಿಕಾರಿಯ ಎಟಿಎಂ ಕಾರ್ಡ್‌ನಿಂದ ಹಣ ಡ್ರಾ ಆಗಿರುವುದು ಪತ್ತೆಯಾಗಿದೆ.

ಜೂನ್ 17ರಿಂದ ನಿಗೂಢವಾಗಿ ನಾಪತ್ತೆಯಾಗಿರುವ ಸೇನೆಯ ಅಧಿಕಾರಿ ರಾಕೇಶ್ ಪಟೇಲ್ ಅವರು ಎಲ್ಲಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಆದರೆ, ಅವರು ನಾಪತ್ತೆಯಾದ ಬಳಿಕ ಇದುವರೆಗೂ ಅವರ ಎಟಿಎಂ ಕಾರ್ಡ್ ಬಳಸಿ ಎರಡು ಬಾರಿ ಹಣ ವಹಿವಾಟು ನಡೆದಿರುವುದನ್ನು ಸೇನಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ತರಬೇತಿಗೆ ತೆರಳಿದ್ದ 10 ಬಿಎಸ್ ಎಫ್ ಯೋಧರು ನಿಗೂಢವಾಗಿ ನಾಪತ್ತೆತರಬೇತಿಗೆ ತೆರಳಿದ್ದ 10 ಬಿಎಸ್ ಎಫ್ ಯೋಧರು ನಿಗೂಢವಾಗಿ ನಾಪತ್ತೆ

ಗುಪ್ತಚರ ವಿಭಾಗದಲ್ಲಿ ನಿಯೋಜನೆಗೊಂಡಿದ್ದ ರಾಕೇಶ್ ಪಟೇಲ್, ಛತ್ತೀಡಗಡದ ಕಾಂಕೆರ್‌ನಲ್ಲಿನ ತಮ್ಮ ಮನೆಗೆ ಏಪ್ರಿಲ್‌ನಲ್ಲಿ ಬಂದಿದ್ದರು. ಬಳಿಕ ಕರ್ತವ್ಯಕ್ಕಾಗಿ ಜಮ್ಮುವಿಗೆ ಮರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ATM transactions detected from missing army officers card

ಜೂನ್ 17ರಂದು ಪಟೇಲ್ ಅವರ ಮನೆಗೆ ಬಂದಿದ್ದ ದೂರವಾಣಿ ಕರೆಯಿಂದ, ಅವರು ಯಾರಿಗೂ ಮಾಹಿತಿ ನೀಡದೆ ಎಲ್ಲಿಗೋ ಹೋಗಿದ್ದಾರೆ ಎಂದು ತಿಳಿದುಬಂದಿತ್ತು.

ಕೆಲ ಸಮಯದಲ್ಲಿಯೇ ರಾಕೇಶ್ ಅವರ ಖಾತೆಯಿಂದ ಎಟಿಎಂ ಹಣ ವಹಿವಾಟು ನಡೆದಿದ್ದು, 25 ಸಾವಿರ ರೂಪಾಯಿ ಹಣವನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸೇನಾ ಸಿಬ್ಬಂದಿ ರಾಕೇಶ್ ಅವರ ಸಹೋದರು ರಾಜು ಅವರಿಗೆ ನೀಡಿದ್ದರು.

ಜೂನ್ 25ರಂದು ಜಗ್ದಲ್ಪುರದ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಒಂದರಿಂದ ಮತ್ತೆ 10 ಸಾವಿರ ರೂಪಾಯಿ ಹಣ ತೆಗೆದಿರುವುದು ತಿಳಿದುಬಂದಿದೆ.

ಆದರೆ, ಇದುವರೆಗೂ ರಾಕೇಶ್ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ರಾಕೇಶ್ ಅವರ ಹಠಾತ್ ನಾಪತ್ತೆಯಾದ ಬಳಿಕ ಜಮ್ಮುವಿನ ಸೇನಾ ಕಚೇರಿಯಿಂದ ಪತ್ರ ಬಂದಿದೆ. ತಕ್ಷಣದಿಂದಲೇ ತನಿಖೆ ಆರಂಭಿಸಲಾಗಿದೆ, ಆದರೆ ಇದುವರೆಗೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಕಾಂಕೆರ್ ಪೊಲೀಸರು ಹೇಳಿದ್ದಾರೆ.

English summary
Army personnel detected two ATM transaction from missing Army officer Rakesh Patel's card, but he remains untraceable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X