ಚಿನ್ನಾಭರಣ ಅಂಗಡಿ ಸಿಸಿಟಿವಿ ಫೂಟೇಜ್ ಮೇಲೂ ಐಟಿ ಕಣ್ಣು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 12: 500, 1000 ರುಪಾಯಿ ಹಳೆ ನೋಟುಗಳ ಜತೆಗೆ ಆಭರಣದ ಅಂಗಡಿಗೆ ಎಡತಾಕುವವರ ಸಂಖ್ಯೆ ಜಾಸ್ತಿಯಾಗಿದೆ. ಹಲವರು ಇದೇ ಸಮಯವನ್ನು ಮುಂದು ಮಾಡಿಕೊಂಡು ಚಿನ್ನ ಖರೀದಿಯಲ್ಲಿ ಹಣ ಹೂಡುವುದಕ್ಕೆ ಮುಂದಾಗ್ತಾರೆ ಎಂಬುದು ಆದಾಯ ತೆರಿಗೆ ಇಲಾಖೆಗೂ ಗೊತ್ತಿದೆ.

ಯಾರ ಬಳಿ ಕಪ್ಪು ಹಣ ಇದೆಯೋ ಎಷ್ಟು ಸಾಧ್ಯವೋ ಅಷ್ಟನ್ನು ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಯತ್ನಿಸುವುದು ಗೊತ್ತಿರುವ ವಿಚಾರವಾದ್ದರಿಂದ ಜುವೆಲ್ಲರ್ಸ್ ಗಳಿಗೆ ಗ್ರಾಹಕರ ಪ್ಯಾನ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಲಾಗಿದೆ. ಅದನ್ನು ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಇದೀಗ ಗ್ರಾಹಕರ ಚಲನವಲನ ಗಮನಿಸಲು ಜುವೆಲ್ಲರ್ಸ್ ನವರಿಂದ ಸಿಸಿಟಿವಿ ಫೂಟೇಜ್ ಕೂಡ ನೀಡಬೇಕು ಎಂದಿದೆ.[ದೇಶಾದ್ಯಂತ ನೆಗೆದುಬಿತ್ತು ಬಂಗಾರ, ಬೆಳ್ಳಿ ವ್ಯಾಪಾರ!]

cctv

ನವೆಂಬರ್ 8ರ ನಂತರದ ಎಲ್ಲ ದಿನದ ಸಿಸಿಟಿವಿ ಫೂಟೇಜ್ ನ ನೀಡಬೇಕು ಎಂದು ಸೂಚಿಸಲಾಗಿದೆ. ಈ ಆದೇಶವನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ತೆರಿಗೆ ಇಳಾಖೆ ಹೊರಡಿಸಿದ್ದು, ಜುವೆಲ್ಲರಿ ಅಂಗಡಿಯವರು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಮೀರಿದರೆ ಕ್ರಮ ಎದುರಿಸಬೇಕಾಗುತ್ತದೆ.

ಆಭರಣ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆಯನ್ನು ಗಮನಿಸುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೂ ಮುಖ್ಯವಾಗಿ ಒಬ್ಬ ವ್ಯಕ್ತಿಯೇ ಒಂದೇ ದಿನದಲ್ಲಿ ಪದೇ ಪದೇ ಮಳಿಗೆಗೆ ಭೇಟಿ ನೀಡುತ್ತಿದ್ದರೆ ಸಿಸಿ ಟಿವಿ ಫೂಟೇಜ್ ನೋಡಿ, ತಕ್ಷಣ ಕ್ರಮ ತೆಗೆದುಕೊಳ್ಳಲು ಸಹಾಯವಾಗುತ್ತದೆ.[FAQ: ಆಭರಣ ಖರೀದಿ, ಹಣ ಜಮೆಗೆ ಆದಾಯ ತೆರಿಗೆ]

500, 1000 ನೋಟು ರದ್ದು ಘೋಷಣೆ ಮಾಡಿದ ನಂತರ ಚಿನ್ನದ ಗಟ್ಟಿ ಬೆಲೆಯಲ್ಲಿ ಶೇ 60ರಷ್ಟು ಏರಿಕೆ ಆಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನಾಭರಣ ಅಂಗಡಿಗಳಿಗೆ ತೆರಳಿ, ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
IT department has made it mandatory for jewellery stores to collect PAN details of the customers and share the information with the taxman. But wait that is not all, the IT department also wants CCTV footage from jewellery stores to monitor customer movement.
Please Wait while comments are loading...