• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗಿನ ಸ್ಥಿತಿಯಲ್ಲಿ 30 ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆಗೆ ಬೇಕು 3 ವರ್ಷ

|

ನವದೆಹಲಿ, ಜನವರಿ 25: ವಿಶ್ವದಲ್ಲೇ ಅತಿದೊಡ್ಡ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿರುವ ಭಾರತವು ಪ್ರಸ್ತುತ ಅಮೆರಿಕಾ ಮತ್ತು ಬ್ರಿಟನ್‌ಗಿಂತಲೂ ವೇಗವಾಗಿ ಮೊದಲ 10 ಲಕ್ಷ ಜನರಿಗೆ ಕೋವಿಡ್-19 ಲಸಿಕೆಯನ್ನು ನೀಡಿದೆ. ಆದರೂ ಇದೇ ವೇಗದಲ್ಲಿ ಲಸಿಕೆಯನ್ನು ನೀಡಿದರೂ 30 ಕೋಟಿ ಭಾರತೀಯರಿಗೆ ಲಸಿಕೆ ನೀಡಲು ಮೂರು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಭಾರತವು ಪ್ರಸ್ತುತ ದಿನಕ್ಕೆ 3,00,000 ಜನರಿಗೆ ಲಸಿಕೆ ಹಾಕುವ ಸಾಮರ್ಥ್ಯ ಹೊಂದಿದೆ. ಮೊದಲ ವಾರದ ಸಂಖ್ಯೆಯ ಪ್ರಕಾರ, ಪ್ರಸ್ತುತ ಲಸಿಕೆ ನೀಡುವ ದರವು ಸುಮಾರು 58ರಷ್ಟು ಆಗಿದ್ದು, ಇದು ಮುಂದಿನ ದಿನಗಳಲ್ಲಿ ಸುಧಾರಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಉಚಿತ.. ಉಚಿತ..! ಶ್ರೀಲಂಕಾಗೆ 5 ಲಕ್ಷ ಡೋಸ್ ಕೊರೊನಾ ಲಸಿಕೆ ಉಚಿತ!ಉಚಿತ.. ಉಚಿತ..! ಶ್ರೀಲಂಕಾಗೆ 5 ಲಕ್ಷ ಡೋಸ್ ಕೊರೊನಾ ಲಸಿಕೆ ಉಚಿತ!

ಲಸಿಕೆ ನೀಡುವ ದರವು ದಿನಕ್ಕೆ ಸರಾಸರಿ 2,00,000 ಕ್ಕೆ ಸುಧಾರಿಸಿದರೆ, ಅಂದರೆ ಮುಂದಿನ ಎರಡು ತಿಂಗಳುಗಳಲ್ಲಿ ಶೇಕಡಾ 67ರಷ್ಟು ಅಥವಾ 2/3 ನೇ ಸಾಮರ್ಥ್ಯ ಹೊಂದಿದರೆ 30 ಮಿಲಿಯನ್ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಲಭಿಸಲಿದೆ, ಇದಕ್ಕಾಗಿ ಹೆಚ್ಚಿನ ಸಾಮರ್ಥ್ಯ ತೋರಬೇಕಿದೆ ಎಂದು ವೈರಾಲಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದಾರೆ.

ಲಸಿಕೆಯ ಎರಡನೇ ಹಂತದ ಕಾರ್ಯಕ್ರಮದಲ್ಲಿ 20 ಮಿಲಿಯನ್ ಮುಂಚೂಣಿ ಕೋವಿಡ್-19 ಕಾರ್ಮಿಕರಿಗೆ ಲಸಿಕೆ ನೀಡಲಾಗುತ್ತಿದೆ. ಇದು ಏಪ್ರಿಲ್, ಮೇ ವೇಳೆಗೆ ಹೆಚ್ಚಾಗುವ ಸಾಧ್ಯತೆ ಇದೆ.ಹೆಚ್ಚಿನ ವಯಸ್ಸಿನವರಿಗೆ ಹೆಚ್ಚಿನ ವ್ಯಾಕ್ಸಿನೇಷನ್ ಪ್ರಾರಂಭವಾಗಬಹುದು.

English summary
At current rate India may take up to three years to vaccinate the prioritised 300 million population going by the current rate, experts have estimated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X