2024 ರ ಲೋಕಸಭೆ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ 'ಮಂತ್ರ' ಏನು? ಇಲ್ಲಿದೆ ವಿವರ

ಇಂದು ನಡೆದ ಪಕ್ಷದ ಸಂಸದರ ಸಭೆಯಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧಿಗಳ ವಿರುದ್ಧ ಹೋರಾಡಲು ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಮಂತ್ರವನ್ನು ನೀಡಿದ್ದಾರೆ. ಏನಿದೆ ಅದರಲ್ಲಿ? ಓದಿ

ನವದೆಹಲಿ, ಫೆಬ್ರವರಿ 07: ಇಂದು ನಡೆದ ಪಕ್ಷದ ಸಂಸದರ ಸಭೆಯಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧಿಗಳ ವಿರುದ್ಧ ಹೋರಾಡಲು ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಮಂತ್ರವನ್ನು ನೀಡಿದ್ದಾರೆ. ಪಕ್ಷದ ಶಾಸಕರು ಮತದಾರರನ್ನು ತಲುಪಿದರೆ ಅಧಿಕಾರ ವಿರೋಧಿ ಧೋರಣೆ ಇರುವುದಿಲ್ಲ ಎಂದಿದ್ದಾರೆ.

'ಪಕ್ಷದ ಸಂಸದರು ತಮ್ಮ ಕ್ಷೇತ್ರಗಳಿಗೆ ಹೋಗಬೇಕು ಮತ್ತು ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರಬೇಕು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಫೆಬ್ರವರಿ 1 ರಂದು ಬಜೆಟ್ ಘೋಷಣೆಯ ನಂತರ ಮೊದಲ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಇದು ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದ್ದರೂ, ಅದನ್ನು 'ಚುನಾವಿ' ಎಂದು ಕರೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

At BJP Meet, PM Modis Mantra To Win 2024 Lok Sabha Elections

'ಬಡವರು ಮತ್ತು ಹಿಂದುಳಿದವರು ಬಜೆಟ್‌ನಲ್ಲಿ ಕೇಂದ್ರೀಕೃತವಾಗಿದ್ದರು' ಎಂದು ಹೇಳಿದ ಅವರು, ಎಲ್ಲ ಸಂಸದರು ತಮ್ಮ ಕ್ಷೇತ್ರಗಳಿಗೆ ಹೋಗಿ 'ಬಜೆಟ್‌ನಿಂದ ಏನನ್ನು ಪಡೆದಿದ್ದಾರೆ ಎಂಬುದರ ಕುರಿತು ಜನರೊಂದಿಗೆ ಮಾತನಾಡಬೇಕು' ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಪ್ರಧಾನಿಯವರು ಮತದಾರರನ್ನು ತಲುಪುವ ಮಹತ್ವವನ್ನು ಒತ್ತಿ ಹೇಳಿದ್ದರು. ಕಳೆದ ತಿಂಗಳು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅವರು ಲೋಕಸಭೆ ಚುನಾವಣೆಗೆ ಸಜ್ಜಾಗುವಂತೆ ಪಕ್ಷದ ನಾಯಕರನ್ನು ಕೇಳಿಕೊಂಡಿದ್ದರು.

'ನಮಗೆ 400 ದಿನಗಳಿವೆ ಮತ್ತು ನಾವು ಜನರ ಸೇವೆಗಾಗಿ ಎಲ್ಲವನ್ನೂ ಮಾಡಬೇಕಾಗಿದೆ. ನಾವು ಇತಿಹಾಸವನ್ನು ರಚಿಸಬೇಕಾಗಿದೆ' ಎಂದು ತಿಳಿಸಿದ್ದಾರೆ.

At BJP Meet, PM Modis Mantra To Win 2024 Lok Sabha Elections

'ಬಿಜೆಪಿಯು ಇನ್ನು ಮುಂದೆ ಕೇವಲ ರಾಜಕೀಯ ಚಳುವಳಿಯಾಗಿರದೆ ಸಾಮಾಜಿಕ ಆಂದೋಲನವಾಗಬೇಕು. ಅದು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಪರಿವರ್ತಿಸಲು ಕೆಲಸ ಮಾಡುತ್ತಿದೆ" ಎಂದು ಮೋದಿ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ, ಬಿಜೆಪಿಯು ಮೂರನೇ ಬಾರಿಗೆ ಅಧಿಕಾರವನ್ನು ಹೊಂದಲು ಬಯಸುತ್ತಿದೆ. ತನ್ನ 10 ವರ್ಷಗಳ ಆಡಳಿತದ ವಿರುದ್ಧ ಯಾವುದೇ ಆಡಳಿತ ವಿರೋಧಿ ಅಲೆ ಏಳದಂತೆ ನೋಡಿಕೊಳ್ಳಬೇಕಿರುವುದು ಬಿಜೆಪಿಯ ಯತ್ನವಾಗಿದೆ.

2019ರ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಆಯ್ಕೆಯಾಗಿದೆ. 2014 ರಲ್ಲಿ 282 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2019ರಲ್ಲಿ 303 ಸ್ಥಾನಗಳನ್ನು ಗೆದ್ದಿದೆ. ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ, ಅದಾನಿ ಗ್ರೂಪ್ ವಿರುದ್ಧದ ಸ್ಟಾಕ್ ಮ್ಯಾನಿಪುಲೇಷನ್ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+