ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಬಗ್ಗೆ ಭವಿಷ್ಯ: ಸೂರ್ಯಗ್ರಹಣದ ಪ್ರಭಾವ, ಇನ್ನೊಂದು ವಾರ ಕಷ್ಟಕಷ್ಟ

|
Google Oneindia Kannada News

ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ, ಮುಂಬೈ ಮೂಲದ ಆಶಿಸ್ ಮೆಹ್ತಾ, ಭಯಾನಕ ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆರು ತಿಂಗಳ ಹಿಂದೆ, ವಿಶ್ವಕ್ಕೆ ಗಂಡಾಂತರವಿದೆ ಎನ್ನುವ ಮಾತನ್ನು ಮೆಹ್ತಾ ಈ ಹಿಂದೆ ನುಡಿದಿದ್ದರು.

Recommended Video

Bengaluru's iskon temple shut down | Temples shut down in bangalore | Bengaluru | Karnataka

ಈ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿ, ಅದರಲ್ಲಿ ಮೆಹ್ತಾ ಹೇಳಿರುವುದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ. "ಸೆಪ್ಟಂಬರ್ 2019ರಲ್ಲೇ ಮುಂದೆ ಎದುರಾಗಬಹುದಾದ ವಿಪತ್ತಿನ ಬಗ್ಗೆ ನಾನು ವಿವರಿಸಿದ್ದೆ. ಡಿಸೆಂಬರ್ 26, ಸೂರ್ಯಗ್ರಹಣದ ನಂತರ, ಮನುಷ್ಯ ಅಥವಾ ಪ್ರಕೃತಿಯಿಂದ ತೊಂದರೆಯಾಗಬಹುದು ಎಂದು ಹೇಳಿದ್ದೆ".

ಕೊರೊನಾ ವೈರಸ್: ಮುಂದಿನ ಭವಿಷ್ಯ, ಪರಿಹಾರ ನುಡಿದ ರವಿಶಂಕರ್ ಗುರೂಜಿಕೊರೊನಾ ವೈರಸ್: ಮುಂದಿನ ಭವಿಷ್ಯ, ಪರಿಹಾರ ನುಡಿದ ರವಿಶಂಕರ್ ಗುರೂಜಿ

"ಕೊರೊನಾ ವೈರಸ್ ಇದರಲ್ಲಿ ಒಂದು. ಡಿಸೆಂಬರ್ 30ರಿಂದ ಈ ವೈರಸ್ ನಿಂದ ಜನ ಸಾವನ್ನಪ್ಪುತ್ತಿರುವ ಮಾಹಿತಿ ಚೀನಾದಿಂದ ಬರಲಾರಂಭಿಸಿತು. ಅಲ್ಲಿಂದ ಈ ವೈರಸ್, ಸಾಂಕ್ರಾಮಿಕವಾಗಿ ವಿಶ್ವದೆಲ್ಲಡೆ ಹರಿದಾಡಲಾರಂಭಿಸಿತು".

ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯ

"ಈ ವರ್ಷದ ಜನವರಿ 24ರ ನಂತರ ಶನಿಗ್ರಹವು ಮಕರ ರಾಶಿಗೆ ಪ್ರವೇಶಿಸಿದಾಗ ಇಡೀ ವಿಶ್ವ ತಲ್ಲಣಗೊಳ್ಳಲು ಆರಂಭವಾಯಿತು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವಿನ ಸ್ಥಾನದ ಆಧಾರದ ಮೇಲೆ ವೈರಸ್ ಹುಟ್ಟುತ್ತದೆ. ಗುರು ಮತ್ತು ಕೇತುವಿನ ಹೊಂದಾಣಿಕೆಯಿಂದ ಇದು ಇನ್ನಷ್ಟು ಪ್ರಬಲವಾಗುತ್ತದೆ" ಎಂದು ಆಶಿಸ್ ಮೆಹ್ತಾ ಹೇಳಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ, ಮುಂಬೈ ಮೂಲದ ಆಶಿಸ್ ಮೆಹ್ತಾ

ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ, ಮುಂಬೈ ಮೂಲದ ಆಶಿಸ್ ಮೆಹ್ತಾ

"ರಾಹು ಈಗ ಆದ್ರಾ ನಕ್ಷತ್ರದಲ್ಲಿದ್ದರೆ, ಕೇತು ಈಗ ಧನುರಾಶಿಯಲ್ಲಿದ್ದಾನೆ. ಹದಿನೆಂಟು ವರ್ಷಗಳ ಹಿಂದೆ ರಾಶಿ ಪದ್ದತಿಯಲ್ಲಿ ಹೀಗೆ ಆಗಿತ್ತು. ಆ ವೇಳೆ ಅಮೆರಿಕಾದ ಮೇಲೆ ಉಗ್ರರ ದಾಳಿ ನಡೆದಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳಬಹುದು. ಕೊರೊನಾ ಹುಟ್ಟಿದ್ದು ಚೀನಾದಲ್ಲಿ, ಆದರೆ, ಅದೆಲ್ಲಾ ವಿಶ್ವಕ್ಕೆ ಹರಡಿದ್ದು ಗುರು ರಾಶಿಯ ಪ್ರಭಾವದಿಂದ" - ಆಶಿಸ್ ಮೆಹ್ತಾ.

ಗುರು ಮತ್ತು ಕೇತು ರಾಶಿಯ ಹೊಂದಾಣಿಕೆ

ಗುರು ಮತ್ತು ಕೇತು ರಾಶಿಯ ಹೊಂದಾಣಿಕೆ

"ಗುರು ಮತ್ತು ಕೇತು ರಾಶಿಯ ಹೊಂದಾಣಿಕೆ ಇರುವವರೆಗೆ ಕೊರೊನಾದಿಂದ ಮುಕ್ತಿ ಸಿಗುವುದು ಅಸಂಭವ. ಇದೇ ತಿಂಗಳು ಮೂವತ್ತನೇ ತಾರೀಖಿಗೆ ಗುರು ಮಕರ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಹಾಗಾಗಿ, ಇನ್ನು ಹತ್ತೆರಡು ದಿನಗಳ ನಂತರ, ಈ ವೈರಸ್ ಪ್ರಭಾವದಿಂದ ವಿಶ್ವಕ್ಕೆ ಸ್ವಲ್ಪಸ್ವಲ್ಪ ಮುಕ್ತಿ ಸಿಗಲು ಆರಂಭವಾಗುತ್ತದೆ" ಎಂದು ಮೆಹ್ತಾ ಹೇಳಿದ್ದಾರೆ.

ಕೊರೊನಾ ವೈರಸ್

ಕೊರೊನಾ ವೈರಸ್

"24.03.2020, ಮಧ್ಯಾಹ್ನ 2.58 ಗಂಟೆಯ ನಂತರ ಮಂಗಳ ರಾಶಿ, ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಹಾಗಾಗಿ, ಈ ದಿನದಿಂದ ವಿಶ್ವದ ಆವರ್ತನ ಬದಲಾಗಲು ಆರಂಭವಾಗುತ್ತದೆ. ಈ ದಿನದಿಂದ, ಕೊರೊನಾ ವೈರಸ್ ಕಾಟ ದೂರವಾಗಲು ಆರಂಭವಾಗುತ್ತದೆ. ಈ ವೈರಸ್ ನಾಶ ಮಾಡುವ ಲಸಿಕೆ ಅಂತಿಮ ಹಂತಕ್ಕೆ ಬರಬಹುದು" - ಆಶಿಸ್ ಮೆಹ್ತಾ.

ಸೂರ್ಯ ಉಚ್ಚ ರಾಶಿಯಾದ ಮೇಷ ರಾಶಿಗೆ ಏಪ್ರಿಲ್ 2020ಕ್ಕೆ ಪ್ರವೇಶಿಸಲಿದ್ದಾನೆ

ಸೂರ್ಯ ಉಚ್ಚ ರಾಶಿಯಾದ ಮೇಷ ರಾಶಿಗೆ ಏಪ್ರಿಲ್ 2020ಕ್ಕೆ ಪ್ರವೇಶಿಸಲಿದ್ದಾನೆ

"ಸೂರ್ಯ ಉಚ್ಚ ರಾಶಿಯಾದ ಮೇಷ ರಾಶಿಗೆ ಏಪ್ರಿಲ್ 2020ಕ್ಕೆ ಪ್ರವೇಶಿಸಲಿದ್ದಾನೆ. ಸೂರ್ಯ ಉಚ್ಚರಾಶಿಗೆ ಹೋಗುತ್ತಿದ್ದಂತೆಯೇ ಕೊರೊನಾ ಉಚ್ಚಾಟನೆಯಾಗಲಿದೆ. ಏಪ್ರಿಲ್ ಹತ್ತೊಂಬತ್ತರಿಂದ ಗ್ರೀಷ್ಮ ಖುತು ಆರಂಭವಾಗಲಿದೆ. ಈ ವೇಳೆಯ ನಂತರ ಕೊರೊನಾ ವೈರಸ್ ನ ಎಲ್ಲಾ ಗೊಂದಲಗಳು ಸಂಪೂರ್ಣವಾಗಿ ದೂರವಾಗಲಿದೆ" ಎಂದು ಆಶಿಸ್ ಮೆಹ್ತಾ ಹೇಳಿದ್ದಾರೆ.

English summary
Noted Astrologer, Vaasu Expert And Mumbai Based Ashish Mehta Prediction On Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X