ಸಮೀಕ್ಷೆ: ಉತ್ತರಖಂಡ, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ

Subscribe to Oneindia Kannada

ದೆಹಲಿ, ಫೆಬ್ರವರಿ 1: ಹಲವು ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾದ ಉತ್ತರಖಂಡದಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಸಮೀಕ್ಷೆಗಳು ಬೆಟ್ಟು ಮಾಡುತ್ತಿವೆ. ಆದರೆ ಸ್ಥಳೀಯ ಪತ್ರಿಕೆ ಉತ್ತರಖಂಡ್ ಪೋಸ್ಟ್ ಮಾತ್ರ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ ಎಂದಿದೆ.

ಇನ್ನು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ಹೇಳಿದೆ. ಆದರೆ ರಾಜ್ಯದಲ್ಲಿ ಉಳಿದ ಯಾರೂ ಸಮೀಕ್ಷೆ ಮಾಡಿಲ್ಲ. ಹಾಗಾಗಿ ಇದೊಂದೇ ಸಮೀಕ್ಷೆ ಚುನಾವಣೆಗೂ ಮುನ್ನ ಹೊರ ಬಿದ್ದಿದೆ.[ಉತ್ತರಖಂಡ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪ್ರತಿಷ್ಠೆಯೇ ಹೈಲೈಟ್]

ಉತ್ತರಖಂಡದಲ್ಲಿ ಅರಳಲಿದೆ ಕಮಲ

71 ಸದಸ್ಯ ಬಲದ ಉತ್ತರಖಂಡ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಇಂಡಿಯಾ ಟುಡೆ-ಆಕ್ಸಿಸ್ ಸರ್ವೆ ಹೇಳಿದೆ.

Assembly Election Survey: Uttarkhand and Manipur in BJP's hand

ಉತ್ತರಖಂಡದಲ್ಲಿ ಈ ಬಾರಿ ಬಿಜೆಪಿ 40-44 ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ 23-27 ಸ್ಥಾನಗಳನ್ನಷ್ಟೆ ಪಡೆದುಕೊಳ್ಳಬಹುದು. ಇನ್ನು ಇತರರು 1 ರಿಂದ 6 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.[ಉತ್ತರಪ್ರದೇಶ ಸರ್ವೇ: ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕಷ್ಟಕಷ್ಟ]

ಇದೇ ಮಾದರಿಯ ಸಮೀಕ್ಷೆಯನ್ನು ಎಬಿಪಿ ನ್ಯೂಸ್ ಕೂಡಾ ಮುಂದಿಟ್ಟಿದೆ. ಶೇಕಡಾ 39 ಮತಗಳನ್ನು ಪಡೆಯುವ ಮೂಲಕ ಭಾರತೀಯ ಜನತಾ ಪಕ್ಷ 32 ರಿಂದ 40 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಬಿಜೆಪಿಗೆ ಕಾಂಗ್ರೆಸ್ ತುರುಸಿನ ಸ್ಪರ್ಧೆ ನೀಡಲಿದ್ದು ಶೇಕಡಾ 36 ಮತಗಳೊಂದಿಗೆ 24-32 ಸ್ಥಾನಗಳಲ್ಲಿ ಗೆಲ್ಲಲಿದೆ. ಉಳಿದವರು 3 ರಿಂದ 9 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆಯು ಹೇಳಿದೆ.

ಆದರೆ ಸ್ಥಳೀಯ ಪತ್ರಿಕೆ ಉತ್ತರಖಂಡ್ ಪೋಸ್ಟ್ ಮಾತ್ರ ಕಾಂಗ್ರೆಸ್ ತನ್ನ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದೆ. ಅದು ಬಿಜೆಪಿ 29 ಹಾಗೂ ಕಾಂಗ್ರೆಸ್ 36 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತನ್ನ ಅಂಕಿ ಅಂಶಗಳನ್ನು ನೀಡಿದೆ.

ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ

ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ಸರಿಯಾದ ಸಮೀಕ್ಷೆಗಳೇ ನಡೆದಿಲ್ಲ. ಒಟ್ಟು 60 ಸದಸ್ಯ ಬಲದ ರಾಜ್ಯದಲ್ಲಿ ಇಂಡಿಯಾ ಟುಡೆ-ಆಕ್ಸಿಸ್ ಮಾತ್ರ ಸಮೀಕ್ಷೆ ನಡೆಸಿದ್ದು ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಹೇಳಿದೆ. ಬಿಜೆಪಿ 31-35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ 19-24 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಹಾಗೂ ಸ್ಥಳೀಯ ಎನ್.ಪಿ.ಎಫ್ (ನಾಗಾ ಪೀಪಲ್ಸ್ ಫ್ರಂಟ್ 3-5 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India Today-Axis and ABP News survey says that Uttarakhand will won by BJP. And in Manipur India Today-Axis survey predicted that BJP will come to power.
Please Wait while comments are loading...