Jharkhand Assembly Election 2024: ಜಾರ್ಖಂಡ್‌ನಲ್ಲಿ ಗುಡುಗಿದ ಬುಲ್ಡೋಜರ್ ಯೋಗಿ
Jharkhand Assemly Election 2024: ಜಾರ್ಖಂಡ್‌ನಲ್ಲಿ ನವೆಂಬರ್ 20ಕ್ಕೆ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆಯೇ ಇಂದು (ನವೆಂಬರ್ 18) ಜಮ್ತಾರದಲ್ಲಿ ಪ್ರಚಾರದ ವೇಳೆ ಯುಪಿ ಸಿಎಂ ಬುಲ್ಡೋಜರ್ ಪ್ರಯೋಗದ ಪದ ಬಳಕೆ ಮಾಡಿ ಗಮನ ಸೆಳದಿದ್ದಾರೆ.
ಇಂದು ಜಾರ್ಖಂಡ್‌ನ ಜಮ್ತಾರಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಹೇಮಂತ್ ಸೊರೇನ್ ನೇತೃತ್ವದ ಜೆಜೆಎಂ ಸರ್ಕಾರವು ಕೇಂದ್ರದ ಹಣವನ್ನು ಲೂಟಿ ಮಾಡಿದೆ. ಈ ಹಣವನ್ನು ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದರು.

ಕಾನೂನಿನ ಅಡಿಯಲ್ಲಿ ಬುಲ್ಡೋಜರ್ ಕ್ರಮವು ಸ್ವೀಕಾರಾರ್ಹವಲ್ಲ. ಒಂದು ವೇಳೆ ಕಟ್ಟಡವನ್ನು ಕೆಡವಬೇಕೆಂದರೆ, ಅದಕ್ಕೆ ಸೂಕ್ತ ಕಾರಣ ತಿಳಿಸದಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಗಷ್ಟೇ ಹೇಳಿದೆ. ಆದರೂ, ಮತ್ತೆ ಇದೇ ಅಸ್ತ್ರವನ್ನು ಬಳಕೆ ಮಾಡುವುದಾಗಿ ಯೋಗಿ ಆದಿತ್ಯನಾಥ್ ಅವರು ಜಾರ್ಖಂಡ್‌ನಲ್ಲಿ ಹೇಳಿದ್ದಾರೆ.
ಜೆಎಂಎಂ ನೇತೃತ್ವದ ಸರ್ಕಾರವು ಜಾರ್ಖಂಡ್‌ನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ಕೇಂದ್ರ ನಿಧಿಯನ್ನು ಲೂಟಿ ಮಾಡಿದೆ. ಅಲ್ಲದೆ, ಬಾಂಗ್ಲಾದೇಶಿ ವಲಸಿಗರು ಮತ್ತು ರೋಹಿಂಗ್ಯಾಗಳ ಒಳನುಸುಳುವಿಕೆಯನ್ನು ಉತ್ತೇಜಿಸಿದೆ ಎಂದು ಆರೋಪಿಸಿದರು.
ಕಳೆದ ಗುರುವಾರ ಸುಪ್ರೀಂ ಕೋರ್ಟ್ ಬುಲ್ಡೋಜರ್ ಕ್ರಮವನ್ನು ಖಂಡಿಸಿತ್ತು ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಆಗಾಗ್ಗೆ ಕಂಡುಬರುವ ಈ ಕಾರ್ಯಾವಚರಣೆಗಳನ್ನು ತಡೆಯಲು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಸುಪ್ರೀಂ ಮಾರ್ಗಸೂಚಿಗಳ ವಿವರ: ಆಸ್ತಿ ಮಾಲೀಕರಿಗೆ 15 ದಿನಗಳ ಮುಂಚೆಯೇ ಸೂಚನೆ ಇಲ್ಲದೆ, ಯಾವುದೇ ಕಟ್ಟಡಗಳನ್ನು ಉರುಳಿಸುವ ಕೆಲಸವನ್ನು ಮಾಡಬಾರದು. ಕಟ್ಟಡವನ್ನು ಕೆಡವಲು ನಿರ್ದಿಷ್ಟ ಕಾರಣಗಳನ್ನು ತಿಳಿಸಬೇಕು. ಒಂದು ವೇಳೆ ಕಟ್ಟಡ ನೆಲಸಮ ಮಾಡಿದರೆ, ಅದನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಬೇಕು. ಈ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದರೆ, ನ್ಯಾಯಾಲಯದ ನಿಂದನೆ ಆರೋಪಗಳಿಗೆ ಕಾರಣವಾಗಬಹುದು ಎಂದು ತಿಳಿಸಿತ್ತು.
ಇದೇ ರ‍್ಯಾಲಿಯಲ್ಲಿ ಮುಂದುವರೆದು ಮಾತನಾಡಿದ ಯೋಗಿ ಆದಿತ್ಯನಾಥ್, ಜಾರ್ಖಂಡ್‌ನಲ್ಲಿ "ಲ್ಯಾಂಡ್ ಜಿಹಾದ್" ಮತ್ತು "ಲವ್ ಜಿಹಾದ್"ನಲ್ಲಿ ತೊಡಗಿರುವ ನುಸುಳುಕೋರರಿಗೆ ಜೆಎಂಎಂ ನೇತೃತ್ವದ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು. ಎನ್‌ಡಿಎ ಅಧಿಕಾರಕ್ಕೆ ಬಂದರೆ ಇಂತಹವುಗಳನ್ನು ನಡೆಯಲು ಬಿಡಲಾಗುವುದಿಲ್ಲ ಎಂದು ಹೇಳಿದರು.
ಈಗಾಗಲೇ ಜಾರ್ಖಂಡ್‌ನಲ್ಲಿ ನವೆಂಬರ್ 13ರಂದು 43 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ಇನ್ನುಳಿದ ಸ್ಥಾನಗಳಿಗೆ ನವೆಂಬರ್ 20ರಂದು ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications