ಮುಸ್ಲಿಂ ಹಾಡುಗಾರ್ತಿಗೆ ಫತ್ವಾ ಹೊರಡಿಸಿಯೇ ಇರಲಿಲ್ಲ!

By: ಅನುಶಾ ರವಿ
Subscribe to Oneindia Kannada

ಬೆಂಗಳೂರು, ಮಾರ್ಚ್ 16: ಮುಸ್ಲಿಂ ಸಮುದಾಯ 16 ವರ್ಷದ ಹಾಡುಗಾರ್ತಿಯ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಆಕೆಯ ವಿರುದ್ಧ ಫತ್ವಾ ಹೊರಡಿಸಿಯೇ ಇರಲಿಲ್ಲ ಎನ್ನುತ್ತಿವೆ ತಳಮಟ್ಟದ ಮಾಹಿತಿಗಳು. [ಮುಸ್ಲಿಂ ಹಾಡುಗಾರ್ತಿಗೆ ಫತ್ವಾ ಹೊರಡಿಸಿಯೇ ಇರಲಿಲ್ಲ!]

'ಕೆಲವು ಮುಸ್ಲಿಂ ಧರ್ಮಗುರುಗಳು ಮನವಿ ಮಾಡಿಕೊಂಡಿದ್ದರಷ್ಟೆ. ಇದು ಫತ್ವಾ ಅಲ್ಲ,' ಎಂದು ಅಸ್ಸಾಂ ರಾಜ್ಯದ ಜಮೀಯತ್ ಉಲೇಮಾ ಮುಹಮ್ಮದ್ ಅಬ್ದುಲ್ ರಶೀದ್ ಕಾಶಿಮಿ ಹೇಳಿದ್ದಾರೆ. ಇದನ್ನು ಬೇಕೆಂದೇ ಫತ್ವಾ ಎಂದು ಬಿಂಬಿಸಲಾಯಿತು ಎಂದು ಅವರು ದೂರಿದ್ದಾರೆ.[ಮುಸ್ಲಿಂ ಯುವತಿಯ ಬಹಿರಂಗ ಹಾಡುಗಾರಿಕೆ ವಿರುದ್ಧ ಫತ್ವಾ]

Assam singer: A fatwa that wasn't? Pamphlet was mere appeal says, cleric

"ನಾವು ಹಾಡುಗಾರ್ತಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಮಸೀದಿ, ಮದ್ರಸಾ ಮತ್ತು ಸ್ಮಶಾನಗಳು ಇರುವ ಮುಸ್ಲಿಂ ಪ್ರದೇಶದಲ್ಲಿ ಈ ರೀತಿಯ (ಗಾಯನ) ಕಾರ್ಯಕ್ರಮ ಆಯೋಜಿಸುವುದು ಶರಿಯಾ ಸಂಪ್ರದಾಯಕ್ಕೆ ವಿರುದ್ಧ ಎಂದಷ್ಟೇ ನಮ್ಮ ಕರಪತ್ರದಲ್ಲಿ ಹೇಳಲಾಗಿತ್ತು" ಎನ್ನುತ್ತಾರೆ ಕಾಶಿಮಿ.

"ಶಾಂತಿಯುತ ವಾತಾವರಣಕ್ಕೆ ಇದು ಧಕ್ಕೆ ತರುತ್ತದೆ ಎಂಬ ಕಾರಣಕ್ಕಷ್ಟೆ ನಾವು ಮನವಿ ಮಾಡಿದೆವು. ಆದರೆ ಇದಕ್ಕೆ ಬೇರೆಯದೇ ಬಣ್ಣ ನೀಡಲಾಯಿತು," ಎಂದು ಅವರು ಹೇಳಿದ್ದಾರೆ. ನಾವು ಕರಪತ್ರದಲ್ಲಿ ಯಾವುದೇ ಕಾರಣಕ್ಕೂ ಹಾಡುಗಾರ್ತಿಯ ಹೆಸರು ಹಾಕಿಯೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

Assam singer: A fatwa that wasn't? Pamphlet was mere appeal says, cleric

ನಹೀದ್ ಅಫ್ರಿನ್ ಎಂಬ 16 ವರ್ಷದ ಗಾಯಕಿ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬುದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಶೇಷ ಏನೆಂದರೆ ಆಕೆಯ ಮೇಲೆ ಫತ್ವಾ ಹೊರಡಿಸಲಾಗಿದೆ ಎಂದೂ ಮಾಧ್ಯಮಗಳ ಮೂಲಕವೇ ಅವರ ತಂದೆಗೆ ಗೊತ್ತಾಗಿತ್ತು. ಅಲ್ಲವರೆಗೆ ಮಗಳ ಮೇಲೆ ಫತ್ವಾ ಹೊರಡಿಸಿದ್ದಾರೆ ಎಂದು ಅವರಿಗೆ ಗೊತ್ತೇ ಇರಲಿಲ್ಲವಂತೆ.

ಈಗಾಗಲೇ ಎನ್.ಡಿ.ಟಿ.ವಿ ಮಾಹಿತಿ ಖಚಿತ ಪಡಿಸದೇ ಸುದ್ದಿ ಪ್ರಸಾರ ಮಾಡಿದ್ದಕ್ಕೆ ವೀಕ್ಷಕರ ಬಳಿ ಕ್ಷಮೆ ಕೋರಿದೆ. ['ಸರಿಗಮಪ' ಸುಹಾನಳಿಗೆ ಬೇಕಿರುವುದು ಪ್ರೋತ್ಸಾಹವೇ ಹೊರತು, ಪ್ರಚಾರವಲ್ಲ!]

ಗಾಯಕಿ ಮೇಲೆ ಫತ್ವಾ ಹೊರಡಿಸಲಾಗಿದೆ ಎಂಬ ಮಾಹಿತಿಗಳು ಮಾಧ್ಯಮಗಳ ಮೂಲಕ ಹೊರ ಬೀಳುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಹಾಗೂ ಗಾಯಕ ವಿಶಾಲ ದದ್ಲಾನಿ ಮೊದಲಾದ ಖ್ಯಾತನಾಮರು ಗಾಯಕಿ ಬೆಂಬಲಕ್ಕೆ ಧಾವಿಸಿದ್ದರು. ಆದರೆ ಇದೀಗ ನಾವು ಫತ್ವಾ ಹೊರಡಿಸಿಯೇ ಇಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಸ್ಪಷ್ಟಪಡಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After all the outrage that was witnessed over a 'Fatwa' issued against a 16-year-old singer in Assam, it has been clarified that the piece of paper that sparked the outrage was a mere appeal by some Muslim clerics and not fatwas as claimed.
Please Wait while comments are loading...