
ಅಸ್ಸಾಂ, ಮೇಘಾಲಯ ಅಂತಾರಾಜ್ಯ ಗಡಿವಿವಾದ: ಸಮಸ್ಯೆ ಇತ್ಯರ್ಥಕ್ಕೆ ಯತ್ನ
ಗುವಾಹಟಿ, ಆಗಸ್ಟ್ 22: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಆರು ಪ್ರದೇಶಗಳಲ್ಲಿ ತಮ್ಮ ತಮ್ಮ ರಾಜ್ಯದಲ್ಲಿ ಬಾಕಿಯಾಗಿರುವ ಅಂತರರಾಜ್ಯ ಗಡಿ ವಿವಾದವನ್ನು ಪರಿಹರಿಸುವ ಕೆಲಸವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ.
ಈ ಆರು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಈ ವರ್ಷದ ಆರಂಭದಲ್ಲೇ ಎರಡು ಈಶಾನ್ಯ ರಾಜ್ಯಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಬಗ್ಗೆ ಉಳಿದಿರುವ ಆರು ವಿವಾದಿತ ಸೈಟ್‌ಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ಮೇಘಾಲಯದ ಕಡೆಯಿಂದ ಈ ಪ್ರದೇಶಗಳು ಮೂರು ಜಿಲ್ಲೆಗಳಲ್ಲಿ ನೆಲೆಗೊಂಡಿವೆ. ಕ್ಯಾಬಿನೆಟ್ ಸಚಿವರ ನೇತೃತ್ವದಲ್ಲಿ ಮೂರು ಪ್ರಾದೇಶಿಕ ಸಮಿತಿಗಳನ್ನು (ಆರ್‌ಸಿ) ರಚಿಸಲಾಗುವುದು. ಅದನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯಗಳು ಬದ್ಧವಾಗಿವೆ ಎಂದು ಅಸ್ಸಾ ಸಿಎಂ ಶರ್ಮಾ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚೀನಾ ನೆಲದಲ್ಲಿ ನಿಂತು ಲಡಾಖ್ ಬಗ್ಗೆ ಉಲ್ಲೇಖಿಸಿದ ಜೈಶಂಕರ್
ರಚಿಸಲಾಗುವ ಮೂರು ಪ್ರಾದೇಶಿಕ ಸಮಿತಿಗಳಿಗೆ 15 ದಿನಗಳಲ್ಲಿ ಸೂಚನೆ ನೀಡಲಾಗುವುದು. ಬಳಿಕ ಅವರು ತಕ್ಷಣವೇ ಸ್ಥಳ ಭೇಟಿಯನ್ನು ಪ್ರಾರಂಭಿಸುತ್ತಾರೆ. ಎರಡು ರಾಜ್ಯಗಳ ನಡುವಿನ ಹಿಂದಿನ ಚರ್ಚೆಗಳಲ್ಲಿ ರೂಪಿಸಲಾದ ವಿಶಾಲ ಪ್ರದೇಶ ಪರಿಧಿಯ ಪ್ರಕಾರ ವಿವಾದವನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು.
ಸಭೆಯ ನಂತರ ಟ್ವೀಟ್ ಮಾಡಿರುವ ಅಸ್ಸಾಂ ಸಿಎಂ ಶರ್ಮಾ ನನ್ನ ಮೇಘಾಲಯದ ಮುಖ್ಯಮಂತ್ರಿ ಗೆಳೆಯ ಕಾನ್ರಾಡ್ ಕೆ ಸಂಗ್ಮಾ ಅವರೊಂದಿಗಿನ ನನ್ನ 9ನೇ ಸಭೆಯಲ್ಲಿ ಆರು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಯಿತು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮೇಘಾಲಯದ ಸಿಎಂ ಕಾನ್ರಾಡ್ ಕೆ ಸಂಗ್ಮಾ ಪ್ರಾದೇಶಿಕ ಸಮಿತಿಗಳು ರೂಪುಗೊಂಡ ನಂತರ ವಿವಾದಿತ ಸ್ಥಳಗಳಿಗೆ ಭೇಟಿ ಮತ್ತು ಸಾರ್ವಜನಿಕ ಸಮಾಲೋಚನೆಯನ್ನು ಸಹ ಪ್ರಾರಂಭಿಸಲಾಗುತ್ತದೆ. ಜನರಿಗೆ ವಿಶ್ವಾಸವನ್ನು ನೀಡುವ ಸಲುವಾಗಿ ಮತ್ತು ನಮ್ಮ ಗಡಿ ಸಮಸ್ಯೆಯನ್ನು ಪರಿಹರಿಸಲು ಬದ್ಧತೆಯ ಉತ್ಸಾಹದಲ್ಲಿ ಕೆಲಸ ಮಾಡಲಾಗುತ್ತದೆ. ಅಸ್ಸಾಂನ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಹಾಗೂ ನಾನು ಕೆಲವು ಪ್ರದೇಶಗಳಿಗೆ ಭೇಟಿ ಮಾಡುತ್ತೇನೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಒಂದಿಂಚೂ ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡಲ್ಲ: ಶಿವರಾಜ್ ಪಾಟೀಲ್

ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ
ಮಾರ್ಚ್ 29 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನವದೆಹಲಿಯ 12 ವಿವಾದಿತ ಪ್ರದೇಶಗಳೊಂದಿಗೆ ಐದು ದಶಕಗಳಷ್ಟು ಹಳೆಯದಾದ ಉಭಯ ರಾಜ್ಯಗಳ ಆರು ಗಡಿ ವಿವಾದವನ್ನು ಕೊನೆಗೊಳಿಸುವ ತಿಳಿವಳಿಕೆ ಪತ್ರಕ್ಕೆ ಉಭಯ ರಾಜ್ಯಗಳು ಸಹಿ ಹಾಕಿದ್ದವು. ಉಭಯ ರಾಜ್ಯಗಳು ರಚಿಸಿದ ಪ್ರಾದೇಶಿಕ ಸಮಿತಿಗಳ ಶಿಫಾರಸುಗಳು ಹಾಗೂ ನಾಗರಿಕ ಸಮಾಜ ಮತ್ತು ರಾಜಕೀಯ ಪಕ್ಷಗಳೊಂದಿಗೆ ನಡೆಸಿದ ಸಮಾಲೋಚನೆಗಳ ಆಧಾರದ ಮೇಲೆ ಒಪ್ಪಂದಕ್ಕೆ ಬರಲಾಗಿತ್ತು.

ಎರಡನೇ ಹಂತದ ಪ್ರದೇಶಗಳು ಸ್ವಲ್ಪ ಸಂಕೀರ್ಣ
ಮೊದಲ ಹಂತದಂತೆಯೇ ಎರಡನೇ ಹಂತವೂ ಸುಗಮವಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಮತ್ತು ಎರಡು ಕಡೆಯ ನಡುವೆ ಒಮ್ಮತದ ರೀತಿಯ ನಿರ್ಣಯವನ್ನು ನಾವು ತೆಗೆದುಕೊಳ್ಳುತ್ತೇವೆ. ಅಸ್ಸಾಂನ ಕಮ್ರೂಪ್ ಜಿಲ್ಲೆಯ ಲ್ಯಾಂಪಿ ಪ್ರದೇಶಗಳು ಮತ್ತು ಕರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿ (ಕೆಎಎಸಿ) ಅಡಿಯಲ್ಲಿ ಭಾಗಗಳನ್ನು ಒಳಗೊಂಡಿರುವ ಕಾರಣ ಮೊದಲ ಹಂತಕ್ಕೆ ಹೋಲಿಸಿದರೆ ಎರಡನೇ ಹಂತದಲ್ಲಿ ಒಳಗೊಂಡಿರುವ ಪ್ರದೇಶಗಳು ಸ್ವಲ್ಪ ಸಂಕೀರ್ಣ. ಆ ಭಾಗಕ್ಕೆ ರಚಿಸಲಾಗಿರುವ ಪ್ರಾದೇಶಿಕ ಸಮಿತಿಯಲ್ಲಿ ಕೆಎಎಸಿ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ಅಸ್ಸಾಂ ಸಿಎಂ ಶರ್ಮಾ ಹೇಳಿದರು.

ವಿವಾದ ಇತ್ಯರ್ಥ್ಯಕ್ಕೆ ಉಭಯ ರಾಜ್ಯಗಳ ಬದ್ಧತೆ
ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಗಳು ಪ್ರಾದೇಶಿಕ ಸಮಿತಿಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಾರೆ. ವಿವಾದಗಳನ್ನು ಸೌಹಾರ್ದಯುತವಾಗಿ ಮತ್ತು ತೃಪ್ತಿಕರವಾಗಿ ಪರಿಹರಿಸಲು ಉಭಯ ರಾಜ್ಯಗಳ ಬದ್ಧತೆ ಇದೆ. ಮೊದಲ ಹಂತದಲ್ಲಿ ಅಂತಿಮ ಇತ್ಯರ್ಥಕ್ಕೆ ತೆಗೆದುಕೊಳ್ಳಲಾದ ಆರು ಪ್ರದೇಶಗಳೆಂದರೆ ತಾರಾಬರಿ (4.69 ಚ.ಕಿ.ಮೀ), ಗಿಜಾಂಗ್ (13.53 ಚ.ಕಿ.ಮೀ), ಹಾಹಿಂ (3.51 ಚ.ಕಿ.ಮೀ), ಬೊಕ್ಲಪಾರಾ (1.57 ಚ.ಕಿ.ಮೀ), ಖಾನಪಾರಾ-ಪಿಲಂಕಾಟಾ (2.29 ಚ.ಕಿ.ಮೀ. ) ಮತ್ತು ರಟಾಚೆರಾ (11.20 ಚದರ ಕಿ.ಮೀ). ಆಗಿದೆ ಎಂದು ಸಿಎಂ ಶರ್ಮಾ ಹೇಳಿದರು.

ಮೇಘಾಲಯ 18.33 ಚ.ಕಿ.ಮೀ ವಿವಾದಿತ ಪ್ರದೇಶ
ಒಪ್ಪಂದದ ಪ್ರಕಾರ, ಮೊದಲ ಹಂತದಲ್ಲಿ ನಿರ್ಣಯಕ್ಕಾಗಿ ತೆಗೆದುಕೊಳ್ಳಲಾದ 36.79 ಚದರ ಕಿ.ಮೀ ಪ್ರದೇಶದಲ್ಲಿ, ಅಸ್ಸಾಂ 18.46 ಚ.ಕಿ.ಮೀ ಮತ್ತು ಮೇಘಾಲಯ 18.33 ಚ.ಕಿ.ಮೀ ವಿವಾದಿತ ಪ್ರದೇಶ. ಹಂತ 1 ರಲ್ಲಿನ ವ್ಯತ್ಯಾಸಗಳ 6 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ಮತ್ತು ಗಡಿಗಳ ಗುರುತಿಸುವಿಕೆಯೊಂದಿಗೆ ಪ್ರಕ್ರಿಯೆಯು ಮುಂದುವರಿಯುತ್ತಿದೆ. ಮೇಘಾಲಯ ಮತ್ತು ಅಸ್ಸಾಂ ಸರ್ಕಾರಗಳು ಸಮೀಕ್ಷೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿವೆ ಎಂದು ಮೇಘಾಲಯ ಸಿಎಂ ಸಂಗ್ಮಾ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.