• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದ ಮತ್ತೊಂದು ರಾಜ್ಯ

|
Google Oneindia Kannada News

ಗುವಾಹಟಿ, ಅ.23: ದೀಪಾವಳಿಗೆ ಉಡುಗೊರೆ ಎಂಬಂತೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಘೋಷಿಸಿದ ರಾಜ್ಯಗಳ ಪಟ್ಟಿಗೆ ಅಸ್ಸಾಂ ಕೂಡ ಸೇರಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸರ್ಕಾರಿ ಉದ್ಯೋಗಿಗಳಿಗೆ ಶೇಕಡಾ 4 ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಘೋಷಿಸಿದ್ದಾರೆ.

ಈ ವರ್ಷದ ಜುಲೈ 1 ರಿಂದ ಜಾರಿಗೆ ಬರಲಿದ್ದು, ಈ ತಿಂಗಳ ವೇತನದೊಂದಿಗೆ ಪಾವತಿಸಲಾಗುವುದು ಎಂದು ತಮ್ಮ ಅಧಿಕೃತ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

7th Pay Commission: ದೀಪಾವಳಿ ಮುನ್ನವೇ ನೌಕರರಿಗೆ ಬಡ್ತಿ, ಮೌಲ್ಯಮಾಪನದ ಉಡುಗೊರೆ?7th Pay Commission: ದೀಪಾವಳಿ ಮುನ್ನವೇ ನೌಕರರಿಗೆ ಬಡ್ತಿ, ಮೌಲ್ಯಮಾಪನದ ಉಡುಗೊರೆ?

"ರಾಜ್ಯ ಸರ್ಕಾರಿ ನೌಕರರು, ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ 4% ಹೆಚ್ಚುವರಿ ತುಟ್ಟಿಭತ್ಯೆಯನ್ನು ಘೋಷಿಸಲು ಸಂತೋಷವಾಗಿದೆ. ಜುಲೈ 1, 2022 ಇದು ಜಾರಿಗೆ ಬರಲಿದ್ದು, ಈ ತಿಂಗಳ ಸಂಬಳದೊಂದಿಗೆ ಪಾವತಿಸಬೇಕು"ಎಂದಿದ್ದಾರೆ.

ಮುಂದುವರಿದು, "ಇದು ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದೆ ಎಂದು ಭಾವಿಸುತ್ತೇವೆ. ಶುಭ ಮತ್ತು ಸಂತೋಷದ ದೀಪಾವಳಿಗೆ ನನ್ನ ಶುಭಾಶಯಗಳು" ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಇತ್ತಿಚೆಗೆ ಅಸ್ಸಾಂ ಸರ್ಕಾರವು ರಾಜ್ಯದ ಗೃಹ ರಕ್ಷಕರ ದೈನಂದಿನ ಕರ್ತವ್ಯ ಭತ್ಯೆಯನ್ನು 300 ರೂ.ನಿಂದ 767 ರೂ.ಗೆ ಹೆಚ್ಚಿಸಿದೆ. ಇದರ ಜೊತೆಗೆ ಗೃಹ ರಕ್ಷಕರ ಮಾಸಿಕ ವೇತನವು 23,010 ರೂ ಆಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

"ಅಸ್ಸಾಂ ಪೊಲೀಸ್‌ನ ಪ್ರಮುಖ ಅಂಗವಾದ ಗೃಹರಕ್ಷಕರು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸುಮಾರು 24,000 ಗೃಹ ರಕ್ಷಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು, ಅವರ ದೈನಂದಿನ ವೇತನವನ್ನು ಈಗಿರುವ 300 ರೂ.ಗಳಿಂದ 767 ರೂ.ಗೆ ಹೆಚ್ಚಿಸಲು ನಾವು ಅನುಮೋದನೆ ನೀಡಿದ್ದೇವೆ, ಹೀಗಾಗಿ ಅವರ ಮಾಸಿಕ ವೇತನವನ್ನು 23,010 ರೂಪಾಯಿ ಆಗಿದೆ" ಎಂದು ತಿಳಿಸಿದೆ.

Assam CM Announce DA Hike For Govt Employees Ahead Of Deepavali

7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಆಯಾ ರಾಜ್ಯಗಳ ವೇತನ ಆಯೋಗದ ಶಿಫಾರಸ್ಸನ್ನು ಪರಿಗಣಿಸಿ, ಸಂಬಳ, ಡಿಎ, ಭತ್ಯೆ ಹೆಚ್ಚಳ ಮಾಡಲಾಗುತ್ತಿದೆ. ಛತ್ತೀಸ್‌ಗಢ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್, ದೆಹಲಿ, ಒಡಿಶಾ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ದೀಪಾವಳಿಗೆ ಮುಂಚಿತವಾಗಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ.

ಕಳೆದ ತಿಂಗಳು, ಕೇಂದ್ರ ಸಚಿವ ಸಂಪುಟವು ಜುಲೈ 1, 2022 ರಿಂದ 41.85 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ.

English summary
Assam Chief Minister Himanta Biswa Sarma announced 4 per cent dearness allowance hike to government employees. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X