ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಚುನಾವಣೆ: ನಾಗರಿಕ ನೋಂದಣಿಯಲ್ಲಿ ಹೆಸರಿಲ್ಲದಿದ್ದರೂ ಮತದಾನ

|
Google Oneindia Kannada News

ದಿಸ್ಪುರ್, ಜನವರಿ.20: ಅಸ್ಸಾಂ ವಿಧಾನಸಭಾ ಚುನಾವಣೆ-2021ರ ಹೊಸ್ತಿಲಿನಲ್ಲೇ ಚುನಾವಣಾ ಆಯೋಗವು ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಅಸ್ಸಾಂ ನಾಗರಿಕ ನೋಂದಣಿಯಲ್ಲಿ ಹೆಸರು ದಾಖಲಿಸಿಲ್ಲ. ಹೀಗಿದ್ದೂ ಕೂಡಾ ರಾಜ್ಯದ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಹೊಂದಿದ್ದರೆ ಅಂಥವರು ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಆಯೋಗ ತಿಳಿಸಿದೆ.

2021ರ ಅಸ್ಸಾಂ ವಿಧಾನಸಭಾ ಚುನಾವಣಾ ಸಿದ್ಧತೆಗಳ ಪರಾಮರ್ಶೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರ ತಂಡವು ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿತ್ತು. ತದನಂತರ ಬುಧವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವುABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವು

ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಸಾಮಾಜಿಕ ಅಂತರ ಸೇರಿದಂತೆ ಕೆಲವು ನಿಯಮಗಳನ್ನು ಪರಿಷ್ಕರಿಸಲಾಗಿದೆ. ಒಂದು ಚುನಾವಣಾ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸುವ ಮತದಾರರ ಸಂಖ್ಯೆಯನ್ನು 1500 ರಿಂದ 1000ಕ್ಕೆ ತಗ್ಗಿಸಲಾಗಿದೆ. ರಾಜ್ಯದಲ್ಲಿ ಇದರಿಂದ ಮತದಾನ ಕೇಂದ್ರಗಳ ಸಂಖ್ಯೆ 33000ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆಯೋಗವು ಮಾಹಿತಿ ನೀಡಿದೆ.

Assam Assembly Elections 2021: People Excluded In NRC List Can Be Allowed To Vote, Says EC

ಅಸ್ಸಾಂನಲ್ಲಿ ಚುನಾವಣೆಗೆ ಆಯೋಗದ ಸಭೆ:

ಕಳೆದ ಜನವರಿ.18ರ ಸೋಮವಾರವೇ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ನೇತೃತ್ವದ ತಂಡವು ಅಸ್ಸಾಂಗೆ ಭೇಟಿ ನೀಡಿತ್ತು. ಖಾಸಗಿ ಹೋಟೆಲ್ ವೊಂದರಲ್ಲಿ ಅಸ್ಸಾಂನ ಚುನಾವಣಾ ಆಯೋಗದ ಮುಖ್ಯಸ್ಥ ನಿತಿನ್ ಖಾಡೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಿಇಸಿ ಮುಖ್ಯಸ್ಥ ಸುನಿಲ್ ಅರೋರಾ ಸಭೆ ನಡೆಸಿದ್ದರು. ಅಲ್ಲದೇ ಕೇಂದ್ರ ಆಯೋಗದ ತಂಡವು ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಚುನಾವಣಾ ಅಧಿಕಾರಿಗಳು, ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿತು.

ಕೇಂದ್ರ ಚುನಾವಣಾ ಆಯೋಗದ ತಂಡದಲ್ಲಿದ್ದ ಸದಸ್ಯರು:

ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ನೇತೃತ್ವದ ತಂಡದಲ್ಲಿ ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಮತ್ತು ರಾಜೀವ್ ಕುಮಾರ್. ಮಹಾನಿರ್ದೇಶಕ ಧರ್ಮೇಂದರ್ ಶರ್ಮಾ, ಚುನಾವಣಾ ಉಪ-ಆಯುಕ್ತ ಚಂದ್ರಭೂಷಣ್ ಕುಮಾರ್, ಸೀನಿಯರ್ ಪ್ರಿನ್ಸಿಪಲ್ ಸೆಕ್ರೆಟರಿ ನರೇಂದ್ರ ಎನ್ ಭೂತೋಲಿಯಾ, ಡೈರೆಕ್ಟರ್ ಆಫ್ ಎಕ್ಸ್ ಪೆಂಡಿಚರ್ ಪಂಕಜ್ ಶ್ರೀವಾಸ್ತವ್ ಮತ್ತು ಇವಿಎಂ ಕನ್ಸಲ್ಟೆಂಟ್ ವಿಪಿನ್ ಕತಾರಾ ಸೇರಿದ್ದಾರೆ.

ಅಸ್ಸಾಂನಲ್ಲಿ ಪ್ರಸ್ತುತ ಸರ್ಕಾರದ ಅವಧಿಯು 2021ರ ಮೇ ತಿಂಗಳಿಗೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ 126 ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗವು ಸಿದ್ಧತೆ ನಡೆಸುತ್ತಿದೆ.

English summary
Assam Assembly Elections 2021: People Excluded In NRC List Can Be Allowed To Vote, Says EC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X