ಗುರ್ ಗಾಂವ್ ನಲ್ಲಿ ಮನೆಯಲ್ಲಿಯೇ ಎಎಸ್ ಐ ಬರ್ಬರ ಹತ್ಯೆ
ಗುರ್ ಗಾಂವ್, ಸೆಪ್ಟೆಂಬರ್ 19: ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬಾಲಕನ ಕೊಲೆಯ ಘಟನೆಯಿಂದ ಸುದ್ದಿಯಲ್ಲಿದ್ದ ಗುರ್ ಗಾಂವ್ ಇದೀಗ ಮತ್ತೆ ಸುದ್ದಿಯಲ್ಲಿರುವುದು ಎಎಸ್ ಐ ಒಬ್ಬರ ಕೊಲೆಯಿಂದ.
ಗುರ್ ಗಾಂವ್ ಠಾಣೆಯ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ನರೇಶ್ ಯಾದವ್ ಎಂಬುದದವರನ್ನು ಅವರ ಮನೆಯಲ್ಲಿಯೆ ಗುಂಡಿಕ್ಕಿ ಸಾಯಿಸಲಾಗಿದೆ. ಕೊಲೆಗಾರರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಕೊಲೆ ಮಾಡುವುದಕ್ಕೆ ಇದ್ದ ಉದ್ದೇಶವೂ ಪತ್ತೆಯಾಗಿಲ್ಲ.

ಕೊಲೆಯ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications