ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರುಖ್‌ ಖಾನ್ ಪುತ್ರನ ಪ್ರಕರಣದಲ್ಲಿ ಎನ್‌ಸಿಬಿಯ ಅಕ್ರಮಗಳು; ವರದಿ ಬಹಿರಂಗ

|
Google Oneindia Kannada News

ಮುಂಬೈ, ಅ.19: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಡ್ರಗ್ಸ್ ಆನ್‌ಕ್ರೂಸ್ ಪ್ರಕರಣದ ತನಿಖೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಆಂತರಿಕ ವರದಿ ಹೇಳಿದೆ. ತಂಡದ ಏಳರಿಂದ ಎಂಟು ಅಧಿಕಾರಿಗಳ ಅನುಮಾನಾಸ್ಪದ ವರ್ತನೆಗಳ ಬಗ್ಗೆ ಬಹಿರಂಗ ಪಡಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ (24) ಬ್ಯೂರೋದ ಮಾಜಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ತಂಡ ಕಾರ್ಡೆಲಿಯಾ ಕ್ರೂಸ್ ಶಿಪ್ ಡ್ರಗ್ ಪ್ರಕರಣದಲ್ಲಿ ಬಂಧಿಸಿತ್ತು.

ಆರ್ಯನ್ ಕೇಸ್: ಜಾತಿ ವಿಚಾರಣಾ ಸಮಿತಿಯಿಂದ ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್ಆರ್ಯನ್ ಕೇಸ್: ಜಾತಿ ವಿಚಾರಣಾ ಸಮಿತಿಯಿಂದ ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್

ಆರ್ಯನ್ ಖಾನ್ ಪ್ರಕರಣದ ನಿರ್ವಹಣೆಯಲ್ಲಿ ಅಧಿಕಾರಿಗಳು ನಡೆಸಿದ ಅವ್ಯವಹಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್‌ಸಿಬಿ ರಚಿಸಿರುವ ವಿಶೇಷ ತನಿಖಾ ತಂಡ ಅಥವಾ ಎಸ್‌ಐಟಿ ತನ್ನ ವಿಜಿಲೆನ್ಸ್ ವರದಿಯನ್ನು ದೆಹಲಿಯಲ್ಲಿರುವ ತನ್ನ ಕೇಂದ್ರ ಕಚೇರಿಗೆ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯೂರೋದ ಮುಖ್ಯ ಅಧಿಕಾರಿ, ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್, 3,000 ಪುಟಗಳ ಆಂತರಿಕ ವರದಿಯನ್ನು ಎನ್‌ಸಿಬಿ ಮಹಾನಿರ್ದೇಶಕ ಸತ್ಯ ನಾರಾಯಣ ಪ್ರಧಾನ್ ಅವರಿಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ವಿಚಾರಣೆಯ ವಿವರಗಳನ್ನು ಮತ್ತು ಅದರ ತೀರ್ಮಾನಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಕನಿಷ್ಠ ಏಳು ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು!

ಕನಿಷ್ಠ ಏಳು ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು!

ಹೆಸರು ಹೇಳಲು ಇಚ್ಚಿಸದ ಬ್ಯೂರೋದ ಹಿರಿಯ ಅಧಿಕಾರಿಯೊಬ್ಬರು, ವರದಿಯು "ಕನಿಷ್ಠ ಏಳು ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮವನ್ನು ಶಿಫಾರಸು ಮಾಡಿದೆ" ಎಂದು ಮಾಹಿತಿ ನೀಡಿದ್ದಾರೆ.

ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಸೇರಿದಂತೆ ಸುಮಾರು 65 ಜನರ ಹೇಳಿಕೆಗಳನ್ನು ದಾಖಲಿಸಿದ ನಂತರ ವಿಜಿಲೆನ್ಸ್ ಇಲಾಖೆಯ ವರದಿಯನ್ನು ಸಂಗ್ರಹಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಈ ವರದಿಯು ಡ್ರಗ್ಸ್ ಪತ್ತೆ ಪ್ರಕರಣದ ತನಿಖೆಯ ಕಾರ್ಯವಿಧಾನದಲ್ಲಿ ಹಲವು ಲೋಪಗಳನ್ನು ಕಂಡುಹಿಡಿದಿದೆ. ಇದಲ್ಲದೆ ಏಜೆನ್ಸಿಯ ಮುಂಬೈ ವಲಯ ಕಚೇರಿಯ ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡೆ ಅವರು ತನಿಖೆ ನಡೆಸಿದ ಇತರ ಪ್ರಕರಣಗಳಲ್ಲಿಯ ಲೋಪಗಳನ್ನು ಕಂಡುಹಿಡಿದಿದೆ.

28 ದಿನಗಳು ಜೈಲಿನಲ್ಲಿದ್ದ ಶಾರುಖ್ ಪುತ್ರ ಆರ್ಯನ್ ಖಾನ್

28 ದಿನಗಳು ಜೈಲಿನಲ್ಲಿದ್ದ ಶಾರುಖ್ ಪುತ್ರ ಆರ್ಯನ್ ಖಾನ್

ಅಕ್ಟೋಬರ್ 2, 2021 ರಂದು, ಸಮೀರ್ ವಾಂಖೆಡೆ ಮತ್ತು ಎನ್‌ಸಿಬಿ ಅಧಿಕಾರಿಗಳ ತಂಡವು ಕಾರ್ಡೆಲಿಯಾ ಎಂಬ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತು. ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ 20 ಜನರನ್ನು ಬಂಧಿಸಲಾಗಿತ್ತು. ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆಯುವ ಮೊದಲು 28 ದಿನಗಳ ಕಾಲ ಆರ್ಯನ್ ಖಾನ್ ಜೈಲಿನಲ್ಲಿದ್ದರು.

ಮೇ ತಿಂಗಳಲ್ಲಿ, ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC), ಸಮೀರ್ ವಾಂಖೆಡೆ ಅವರನ್ನು ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾನಿರ್ದೇಶಕರ ಕಚೇರಿಗೆ (DGTS) ವರ್ಗಾಯಿಸಿತು.

ಆರ್ಯನ್ ಖಾನ್‌ನಿಂದ ಹಣ ವಸೂಲಿ ಮಾಡಲು ಪ್ರಯತ್ನ; ಆರೋಪ

ಆರ್ಯನ್ ಖಾನ್‌ನಿಂದ ಹಣ ವಸೂಲಿ ಮಾಡಲು ಪ್ರಯತ್ನ; ಆರೋಪ

ಪ್ರಕರಣದಲ್ಲಿ ಆರ್ಯನ್ ಖಾನ್‌ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳು ಬಂದವು. ನಂತರ ಸಮೀರ್ ವಾಂಖೆಡೆ ತಂಡವು ನಡೆಸಿದ ಸಂಪೂರ್ಣ ಪ್ರಕರಣ ಮತ್ತು ಆರಂಭಿಕ ಬಂಧನಗಳನ್ನು ಎನ್‌ಸಿಬಿಯ ಅಂದಿನ ಡಿಡಿಜಿ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಮರು ತನಿಖೆ ನಡೆಸಿತು. ಮುಂಬೈ ಎನ್‌ಸಿಬಿ ತಂಡದ ಕ್ರಮವು ಅನೇಕ ಗಂಭೀರ ಅಕ್ರಮಗಳನ್ನು ಹೊಂದಿದೆ. ತಂಡವು ಆರ್ಯನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

ಮಾರ್ಚ್‌ನಲ್ಲಿ ಸಲ್ಲಿಸಲಾದ ವಿಶೇಷ ವರದಿಯಲ್ಲಿ, ಎನ್‌ಸಿಬಿಯ ಮುಂಬೈ ಘಟಕದ ಆರೋಪಗಳಿಗೆ ವಿರುದ್ಧವಾಗಿ, ಆರ್ಯನ್ ಖಾನ್ ಎಂದಿಗೂ ಡ್ರಗ್ಸ್ ಹೊಂದಿರಲಿಲ್ಲ ಎಂದು ಎಸ್‌ಐಟಿ ವರದಿ ಮಾಡಿದೆ.

ಸಾಕ್ಷಿಯಿಲ್ಲ ಎಂದು ಎಲ್ಲಾ ಆರೋಪಗಳಿಂದ ಆರ್ಯನ್ ಖಾನ್ ಬಿಡುಗಡೆ

ಸಾಕ್ಷಿಯಿಲ್ಲ ಎಂದು ಎಲ್ಲಾ ಆರೋಪಗಳಿಂದ ಆರ್ಯನ್ ಖಾನ್ ಬಿಡುಗಡೆ

ಕ್ರೂಸ್ ಹಡಗಿನ ಮೇಲಿನ ದಾಳಿಯನ್ನು ಕಡ್ಡಾಯವಾಗಿ ವಿಡಿಯೋ ರೆಕಾರ್ಡ್ ಮಾಡಿಲ್ಲ. ಈ ಪ್ರಕರಣದಲ್ಲಿ ಬಂಧಿತರಾದ 20 ಆರೋಪಿಗಳಿಂದ ವಶಪಡಿಸಿಕೊಂಡ ಡ್ರಗ್ಸ್ ಒಂದೇ ವಸೂಲಿ ಎಂದು ತೋರಿಸಲಾಗಿದೆ.

ಮುಂಬೈನ ಗ್ರೀನ್ ಗೇಟ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಲು ಸಮೀರ್ ವಾಂಖೆಡೆ ಅಕ್ಟೋಬರ್ 2 ರ ರಾತ್ರಿ ಅಧಿಕಾರಿಗಳು ಮತ್ತು ಕೆಲವು ಸಾಕ್ಷಿಗಳನ್ನು ಕಡೆದುಕೊಂಡು ಹೋಗಿದ್ದರು. ದಾಳಿ ಬಳಿಕ ಹಡಗಿನಲ್ಲಿದ್ದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಟಾಸಿ) ಮಾತ್ರೆಗಳು ಮತ್ತು 1.33 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು.

20 ಜನರನ್ನು ಬಂಧಿಸಿದ ಏಳು ತಿಂಗಳ ನಂತರ, ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಸಾಕಷ್ಟು ಸಾಕ್ಷಿ ನೀಡಲು ಸಾಧ್ಯವಾಗಲಿಲ್ಲ ಎಂದು ಎನ್‌ಸಿಬಿ ಆರ್ಯನ್ ಖಾನ್ ಮತ್ತು ಇತರ ಐವರನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿತು. ಪ್ರಕರಣದಲ್ಲಿ 14 ಜನರ ಮೇಲೆ ಆರೋಪ ಹೊರಿಸಿತು.

English summary
Aryan Khan case: Narcotics Control Bureau (NCB) vigilance department has found suspicious actions of Sameer Wankhede's team in in drugs-on-cruise case. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X