ದೆಹಲಿ ಮದ್ಯ ಹಗರಣ: ಕೇಜ್ರಿವಾಲ್‌ ಜಾಮೀನಿಗೆ ತಾತ್ಕಾಲಿಕ ತಡೆ

ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಮುಖಭಂಗ ಎದುರಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ವಿಚಾರದಲ್ಲಿ ದಿನವಿಡೀ ನಡೆದ ವಿಚಾರಣೆಯ ನಂತರ ದೆಹಲಿ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಗುರುವಾರ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್‌ಗೆ ರೋಸ್ ಅವೆನ್ಯೂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿತ್ತು. ಶುಕ್ರವಾರ, ಕೇಜ್ರಿವಾಲ್ ಅವರ ಜಾಮೀನಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆಯ ಆಲಿಸಿದ ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ. ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದೆ. ಇಂದಿನ ವಾದಗಳನ್ನು ಪರಿಗಣಿಸಲು ಬಯಸುತ್ತೇವೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಜೈನ್ ಹೇಳಿದ್ದಾರೆ.

Arvind Kejriwal to Stay in Jail as Delhi High Court Pauses Trial Court s Bail Decision

ಶುಕ್ರವಾರ ಕೋರ್ಟ್‌ನಲ್ಲಿ ಆಗಿದ್ದೇನು?

ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಇಡಿ ಇಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ನಲ್ಲಿ ಇಡಿ ಕೇಜ್ರಿವಾಲ್‌ ಜಾಮೀನಿನ ವಿರುದ್ಧ ವಾದ ಮಂಡಿಸಿತ್ತು. ಸೋಮವಾರದೊಳಗೆ ಲಿಖಿತ ವಾದಗಳನ್ನು ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ. ಅಂದರೆ ಮಂಗಳವಾರ ಅಥವಾ ಬುಧವಾರದೊಳಗೆ ಆದೇಶ ಹೋರ ಬೀಳುವ ಸಾಧ್ಯತೆ ಇದೆ. ಅಂದರೆ ಅಲ್ಲಿಯವರೆಗೆ ಕೇಜ್ರಿವಾಲ್ ಜೈಲಿನಲ್ಲೇ ಇರಬೇಕಾಗುತ್ತದೆ. ನಮ್ಮ ಅರ್ಜಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ, ಅಲ್ಲಿಯವರೆಗೆ ಕೇಜ್ರಿವಾಲ್ ಬಿಡುಗಡೆಗೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಜಾರಿ ನಿರ್ದೇಶನಾಲಯದ ವಕೀಲ ಎಸ್‌ಪಿ ರಾಜು ಹೇಳಿದ್ದಾರೆ.

ಕೇಜ್ರಿವಾಲ್ ಅವರ ಜಾಮೀನು ಆದೇಶವನ್ನು ತಡೆಹಿಡಿಯಲಾಗಿದೆ ಮತ್ತು ಅಂತಿಮ ಆದೇಶವು 2-4 ದಿನಗಳಲ್ಲಿ ಬರಲಿದೆ ಮತ್ತು ಜಾಮೀನು ಅರ್ಜಿ ರದ್ದತಿಯ ವಿಚಾರಣೆಯ ನಂತರ "ಮತ್ತು ಎ. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

Arvind Kejriwal to Stay in Jail as Delhi High Court Pauses Trial Court s Bail Decision

ಗುರುವಾರ, ದೆಹಲಿ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ಕೋರ್ಟ್‌ ಜಾಮೀನು ನೀಡುವ ಮೊದಲು ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವರು ತನಿಖೆಗೆ ಅಡ್ಡಿಯಾಗಬಾರದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದು ಸೂಚಿಸಿತ್ತು.

ಯಾವಾಗ ಹೊರ ಬರುವೆ ತಿಳಿಯದು

ದೇಶದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದರಿಂದ ಪ್ರಚಾರದಲ್ಲಿ ಭಾಗವಹಿಸಲು ಅರವಿಂದ್ ಕೇಜ್ರಿವಾಲ್‌ ಅವರಿಗೆ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು. ಮಧ್ಯಂತ ಜಾಮೀನು ಜೂನ್ 2 ರಂದು ಮುಕ್ತಾಯವಾಯಿತು. ಈ ವೇಳೆ ಕೇಜ್ರಿವಾಲ್ ಶರಣಾಗುವ ಮೊದಲು ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ದೇಶ ಉಳಿಸಲು ಜೈಲಿಗೆ ಹೋಗುತ್ತಿದ್ದೇನೆ. ನಾನು ಯಾವಾಗ ಹಿಂತಿರುಗುತ್ತೇನೆ ಎಂದು ನನಗೆ ತಿಳಿದಿಲ್ಲ. ಅಲ್ಲಿ ನನಗೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ನನಗೆ 21 ದಿನಗಳ ಜಾಮೀನು ನೀಡಿತ್ತು. ಇದಕ್ಕಾಗಿ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ಮತ್ತೆ ತಿಹಾರ್ ಜೈಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+