ಕೇಜ್ರಿವಾಲ್ ಓರ್ವ ನಕ್ಸಲೈಟ್‌: ಸುಬ್ರಮಣಿಯನ್ ಸ್ವಾಮಿ

Subscribe to Oneindia Kannada

ನವದೆಹಲಿ, ಮಾರ್ಚ್, 30: ರಾಷ್ಟ್ರ ವಿರೋಧಿಗಳನ್ನು ಬೆಂಬಲಿಸುತ್ತ, ಸಲ್ಲದ ಹೇಳಿಕೆ ನೀಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಓರ್ವ ನಕ್ಸಲೈಟ್‌ಗಿಂತ ಕಡಿಮೆ ಅಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಸುದ್ದಿ ಮಾದ್ಯಮದೊಂದಿಗೆ ಮಾತನಾಡಿದ ಸ್ವಾಮಿ, ಅರವಿಂದ್ ಕೇಜ್ರಿವಾಲ್‌ ಮತ್ತು ಕಾಂಗ್ರೆಸ್‌ ಬಿಜೆಪಿಯನ್ನು ವಿರೋಧಿಸಿಕೊಂಡೆ ಬರುತ್ತಿವೆ. ದೇಶ ವಿರೋಧಿ ಶಕ್ತಿಗಳನ್ನು ಬೆಂಬಲಿಸುವ ಅರವಿಂದ ಕೇಜ್ರಿವಾಲ್‌ ಒಬ್ಬ ನಕ್ಸಲೈಟ್‌ ಇದ್ದಂತೆ. ಪಾಕ್‌ ಬಗ್ಗೆ ನಾವು ಕಟ್ಟುನಿಟ್ಟಿನ ಧೋರಣೆ ತೋರಿಸಿದರೆ ಇವರು ಅವರ ಓಲೈಕೆ ಮಾಡುವಂಥ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.[ಅಯೋಧ್ಯಾ ದೇಗುಲಕ್ಕಾಗಿ ಸುಪ್ರೀಂಗೆ ಮೊರೆ ಹೊಕ್ಕ 'ಸ್ವಾಮಿ']

bjp

ಕೇಜ್ರಿವಾಲ್‌ ಒಬ್ಬ 420 (ವಂಚಕ) ಇದ್ದಂತೆ. ಆತನನ್ನು ಗಂಭೀರವಾಗಿ ತಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಆತನ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಮೋಸ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.[ಮುಸ್ಲಿಮರಿಗೆ ಸ್ವಾಮಿ ನೀಡಿದ ಸಂಡೇ ಪ್ಯಾಕೇಜ್: 'ಲಾರ್ಡ್ ಕೃಷ್ಣ']

ಪಠಾಣ್ ಕೋಟ್ ದಾಳಿ ಸಂಬಂಧ ಆಗಮಿಸಿದ್ದ ಪಾಕಿಸ್ತಾನದ ತನಿಖಾ ಸಂಸ್ಥೆಗೆ ಮೋದಿ ಸರ್ಕಾರ ಸಹಕಾರ ನೀಡಿದ್ದನ್ನು ಕೇಜ್ರಿವಾಲ್ ಸೇರಿದಂತೆ ವಿವಿಧ ಪಕ್ಷಗಳು ಟೀಕೆ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಸ್ವಾಮಿ ಕೇಜ್ರಿವಾಲ್ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bharatiya Janata Party (BJP) leader Subramanian Swamy on Wednesday described Delhi Chief Minister Arvind Kejriwal as a 'Naxalite' for supporting anti-national elements. "Arvind Kejriwal and the Congress, they are all opposed to the Bharatiya Janata Party. That man (Arvind Kejriwal) is a Naxalite, he will say anything at any time.
Please Wait while comments are loading...