ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಗೊಳಿಸಿದೆ ಜೊತೆಗೆ ಆಯಿಲ್ ಮಾರ್ಕೆಟಿಂಗ್ ಸಂಸ್ಥೆಗಳು ಒಂದು ರೂಪಾಯಿ ಕಡಿಮೆ ಮಾಡುತ್ತಿವೆ ಒಟ್ಟು ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ 2.50 ರೂಪಾಯಿ ಕಡಿಮೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರವು 2.50 ಕಡಿಮೆ ಮಾಡಿದ್ದು, ರಾಜ್ಯಗಳು ಇಂಧನದ ಮೇಲೆ ಹೇರುತ್ತಿರುವ ವ್ಯಾಟ್‌ ಅನ್ನು ಕಡಿಮೆ ಮಾಡಿ ಒಟ್ಟು ಇಂಧನದ ಮೇಲೆ 5 ರೂಪಾಯಿ ಕಡಿಮೆ ಮಾಡಬೇಕೆಂದು ಕೇಂದ್ರವು ರಾಜ್ಯಗಳಿಗೆ ಪತ್ರ ಬರೆಯಲಿದೆ ಎಂದು ಜೇಟ್ಲಿ ಹೇಳಿದರು.

ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ

ಕಚ್ಚಾ ತೈಲ ಬೆಲೆಯು ಕಳೆದ ನಾಲ್ಕು ವರ್ಷದಲ್ಲೇ ಅತಿ ಹೆಚ್ಚಾಗಿರುವುದು ಹಾಗೂ ಅಮೆರಿಕದ ಆಂತರಿಕ ನೀತಿಗಳಲ್ಲಿ ಬದಲಾವಣೆ ಹಾಗೂ, ಅಮೆರಿಕ ಹೆಚ್ಚಿಸಿರುವ ಬಡ್ಡಿ ದರದ ಪ್ರಭಾವವು ಹಣಕಾಸು ಮಾರುಕಟ್ಟೆ ಹಾಗೂ ಷೇರುಮಾರುಕಟ್ಟೆಯ ಮೇಲೆಯೂ ಪ್ರಭಾವ ಬೀರಿದೆ ಎಂದು ಜೇಟ್ಲಿ ಮಾಹಿತಿ ನೀಡಿದರು.

ವರ್ಷಕ್ಕೆ 21,000 ಕೋಟಿ ನಷ್ಟ

ವರ್ಷಕ್ಕೆ 21,000 ಕೋಟಿ ನಷ್ಟ

ಅಬಕಾರಿ ಸುಂಕ ಕಡಿಮೆ ಮಾಡಿರುವ ಕಾರಣ ಕೇಂದ್ರ ಸರ್ಕಾರಕ್ಕೆ ಒಂದು ವರ್ಷಕ್ಕೆ 21,೦೦೦ ಕೋಟಿ ನಷ್ಟವಾಗಲಿದೆ, ಅರ್ಧ ವರ್ಷಕ್ಕೆ 10,500 ಕೋಟಿ ನಷ್ಟವಾಗಲಿದೆ ಈ ನಷ್ಟ ಭಾರತದ ಹಣಕಾಸಿನ ಸ್ಥಿತಿಯ ಮೇಲೆ ತೀರಾ ಕಡಿಮೆ ಪ್ರಭಾವ ಬೀರಲಿದೆ ಎಂದು ಅವರು ಲೆಕ್ಕ ಒಪ್ಪಿಸಿದರು.

ಓಎಂಸಿಗಳಿಗೆ 10 ಮಿಲಿಯನ್ ಡಾಲರ್ ಬಾಂಡ್ ಸೃಷ್ಟಿ

ಓಎಂಸಿಗಳಿಗೆ 10 ಮಿಲಿಯನ್ ಡಾಲರ್ ಬಾಂಡ್ ಸೃಷ್ಟಿ

ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಕಷ್ಟು ದೂರಗಾಮಿ ಕ್ರಮಗಳನ್ನು ಕೇಂದ್ರವು ಈಗಾಗಲೇ ಕೈಗೊಂಡಿದ್ದು, ಇಂಧನ ಮಾರಾಟ ಸಂಸ್ಥೆಗಳಿಗೆ 10 ಮಿಲಿಯನ್ ಮೌಲ್ಯದ ಡಾಲರ್‌ ಬಾಂಡ್‌ಗಳನ್ನು ವಿದೇಶದಿಂದ ಸೃಷ್ಟಿಮಾಡಿಕೊಳ್ಳುವಂತೆ ಹೇಳಲಾಗಿದೆ. ಈಗಾಗಲೇ ಆಮದು ಸುಂಕ ಏರಿಸಲಾಗಿದೆ, ಹಾಗೂ ಸಾಲಕ್ಕೆ ಕಡಿವಾಣ ಹಾಕಲಾಗಿದೆ ಇದರಿಂದ 70000 ಕೋಟಿ ಉಳಿಯಲಿದೆ ಎಂದು ಜೇಟ್ಲಿ ಹೇಳಿದರು.

ಕುಸಿಯುತ್ತಿರುವ ರುಪಾಯಿ, ಏರುತ್ತಿರುವ ತೈಲದಿಂದ ನಲುಗಿದ ಷೇರುಪೇಟೆ ಕುಸಿಯುತ್ತಿರುವ ರುಪಾಯಿ, ಏರುತ್ತಿರುವ ತೈಲದಿಂದ ನಲುಗಿದ ಷೇರುಪೇಟೆ

ಇಂಧನದಿಂದ ರಾಜ್ಯಗಳಿಗೆ ಲಾಭ ಹೆಚ್ಚು

ಇಂಧನದಿಂದ ರಾಜ್ಯಗಳಿಗೆ ಲಾಭ ಹೆಚ್ಚು

ಕೇಂದ್ರ ಸರ್ಕಾರವು ಇಂಧನದ ಮೇಲೆ ಅಬಕಾರಿ ಸುಂಕ ವಿಧಿಸುತ್ತದೆ ಕೇಂದ್ರ ವಿಧಿಸುವ ಸುಂಕ ನಿಗದಿತವಾಗಿರುತ್ತದೆ, ಬೆಲೆ ಏರಿಕೆ ಅಥವಾ ಇಳಿಕೆಯಿಂದ ಅದು ವ್ಯತ್ಯಾಸವಾಗದು, ಆದರೆ ರಾಜ್ಯಗಳು ಇಂಧನದ ಮೇಲೆ ವ್ಯಾಟ್‌ ವಿಧಿಸುತ್ತವೆ ಇಂಧನ ಬೆಲೆ ಹೆಚ್ಚಾದರೆ ರಾಜ್ಯಗಳಿಗೆ ಲಾಭವೂ ಹೆಚ್ಚು ಹಾಗಾಗಿ ಕೂಡಲೇ ರಾಜ್ಯಗಳು 2.50 ರೂಪಾಯಿ ವ್ಯಾಟ್ ಇಳಿಸಿ, ಕೇಂದ್ರದ 2.50 ಜೊತೆ ಒಟ್ಟು 5 ರೂಪಾಯಿ ಲಾಭವನ್ನು ಜನರಿಗೆ ತಲುಪುವಂತೆ ಮಾಡಬೇಕು ಎಂದು ಜೇಟ್ಲಿ ಹೇಳಿದರು.

ರಾಜ್ಯಗಳಿಗೆ ಇಂದೇ ಪತ್ರ ಬರೆಯುತ್ತೇವೆ

ರಾಜ್ಯಗಳಿಗೆ ಇಂದೇ ಪತ್ರ ಬರೆಯುತ್ತೇವೆ

ರಾಜ್ಯಗಳಿಗೆ ಇಂದೇ ಪತ್ರ ಬರೆಯಲಾಗುವುದು ಹಾಗೂ ಮುಖ್ಯಮಂತ್ರಿಗಳ ಜೊತೆ ಸಹ ಮಾತನಾಡಲಾಗುವುದು ಎಂದ ಜೇಟ್ಲಿ. ಕೆಲವು ಟ್ವೀಟ್‌ ಮಾಡಿ ಬಾಯ್ಮಾತಿನ ಸಿಂಪತಿ ವ್ಯಕ್ತಪಡಿಸುತ್ತಿದ್ದರು ಈಗ ಗೊತ್ತಾಗುತ್ತದೆ ಯಾರಿಗೆ ನಿಜವಾಗಿಯೂ ಜನಗಳ ಬಗ್ಗೆ ಪ್ರೀತಿ ಇದೆ, ಯಾರು ಮೊಸಳೆ ಕಣ್ಣೀರು ಸುರಿಸುತ್ತಿದ್ದರೂ ಎಂದು ಜೇಟ್ಲಿ ಹೇಳಿದರು.

ಪೆಟ್ರೋಲ್ ದರ 100ರೂ ತಲುಪಿದರೆ ಪೆಟ್ರೋಲ್ ಬಂಕ್ ಮಷಿನ್ ಗಳು ಬದಲುಪೆಟ್ರೋಲ್ ದರ 100ರೂ ತಲುಪಿದರೆ ಪೆಟ್ರೋಲ್ ಬಂಕ್ ಮಷಿನ್ ಗಳು ಬದಲು

ಮಸಾಲಾ ಬಾಂಡ್‌ಗಳ ಮೇಲೆ ತೆರಿಗೆ ವಿನಾಯಿತಿ

ಮಸಾಲಾ ಬಾಂಡ್‌ಗಳ ಮೇಲೆ ತೆರಿಗೆ ವಿನಾಯಿತಿ

ಕೆಲವು ಬಾಂಡ್‌ಗಳ ಮೇಲೆ ತೆರಿಗೆ ವಿನಾಯಿತಿ ನೀಡಿ ನಮ್ಮ ಹಣಕಾಸಿನ ಹರಿವು ಹೆಚ್ಚಳ ಮಾಡುವಂತೆ ಮಾಡಲಾಗುತ್ತಿದೆ. ಈಗಾಗಲೇ ಮಸಾಲಾ ಬಾಂಡ್‌ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆಮದು ಸುಂಕ ಹೆಚ್ಚಳ ಮಾಡಲಾಗಿದೆ. ಇವುಗಳಿಂದ ಹಣಕಾಸಿನ ಹರಿವು ಹೆಚ್ಚಲಿದೆ ಎಂದು ಅರುಣ್ ಜೇಟ್ಲಿ ಹೇಳಿದರು.

English summary
Finance minister Arun Jaitley said, Excise duty to be reduced by Rs.1.50 & OMCs will absorb 1 rupee. So, a total of Rs.2.50 will be reduced on both diesel and petrol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X