Breaking: ಭಾರತದ ನೂತನ ರಕ್ಷಣಾ ಸಚಿವರಾಗಿ ಅರುಣ್ ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 13: ಭಾರತದ ನೂತನ ರಕ್ಷಣಾ ಸಚಿವರಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಹಾಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಮನೋಹರ್ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ. ವಿತ್ತ ಸಚಿವರಾಗಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಣಾ ಖಾತೆ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.[ಮೋದಿ ಸಂಪುಟದ ಶ್ರೀಮಂತರು: ಜೇಟ್ಲಿ ಮೀರಿಸಿದ ಚೌಧರಿ]

Arun Jaitley is new Defence Minister of India

ಮನೋಹರ್ ಪರಿಕ್ಕರ್ ಅವರ ರಾಜೀನಾಮೆ ಅಂಗೀಕಾರ ಹಾಗೂ ಜೇಟ್ಲಿ ಅವರಿಗೆ ಹೆಚ್ಚುವರಿ ಖಾತೆ ಜವಾಬ್ದಾರಿ ನೀಡುವುದಕ್ಕೆ ಸಮ್ಮತಿ ನೀಡಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ.[ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]


ಎರಡನೇ ಬಾರಿಗೆ ಅರುಣ್ ಜೇಟ್ಲಿ ಅವರಿಗೆ ಈ ರೀತಿ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತಿದೆ. ಈ ಹಿಂದೆ ಮೇ 26, 2014 ರಿಂದ ನವೆಂಬರ್ 9, 2014ರ ತನಕ ರಕ್ಷಣಾ ಖಾತೆ ಹೊಣೆ ಹೊತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Arun Jaitley will be the Defence Minister of India. He will hold additional charge of defence along with the Finance portfolio. The decision to appoint Jaitley as the Defence Minister was taken after Manohar Parrikar resigned to the post. Parrikar resigned from the post to take over the Chief Minister of Goa
Please Wait while comments are loading...