ಹಣಕಾಸು ಸಚಿವ ಜೇಟ್ಲಿ ಅವರ ಆಸ್ತಿಯಲ್ಲಿ 6 ಕೋಟಿ ರು ಇಳಿಕೆ!

Posted By:
Subscribe to Oneindia Kannada

ನವದೆಹಲಿ, ಜುಲೈ 03: ನರೇಂದ್ರ ಮೋದಿ ಅವರ ಸಂಪುಟ ಸದಸ್ಯರ ಪೈಕಿ ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಚಿವರೊಬ್ಬರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ 2014-15ರ ಆಸ್ತಿ ಗಳಿಕೆಗೆ ಹೋಲಿಸಿದರೆ 2015-16ರ ಅವಧಿಯಲ್ಲಿ 6.02ಕೋಟಿ ರು ಇಳಿಕೆ ಕಂಡು ಬಂದಿದೆ.

ಕೇಂದ್ರ ಸಂಪುಟದ ಶ್ರೀಮಂತ ಸಚಿವರ ಪೈಕಿ ಒಬ್ಬರಾದ ಜೇಟ್ಲಿ ಅವರ ಜೇಟ್ಲಿ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಮೌಲ್ಯ 67.01 2014-15ರಲ್ಲಿ ಕೋಟಿ ರೂ. ಆಗಿತ್ತು. 2015-16ರಲ್ಲಿ 60.99 ಕೋಟಿ ರು ನಷ್ಟಿದೆ.

Arun Jaitley declares assets, wealth declines by Rs 6.02 crore in 2015-16

ದೆಹಲಿ, ಗುರುಗ್ರಾಮ(ಹರ್ಯಾಣ), ಪಂಜಾಬಿನ ಅಮೃತಸರ, ಮತ್ತು ಗುಜರಾತ್​ನ ಗಾಂಧಿನಗರದಲ್ಲಿ ಅವರ ನಿವೇಶನಗಳಿದ್ದು, ನಾಲ್ಕು ಸ್ವಂತ ವಾಹನವನ್ನು ಜೇಟ್ಲಿ ಹೊಂದಿದ್ದಾರೆ.

ಪ್ರಧಾನಿ ಅವರ ಅಧಿಕೃತ ವೆಬ್ ಸೈಟ್ ನಲ್ಲಿ ಈ ವಿವರಗಳನ್ನು ಪ್ರಕಟಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿಯಲ್ಲಿ 15 ಲಕ್ಷ ರೂ. ಏರಿಕೆ ಕಂಡು ಬಂದಿದೆ. 2014-15ರಲ್ಲಿ 1.41 ಕೋಟಿ ರೂ, ಇದ್ದ ಮೋದಿ ಅವರ ಆಸ್ತಿಯಲ್ಲಿ 15 ಲಕ್ಷ ರೂ. ಏರಿಕೆ ಕಂಡಿದೆ.

ಜೇಟ್ಲಿ ಅವರ ಆಸ್ತಿ ವಿವರ: ಜೇಟ್ಲಿ ಅವರು ಎರಡು ಸಕ್ರಿಯವಾದ ಬ್ಯಾಂಕ್ ಖಾತೆ (ಎಚ್ ಡಿಎಫ್ ಸಿ) ಹೊಂದಿದ್ದಾರೆ. ನಿವೇಶಗಳಲೆಲ್ಲವೂ ಜೇಟ್ಲಿ ಹಾಗೂ ಅವರ ಪತ್ನಿ ಸಂಗೀತಾ ಅವರು ಜಂಟಿಯಾಗಿ ಮಾಲೀಕತ್ವ ಹೊಂದಿದ ಆಸ್ತಿಯಾಗಿದೆ.

ಸಂಗೀತಾ ಜೇಟ್ಲಿ ಅವರು ಬ್ಯಾಂಕಿನಲ್ಲಿ 69.43 ಕೋಟಿ ರು, 6.82 ಲಕ್ಷ ರು ನಗದು, 13.80 ಲಕ್ಷ ರು ಪಿಪಿಎಫ್ ನಲ್ಲಿ ಹೊಂದಿದ್ದಾರೆ. ಮಾರ್ಚ್ 2016ರ ಅಂತ್ಯಕ್ಕೆ ಚರಾಸ್ತಿ ಮೊತ್ತ 20.62 ಲಕ್ಷ ರು ದಾಟುತ್ತದೆ. ಸುಮಾರು 9.71 ಕೋಟಿ ರು ಸಾಲವನ್ನು ಹೊಂದಿದ್ದಾರೆ. ಅರುಣ್ ಜೇಟ್ಲಿ ಅವರು 9.22 ಕೋಟಿ ರು ಸಾಲವನ್ನು ಪತ್ನಿಗೆ ನೀಡಿದ್ದಾರೆ. 49.25 ಲಕ್ಷ ರು ಸಾಲವನ್ನು ಮಕ್ಕಳಿಂದ ಸಂಗೀತಾ ಅವರು ಪಡೆದಿದ್ದಾರೆ(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finance minister Arun Jaitley becomes first Minister for this year to declare his assets and liabilities. The asset includes properties in Delhi, Haryana, Gujarat and Punjab. Official data suggests that Jaitley's wealth declined by Rs 6.02 crore to Rs 60.99 crore against Rs 67.01 crore in 2014-15.
Please Wait while comments are loading...