Union Budget 2026: ತಮಿಳುನಾಡು, ಓಡಿಸಾ, ಕೇರಳ ಸೇರಿ 4 ರಾಜ್ಯಗಳಿಗೆ ಬಂಪರ್ ಘೋಷಣೆ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದು, ಹಣಕಾಸು ಶಿಸ್ತು ಮತ್ತು ನಿರಂತರ ಆರ್ಥಿಕ ಬೆಳವಣಿಗೆ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ. ತಮಿಳುನಾಡು ಆಂಧ್ರಪ್ರದೇಶ ಒಡಿಶಾ ಮತ್ತು ಕೇರಳಗೆ ಬಂಪರ್ ಘೋಷಣೆ ಮಾಡಿದ್ದು, ಬಜೆಟ್ ನಲ್ಲಿ ನಾಲ್ಕು ರಾಜ್ಯಗಳಿಗೆ ಅರ್ಥ್ ಮಿನೆಲಾರ್ ಕಾರಿಡಾರ್ ಘೋಷಣೆ ಮಾಡಿದ್ದಾರೆ.
ಹೈ ಸ್ಪೀಡ್ ರೈಲ್ವೆ ಕಾಲಿಡಾರ್ ಅನ್ನು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು. ಪ್ರಮುಖ ಏಳು ನಗರಗಳನ್ನು ಜೋಡಿಸಲು ಹೈ ಸ್ಪೀಡ್ ರೈಲ್ವೆ ಯೋಜನೆ ಘೋಷಿಸಿದ್ದು ಮುಂಬೈ ಟು ಪುಣೆ, ಪುಣೆ ಟು ಹೈದರಾಬಾದ್, ಹೈದರಾಬಾದ್ ಟು ಬೆಂಗಳೂರು, ಹೈದರಾಬಾದ್ ಟು ಚೆನ್ನೈ, ಚೆನ್ನೈ ಟು ಬೆಂಗಳೂರು, ದೆಲ್ಲಿ ಟು ವಾರಣಾಸಿ, ವಾರಣಾಸಿ ಟು ಸಿಲಿಗುರಿ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

ಸೆಮಿಕಂಡಕ್ಟರ್ ಮಿಷನ್ 2.0 ಘೋಷಿಸಿದರು ಸಮೀಕಂಡಕ್ಟರ್ ಮಿಷನ್ ಗೆ 40,000 ಕೋಟಿ ಫಂಡ್ ಘೋಷಣೆ ಮಾಡಿದರು. ನಮ್ಮ ತಯಾರಿಕೆ ವಲಯಕ್ಕೆ ಹೆಚ್ಚು ಶಕ್ತಿ ಕೊಡುತ್ತಿದ್ದೇವೆ. ಬಡತನ ನಿರ್ಮೂಲನೆ ಮಾಡುವ ಕಾರ್ಯ ಮಾಡಿದ್ದೇವೆ. ವಿಕಸಿತ ಭಾರತದತ್ತ ಹೆಜ್ಜೆ ಇಟ್ಟಿದ್ದೇವೆ ಅಭಿವೃದ್ಧಿ ಹೊಂದಿದ್ದೇವೆ. ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡಿದೆ ಮೋದಿ ಅವರು ವಿಕಸಿತ ಭಾರತಕ್ಕೆ ಕರೆಕೊಟ್ಟಿದ್ದಾರೆ ಜಾಗತೀಕರಣ ಮಾರುಕಟ್ಟೆಯೊಂದಿಗೆ ಪೈಪೋಟಿ ನೀಡುತ್ತಿದ್ದೇವೆ 2047ರ ಗುರಿಯನ್ನು ಪ್ರಧಾನಿ ಮೋದಿ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ಎಲ್ಲಾ ವರ್ಗದವರಿಗಾಗಿ ಬಜೆಟ್ ತಯಾರಿಸಲಾಗಿದೆ. ಕುಟುಂಬಳಿಗೆ ಹೆಚ್ಚಿನ ಹಣ ಸಿಗುವಂತೆ ವಿಕಸತಿ ಭಾರತದ ಗುರಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಡತನ ನಿರ್ಮೂಲನೆ ಮಾಡುವ ಕಾರ್ಯ ಮಾಡಿದ್ದೇವೆ. ಶೇ.7 ರಷ್ಟು ಅಭಿವೃದ್ಧಿ ಹೊಂದಿದ್ದೇವೆ. ಮೋದಿ ಅವರು ವಿಕಸಿತ ಭಾರತಕ್ಕೆ ಕರೆ ಕೊಟ್ಟಿದ್ದಾರೆ. ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೇಂದ್ರೀಯ ಔಷಧಿ ನಿಯಂತ್ರಣವನ್ನು ಜಾರಿಗೆ ತರುತ್ತಿದ್ದೇವೆ. ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications