Delhi Acid Attack: ಕೆಲವೇ ಗಂಟೆಗಳಲ್ಲಿ ಬಾಲಕಿಗೆ ಆಸಿಡ್ ಹಾಕಿದ್ದ ಮೂವರ ಬಂಧನ
ನವದೆಹಲಿ, ಡಿಸೆಂಬರ್ 15: ನೈರುತ್ಯ ದೆಹಲಿಯ ದ್ವಾರಕಾ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು 17 ವರ್ಷದ ಬಾಲಕಿಯ ಮೇಲೆ ಆಸಿಡ್ ಎಸೆದಿದ್ದರು. ಇದರಿಂದಾಗಿ ಬಾಲಕಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಈ ಸಂಬಂಧ ಮೂವರು ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ದ್ವಾರಕಾದಲ್ಲಿ 17 ವರ್ಷದ ಬಾಲಕಿಯ ಇಬ್ಬರು ಶಂಕಿತರು ಆಸಿಡ್ ಎರಚಿದ ಗಂಭೀರ ಆರೋಪ ಹೊತ್ತಿದ್ದಾರೆ ಎಂದು ತನಿಖಾಧಿಕಾರಿ ಡಿಸಿಪಿ ಹರ್ಷವರ್ಧನ ತಿಳಿಸಿದ್ದಾರೆ. ಆರೋಪಿಗಳ ಬಂಧಣಕ್ಕೆ ಹಲವು ತಂಡಗಳನ್ನು ರಚಿಸಿದ್ದ ಪೊಲೀಸರು ಬಂಧಿತ ಮೂವರು ಶಂಕಿತರಲ್ಲಿ ಇಬ್ಬರು ಬೈಸಿಕಲ್‌ಗಳನ್ನು ಓಡಿಸುತ್ತಿದ್ದರು. ಇನ್ನೊಬ್ಬ ಹುಡುಗನನ್ನು ನಂತರದ ತನಿಖೆಯಲ್ಲಿ ಪ್ರಮುಖ ಶಂಕಿತ ಎಂದು ಪತ್ತೆ ಹಚ್ಚಲಾಯಿತು ಎಂದು ದ್ವಾರಕಾ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಹರ್ಷವರ್ಧನ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದೆಹಲಿ ಪಶ್ಚಿಮ ವಲಯದಲ್ಲಿ 17 ವರ್ಷದ ಬಾಲಕಿಯ ಮೇಲೆ ಬುಧವಾರ ಬೆಳಗ್ಗೆ ಆಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಆಸಿಡ್ ದಾಳಿ ಮಾಡಲು ಪ್ರೇರಣೆಯನ್ನು ನಿರ್ಧರಿಸಲು ಪ್ರಸ್ತುತ ಅವರನ್ನು ಪ್ರಶ್ನಿಸಲಾಗುತ್ತಿದೆ ಎನ್ನಲಾಗಿದೆ.

ಬಾಲಕಿಯ ತಂದೆಯ ಪ್ರಕಾರ, ರಾಸಾಯನಿಕವು ಆಕೆಯ ಮುಖ ಮತ್ತು ಅವಳ ಕಣ್ಣುಗಳಿಗೆ ತಗುಲಿದೆ ಎಂದಿದ್ದಾರೆ. ದೆಹಲಿಯ ದ್ವಾರಕಾ ನೆರೆಹೊರೆಯಲ್ಲಿ ಹದಿಹರೆಯದ ಬಾಲಕಿಯ ಮೇಲೆ ಬುಧವಾರ ದಾಳಿ ನಡೆಸಲಾಗಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಈ ದಾಳಿ ನಡೆದಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಯುವತಿ ತನ್ನ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಬೈಕ್ ಸವಾರರು ಆ್ಯಸಿಡ್ ದಾಳಿ ನಡೆಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಸೇರಿದಂತೆ ಮಹಿಳಾ ಸಂಘಟನೆಗಳು ಮತ್ತು ಇತರರು ಆಸಿಡ್ ದಾಳಿಯ ಮೇಲೆ ಕೋಲಾಹಲವು ಹೆಚ್ಚಾಗುತ್ತಿದ್ದಂತೆ ನಿರ್ಬಂಧದ ಹೊರತಾಗಿಯೂ ಮಾರುಕಟ್ಟೆಗಳಲ್ಲಿ ಆಸಿಡ್ ಲಭ್ಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆರೋಪಿಗಳಿಗೆ ಇಷ್ಟೊಂದು ಧೈರ್ಯ ಬಂದಿದ್ದು ಹೇಗೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.












Click it and Unblock the Notifications