ಅರ್ನಬ್ ವಿಡಿಯೋ ಮಾಡಿದ ಕುನಾಲ್ಗೆ ಇದೆಂಥ ಶಿಕ್ಷೆ!
ನವದೆಹಲಿ, ಜನವರಿ 28 : ವಿಮಾನ ಪ್ರಯಾಣದ ವೇಳೆ ಕಾಮಿಡಿಯನ್ ಕುನಾಲ್ ಕಾಮ್ರಾ ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ಪ್ರಶ್ನೆ ಕೇಳಿದ ವಿಡಿಯೋ ವೈರಲ್ ಆಗಿದೆ. ಇದಕ್ಕಾಗಿ ಕುನಾಲ್ಗೆ ಇಂಡಿಗೋ ಸಂಸ್ಥೆ ಶಿಕ್ಷೆಯನ್ನು ನೀಡಿದೆ.
Recommended Video
ಇಂಡಿಗೋ 6ಇ 5317 ಮುಂಬೈ-ಲಕ್ನೋ ನಡುವಿನ ವಿಮಾನದಲ್ಲಿ ಕುನಾಲ್ ಕಾಮ್ರಾ ವಿಡಿಯೋವೊಂದನ್ನು ಮಾಡಿದ್ದಾರೆ. ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋವನ್ನು ಟ್ವೀಟರ್ನಲ್ಲಿ ಹಾಕಿದ್ದಾರೆ.
ಕುನಾಲ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದೆ. ಈ ವಿಡಿಯೋವನ್ನು ವಿಮಾನದಲ್ಲಿ ಚಿತ್ರೀಕರಿಸಿದ್ದಕ್ಕೆ ಇಂಡಿಗೋ ಆಕ್ಷೇಪ ವ್ಯಕ್ತಪಡಿಸಿದೆ. 6 ತಿಂಗಳು ಕುನಾಲ್ ಕಾಮ್ರಾ ಇಂಡಿಗೋ ವಿಮಾನದಲ್ಲಿ ಹಾರಾಟ ನಡೆಸದಂತೆ ನಿರ್ಬಂಧ ಹೇರಿದೆ.
ಕುನಾಲ್ ಟ್ವಿಟರ್ನಲ್ಲಿ 5 ಗಂಟೆ ಹಿಂದೆ ಹಾಕಿರುವ 1.51 ನಿಮಿಷದ ವಿಡಿಯೋವನ್ನು 1.1 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. 19.1ಕೆ ರಿಟ್ವೀಟ್ ಆಗಿದೆ. 52.8ಕೆ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. 10.6ಕೆ ಕಮೆಂಟ್ಗಳು ಬಂದಿವೆ.
|
ಕುನಾಲ್ ಕಾಮ್ರಾ ಹಾಕಿರುವ ವಿಡಿಯೋ
ಕುನಾಲ್ ಕಾಮ್ರಾ ಟ್ವೀಟರ್ನಲ್ಲಿ ಹಾಕಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ವಿಡಿಯೋ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರ್ನಬ್ ಗೋಸ್ವಾಮಿ ಮೌನ
ಕುನಾಲ್ ಕಾಮ್ರಾ ಅರ್ನಬ್ ಗೋಸ್ವಾಮಿಯನ್ನು ಎಷ್ಟು ಪ್ರಶ್ನೆ ಕೇಳಿದರೂ ಅವರು ಉತ್ತರ ನೀಡಿಲ್ಲ. ಲ್ಯಾಪ್ ಟಾಪ್ ನೋಡುತ್ತಾ ಕುಳಿತಿದ್ದರು. ಇದಕ್ಕೆ ಟ್ವಿಟರ್ನಲ್ಲಿ ಹಲವಾರು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆ ಉತ್ತರ ಕೊಟ್ಟಿಲ್ಲ ಎಂದು ಅರ್ನಬ್ ಪ್ರಶ್ನಿಸಿದ್ದಾರೆ.

ವಿಮಾನ ಹತ್ತದಂತೆ ನಿರ್ಬಂಧ
ಇಂಡಿಗೋ ವಿಮಾನದಲ್ಲಿ ವಿಡಿಯೋ ಚಿತ್ರೀಕರಿಸಿದ ಕುನಾಲ್ ಕಾಮ್ರಾ ಕ್ರಮಕ್ಕೆ ಇಂಡಿಗೋ ಆಕ್ಷೇಪ ವ್ಯಕ್ತಪಡಿಸಿದೆ. ಕುನಾಲ್ ವರ್ತನೆಯನ್ನು ಖಂಡಿಸಿದ್ದು, 6 ತಿಂಗಳು ವಿಮಾನ ಹತ್ತದಂತೆ ನಿರ್ಬಂಧಿಸಿದೆ.

ಕುನಾಲ್ ಕಾಮ್ರಾ ಪ್ರತಿಕ್ರಿಯೆ
ಇಂಡಿಗೋ ವಿಮಾನದಲ್ಲಿ ಹಾರಾಟ ನಡೆಸದಂತೆ ನಿರ್ಬಂಧ ವಿಧಿಸಿರುವುದಕ್ಕೆ ಕುನಾಲ್ ಕಾಮ್ರಾ ಟ್ವೀಟರ್ನಲ್ಲಿಯೇ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications