ಅರ್ನಬ್ ಗೋಸ್ವಾಮಿ ಸ್ಥಾನಕ್ಕೆ ರಾಹುಲ್ ಕರೆ ತಂದ ಟೈಮ್ಸ್ ನೌ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಟೈಮ್ಸ್ ನೌ ಸುದ್ದಿ ವಾಹಿನಿ ಎಡಿಟರ್ ಇನ್ ಚೀಫ್ ಹುದ್ದೆಗೆ ಅರ್ನಬ್ ಗೋಸ್ವಾಮಿ ಅವರು ರಾಜೀನಾಮೆ ನೀಡಿ ಸಂಸ್ಥೆಯನ್ನು ತೊರೆದಿರುವ ಸುದ್ದಿ ಓದಿರುತ್ತೀರಿ. ಈಗ ಅರ್ನಬ್ ಸ್ಥಾನಕ್ಕೆ ಜನಪ್ರಿಯ ನ್ಯೂಸ್ ಎಡಿಟರ್, ನಿರೂಪಕ ಕರ್ನಾಟಕದ ರಾಹುಲ್ ಶಿವಶಂಕರ್ ಅವರನ್ನು ಟೈಮ್ಸ್ ನೌ ಕರೆ ತಂದಿದೆ.

ರಾಹುಲ್ ಶಿವಶಂಕರ್ ಅವರು ನ್ಯೂಸ್ ಎಕ್ಸ್ ಸುದ್ದಿ ವಾಹಿನಿಯ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಟೈಮ್ಸ್ ನೌ ನ ಎಡಿಟರ್ ಇನ್ ಚೀಫ್ ಆಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ರಾಹುಲ್ ಅವರು ಟೈಮ್ಸ್ ನೌ ನ ಮಾಜಿ ಉದ್ಯೋಗಿಯಾಗಿದ್ದರು ಎಂಬುದು ವಿಶೇಷ. [ಅರ್ನಬ್ ಗೋಸ್ವಾಮಿ ರಾಜೀನಾಮೆ]

Arnab Goswami out, Rahul Shivashankar in as Chief of Times Now

ಅರ್ನಬ್ ಅವರು ತಮ್ಮ ಜನಪ್ರಿಯ ಟಿವಿ ಶೋ 'ನ್ಯೂಸ್ ಶೋ' ಮುಂದುವರೆಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿತ್ತು. ಅತ್ಯಂತ ಹೆಚ್ಚು ವೀಕ್ಷಿಸಲ್ಪಡುವ ಈ ಚರ್ಚಾ ಕಾರ್ಯಕ್ರಮವನ್ನು ಕೆಲ ಕಾಲ ಮುಂದುವರೆಸುವುದಾಗಿ ಅರ್ನಬ್ ಹೇಳಿದ್ದರು. [ಅರ್ನಬ್ ಗೆ 5 ಕೋಟಿ ಸಂಬಳವೇ?]

ಅರ್ನಬ್: 1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ ನೌ ನ ಪ್ರಧಾನ ಸಂಪಾದಕರು. ಟೈಮ್ಸ್ ನೌ ಸಂಸ್ಥೆಗೂ ಮುನ್ನ ಕೋಲ್ಕತ್ತಾದ ದಿ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿ ಸಿಎನ್ಎನ್ ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಹಾಗೂ ಎನ್ ಡಿ ಟಿವಿಯಲ್ಲಿ ಪ್ರಣವ್ ರಾಯ್ ಅವರ ಜತೆ ಕಾರ್ಯನಿರ್ವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prominent anchor and news Editor Rahul Shivashankar is all set to step into Arnab Goswami's shoes as Editor-In-Chief of news giant Times Now
Please Wait while comments are loading...