ಸೇನಾ ಶಾಲೆ, ಸರ್ಕಾರಿ ವೆಬ್‌ಸೈಟ್ ಮೇಲೆ ಸೈಬರ್ ದಾಳಿಗೆ ಯತ್ನಿಸಿದ ಪಾಕಿಸ್ತಾನ ಹ್ಯಾಕರ್‌ಗಳು

ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪಾಕಿಸ್ತಾನದ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭಾರತ ಹೇಳಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಹ್ಯಾಕರ್ ಗಳು ಭಾರತದ ಪ್ರಮುಖ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಯತ್ನಿಸಿದ್ದಾರೆ. ಆದರೆ ಭಾರತ ಈ ದಾಳಿಯನ್ನು ವಿಫಲಗೊಳಿಸಿದೆ.

ಗುರುವಾರ ಭಾರತೀಯ ವೆಬ್‌ಸೈಟ್‌ಗಳ ಮೇಲೆ ದಾಳಿ ಮಾಡಲು ವಿಫಲ ಪ್ರಯತ್ನಗಳನ್ನು ನಡೆಸಲಾಗಿದೆ. ಮಕ್ಕಳು, ನಿವೃತ್ತ ಸೈನಿಕರು ಮತ್ತು ಕಲ್ಯಾಣ ಸೇವೆಗಳಿಗೆ ಸಂಬಂಧಿಸಿದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸಲು ಪ್ರಯತ್ನಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಭಾರತೀಯ ಸೈಬರ್ ಭದ್ರತಾ ಸಂಸ್ಥೆಗಳು ತ್ವರಿತವಾಗಿ ಕಾರ್ಯನಿರ್ವಹಿಸಿ, ಬೆದರಿಕೆಗಳನ್ನು ಪತ್ತೆಹಚ್ಚಿ ತಟಸ್ಥಗೊಳಿಸಿವೆ.

Army schools welfare websites targeted pakistan hackers india foils attempt

"ಸೈಬರ್ ಗ್ರೂಪ್ HOAX1337" ಮತ್ತು "ನ್ಯಾಷನಲ್ ಸೈಬರ್ ಕ್ರೂ" ಎಂದು ಗುರುತಿಸಲಾದ ಗುಂಪುಗಳು ಆರ್ಮಿ ಪಬ್ಲಿಕ್ ಸ್ಕೂಲ್ (APS) ನಾಗ್ರೋಟಾ ಮತ್ತು ಸುಂಜುವಾನ್‌ನ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಪಯತ್ನಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರನ್ನು ಅಪಹಾಸ್ಯ ಮಾಡುವ ಪ್ರಚೋದನಾಕಾರಿ ವಿಚಾರವನ್ನು ಈ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಲಾಗಿದೆ. ಇನ್ನೊಂದು ಆತಂಕಕಾರಿ ಘಟನೆಯಲ್ಲಿ, ಮಾಜಿ ಸೈನಿಕರ ಆರೋಗ್ಯ ಅಗತ್ಯಗಳನ್ನು ಪೂರೈಸುವ ವೆಬ್‌ಸೈಟ್ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ.

ಪಾಕಿಸ್ತಾನದ ಕೀಳುಮಟ್ಟದ ಪ್ರಯತ್ನ

ಭಾರತದ ಅಭಿವೃದ್ಧಿಯನ್ನು ಸಹಿಸದ ಪಾಕಿಸ್ತಾನ ಇಂತಹ ಹತಾಶ ಪ್ರಯತ್ನಗಳನ್ನು ನಡೆಸುತ್ತಿದೆ, ಸೈಬರ್ ದಾಳಿ ಅವರ ಹತಾಶೆಯ ಪ್ರಯತ್ನವಷ್ಟೇ. ಮಕ್ಕಳು ಮತ್ತು ಮಾಜಿ ಸೈನಿಕರಿಗಾಗಿ ಇರುವ ವೆಬ್‌ಸೈಟ್‌ಗಳ ಮೇಲೆ ದಾಳಿ ಮಾಡುವ ಅವರು ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಹಿರಿಯ ಸೈಬರ್ ಭದ್ರತಾ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಹ್ಯಾಕರ್‌ಗಳು ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಇಂಡಿಯನ್ ಏರ್ ಫೋರ್ಸ್ ಮಾಜಿ ಸೈನಿಕರ ಸೇವೆಗಳ ವೆಬ್‌ಸೈಟ್‌ಗಳನ್ನು ಸಹ ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. "IOK ಹ್ಯಾಕರ್" - ಇಂಟರ್ನೆಟ್ ಆಫ್ ಖಿಲಾಫತ್‌ನ ಸಂಕ್ಷಿಪ್ತ ರೂಪವಾಗಿದೆ. ರಾಷ್ಟ್ರೀಯ ನೆಟ್‌ವರ್ಕ್‌ಗಳನ್ನು ಭೇದಿಸಲು ವಿಫಲವಾದ ನಂತರ ಬಹು ಭಾರತೀಯ ಕಲ್ಯಾಣ ಮತ್ತು ಶೈಕ್ಷಣಿಕ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದೆ.

ಗುಪ್ತಚರ ಸಂಸ್ಥೆಗಳು ನಾಲ್ಕು ಸಂಬಂಧಿತ ಘಟನೆಗಳನ್ನು ದೃಢಪಡಿಸಿವೆ. ಎಪಿಎಸ್‌ ಶ್ರೀನಗರ ಮತ್ತು ಎಪಿಎಸ್‌ ರಾಣಿಖೇತ್ ಎರಡರ ವೆಬ್‌ಸೈಟ್ ಮೇಲೆ ದಾಳಿ ಮಾಡಲಾಗಿದೆ. ಡೇಟಾಬೇಸ್ ಮತ್ತು ಭಾರತೀಯ ವಾಯುಪಡೆಯ ನಿಯೋಜನೆ ಸಂಸ್ಥೆಯ ಪೋರ್ಟಲ್ ಅನ್ನು ಉಲ್ಲಂಘಿಸುವ ಏಕಕಾಲದಲ್ಲಿ ಪ್ರಯತ್ನಗಳನ್ನು ಸಹ ವಿಫಲಗೊಳಿಸಲಾಗಿದೆ. ಯಾವುದೇ ಕಾರ್ಯಾಚರಣೆಯ ಅಥವಾ ವರ್ಗೀಕೃತ ಮಾಹಿತಿಯ ಮೇಲೆ ಪರಿಣಾಮ ಬೀರದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+