ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರಿಗಾಗಿ ಬಲಿಷ್ಠ ಬುಲೆಟ್ ಪ್ರೂಫ್ ಜಾಕೆಟ್ ಕಂಡು ಹಿಡಿದ ಸೈನ್ಯಾಧಿಕಾರಿ

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಗಡಿ ಕಾಯುವ ಸೈನಿಕರ ಸುರಕ್ಷತೆಗಾಗಿ ಸೇನಾ ಮೇಜರ್ ಒಬ್ಬರು ಆಧುನಿಕ ತಂತ್ರಜ್ಞಾನದ ಅಧಿಕ ಸುರಕ್ಷತೆಯ ಬುಲೆಟ್ ಪ್ರೂಫ್ ಜಾಕೆಟ್ ಕಂಡು ಹಿಡಿದಿದ್ದಾರೆ.

ಮೇಜರ್ ಅನೂಪ್ ಮಿಶ್ರಾ ಹೊಸ ಬುಲೆಟ್ ಪ್ರೂಫ್ ಜಾಕೆಟ್ ಕಂಡು ಹಿಡಿದಿದ್ದು, ಈ ಬುಲೆಟ್ ಪ್ರೂಫ್ ಜಾಕೆಟ್ ಸ್ನೈಪರ್ ಗುಂಡನ್ನೂ ಸಹ ನಿರೋಧಿಸಬಲ್ಲದು, ಅದೂ ಕೇವಲ ಹತ್ತು ಅಡಿ ದೂರದಿಂದ!

'ಲೆವೆಲ್ 4' ಬುಲೆಟ್ ಪ್ರೂಫ್ ಜಾಕೆಟ್ ಎಂದು ಕರೆಯಲಾಗುತ್ತಿರುವ ಈ ಜಾಕೆಟ್ ಅನ್ನು ಅನೂಪ್ ಮಿಶ್ರಾ ಅವರು ಪುಣೆಯ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಯಾರಿಸಿದ್ದಾರೆ. ಈ ಜಾಕೆಟ್ ಪೂರ್ಣ ದೇಹವನ್ನು ಶತ್ರುಗಳ ಗುಂಡೇಟಿನಿಂದ ರಕ್ಷಿಸುತ್ತದೆ.

Army Major Develops Advanced And Strong Bullet Proof Jacket

ಅನೂಪ್ ಮಿಶ್ರಾ ಅವರಿಗೆ ಒಮ್ಮೆ ಗುಂಡೇಟು ತಗುಲಿತ್ತಂತೆ. ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದರೂ ಸಹ ಗುಂಡಿನಿಂದಾಗಿ ತೀವ್ರ ಗಾಯವಾಗಿತ್ತು, ಹಾಗಾಗಿ ಬುಲೆಟ್ ಪ್ರೂಫ್ ಜಾಕೆಟ್‌ ನ ಕ್ಷಮತೆ ಹೆಚ್ಚಿಸುವ ನಿರ್ಣಯಕ್ಕೆ ಬಂದು ಈ ಜಾಕೆಟ್ ಅನ್ನು ಅನೂಪ್ ಮಿಶ್ರಾ ಅಭಿವೃದ್ಧಿಪಡಿಸಿದ್ದಾರೆ.

ಪಾಕ್ ಗಡಿಯಲ್ಲಿ ಪಾಕಿಸ್ತಾನ ಸ್ನೈಪರ್‌ ಗಳಿಂದ ಸೈನಿಕರನ್ನು ರಕ್ಷಿಸಲು ಈ ಗುಂಡು ನಿರೋಧಕ ಜಾಕೇಟ್‌ಗಳು ಸಹಾಯ ಆಗಲಿವೆ ಎಂಬುದು ಅನೂಪ್ ಮಿಶ್ರಾ ಅಭಿಮತ.

ಬುಲೆಟ್ ಪ್ರೂಫ್ ಜಾಕೆಟ್ ಕಂಡು ಹಿಡಿದಿರುವ ಅನೂಪ್ ಮಿಶ್ರಾ ಗೆ ಸೇನಾ ದಂಡನಾಯಕ ಬಿಪಿನ್ ರಾವತ್ ಅವರು, 'ಆರ್ಮಿ ಡಿಸೈನ್ ಬ್ಯೂರೋ ಎಕ್ಸಲೆನ್ಸ್' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಲೆವೆಲ್ 4 ಮಾದರಿಯ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ತಯಾರಿಸಲು ಟೆಂಡರ್ ಕರೆಯಲಾಗುವುದು ನಂತರ ಸೇನೆಯ ಯಾವುದಾದರೂ ಒಂದು ತುಕಡಿಗೆ ಈ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಬಳಕೆಗೆ ನೀಡಲಾಗುವುದು ಎಂದು ಸೇನೆ ಹೇಳಿದೆ.

English summary
Army major Anup Misra develops advanced and strong bullet proof jacket. He claims his bullet proof jacket can withstand even sniper rifle bullets from 10m distance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X