ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲು ಸಹಾಯ ಮಾಡಿದ ಶ್ವಾನ 'ಜೂಮ್' ಇನ್ನಿಲ್ಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಕಾಶ್ಮೀರದ ಅನಂತನಾಗ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಅಡಗಿರುವ ಭಯೋತ್ಪಾದಕರ ಅಡಗುತಾಣವನ್ನು ಪತ್ತೆಹಚ್ಚಿದ ಆರ್ಮಿ ನಾಯಿ ಜೂಮ್ ಇಂದು ಮಧ್ಯಾಹ್ನ ಸಾವನ್ನಪ್ಪಿದೆ. ಎರಡು ಗುಂಡುಗಳನ್ನು ತಗುಲಿದ ನಂತರವೂ ಜೂಮ್ ಹೆಸರಿನ ಭಾರತೀಯ ಸೇನೆಯ ಶ್ವಾನ ಇನ್ನೂ ಗಾಯಗೊಂಡ ಸ್ಥಿತಿಯಲ್ಲಿ ನಿಂತಿದ್ದ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಈ ಕಾರ್ಯಾಚರಣೆಯಲ್ಲಿ ವೀರ ಸೇನಾ ಶ್ವಾನ 'ಜೂಮ್' ಸೈನಿಕರಂತೆ ಉಗ್ರರ ವಿರುದ್ಧ ಹೋರಾಟ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರನ್ನು ಸದೆಬಡಿದ ವೀರ ಸೇನಾ ಶ್ವಾನ 'ಜೂಮ್' ಕೊನೆಗೂ ಜೀವನ್ಮರಣ ಹೋರಾಟದಲ್ಲಿ ಸೋತಿದೆ. ಜೂಮ್ ಎಂದು ಕರೆಯುವ ಸೇನಾ ನಾಯಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ 54 AFVHನ ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಆಸ್ಪತ್ರೆಯಲ್ಲಿ ನಿಧನವಾಯಿತು. ಭಾನುವಾರ ಅನಂತ್‌ನಾಗ್‌ನಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನೆಯ ಸ್ನಿಫರ್ ಡಾಗ್ ಜೂಮ್ ಬೇಟೆಯಾಡಿದ ಹಾಗೆ ಭಯೋತ್ಪಾದಕರು ಸುತ್ತುವರಿದಿದ್ದ ಮನೆಯೊಳಗೆ ಕಳುಹಿಸಲಾಯಿತು.

ಜೂಮ್ ಮನೆಗೆ ಪ್ರವೇಶಿಸಿದ ತಕ್ಷಣ, ಭಯೋತ್ಪಾದಕರನ್ನು ಗುರುತಿಸಿ ಉಗ್ರರ ಮೇಲೆ ದಾಳಿ ಮಾಡಿತು, ಆಗ ಮಾತ್ರ ಅಡಗಿಕೊಂಡಿದ್ದ ಭಯೋತ್ಪಾದಕರು ಗುಂಡು ಹಾರಿಸಿದರು, ನಂತರ ಜೂಮ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿತ್ತು. ಆದರೆ, ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ 2 ಬುಲೆಟ್‌ ತಗುಲಿದ್ದ ಆರ್ಮಿ ಶ್ವಾನ 'ಜೂಮ್' ಇದೀಗ ಶಸ್ತ್ರಚಿಕಿತ್ಸೆಯ ಒಂದು ದಿನದ ನಂತರ ಸಾವನ್ನಪ್ಪಿದೆ.

Army dog Zoom: Army assault dog Zoom, injured during J&K encounter, dies

ಜೂಮ್‌ಗೆ ಎರಡು ಗುಂಡುಗಳು ತಗುಲಿದರು ಹೋರಾಟ

ಜೂಮ್‌ಗೆ ಎರಡು ಗುಂಡುಗಳು ತಗುಲಿ ಒಂದು ಕಾಲು ಕೂಡ ಮುರಿದಿದೆ. ಗುಂಡುಗಳು ತಗುಲಿದ್ದರೂ, ಜೂಮ್ ಬಿಡಲಿಲ್ಲ ಮತ್ತು ಭಯೋತ್ಪಾದಕರೊಂದಿಗೆ ಸೆಣಸಾಡಿತು. ಪರಿಣಾಮ ಇಬ್ಬರು ಉಗ್ರರು ಹತರಾಗಿದ್ದಾರೆ. ಜೂಮ್ ಶಸ್ತ್ರಚಿಕಿತ್ಸೆಯ ನಂತರವೂ ಸ್ಥಿತಿ ಗಂಭೀರವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಆರ್ಮಿ ಡಾಗ್ ಜೂಮ್ ಶ್ರೀನಗರದ ಆರ್ಮಿ ವೆಟರ್ನರಿ ಹಾಸ್ಪಿಟಲ್ 54 ಎಎಫ್‌ವಿಹೆಚ್ (ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್) ನಲ್ಲಿ ವೈದ್ಯಕೀಯ ತಂಡದ ತೀವ್ರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು.

ಜೂಮ್‌ನ ಸ್ಥಿತಿ ಸುಧಾರಿಸುತ್ತಿದೆ ಮತ್ತು ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತಿದೆ ಎಂದು ಸೇನೆಯಿಂದ ಹೇಳಲಾಗಿದೆ. ಗುರುವಾರ ಬೆಳಿಗ್ಗೆ 11:45 ರ ಸುಮಾರಿಗೆ ಜೂಮ್ ಆರೋಗ್ಯವಾಗಿ ಕಂಡರು, ಆದರೆ ಇದ್ದಕ್ಕಿದ್ದಂತೆ ಅವರು ಉಸಿರುಗಟ್ಟಿ ಸಾವನ್ನಪ್ಪಿದರು. ಜೂಮ್ ಮಧ್ಯಾಹ್ನ 12 ಗಂಟೆಗೆ ಕೊನೆಯುಸಿರೆಳೆದಿದೆ. ಇದೀಗ ಸೇನೆಯಿಂದ ಸಂಪೂರ್ಣ ಗೌರವದೊಂದಿಗೆ ಜೂಮ್ ಗೆ ಅಂತಿಮ ವಿದಾಯ ನೀಡಲು ಸಿದ್ಧತೆ ನಡೆಸಲಾಗಿದೆ.

English summary
Army dog Zoom: Army assault dog 'Zoom', injured during J&K encounter, dies Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X