ಕರ್ನಾಟಕ ಪ್ರವಾಸಿಗರಿಗೆ ತಿರುಪತಿ ತ್ವರಿತ ದರ್ಶನ ಸಹಿತ ಹೊಸ ಪ್ಯಾಕೇಜ್‌

Recommended Video

      ತಿರುಪತಿ ತಿರುಮಲ ತಿಮ್ಮಪ್ಪನ ತ್ವರಿತ ದರ್ಶನಕ್ಕೆ ವೋಲ್ವೋ ಬಸ್ ಸರ್ವೀಸ್

      ಬೆಂಗಳೂರು, ಜೂನ್ 22: ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ತಿರುಪತಿಗೆ ಎರಡು ಹೊಸ ಮಲ್ಟಿ ಆಕ್ಸೆಲ್ ವೋಲ್ವೊ ಬಸ್‌ ಸಂಚಾರ ಆರಂಭಿಸಿದೆ.

      ಬಸ್‌ಗಳು ಪ್ರತಿನಿತ್ಯ ಬೆಂಗಳೂರಿನಿಂದ ತಿರುಪತಿಗೆ ಸಂಚರಿಸಲಿದೆ. ಪ್ಯಾಕೇಜ್ ಪ್ರವಾಸ ಮಾದರಿಯಲ್ಲಿ ಟಿಕೆಟ್ ಲಭ್ಯವಿದೆ. ವಯಸ್ಕರಿಗೆ 2,050 ಮತ್ತು ಮಕ್ಕಳಿಗೆ 1,750 ರೂ. ದರ ನಿಗದಿಪಡಿಸಲಾಗಿದೆ. ಇದು 300 ರೂ. ದರದ ಶೀಘ್ರ ದರ್ಶನ ಟಿಕೆಟ್ ಒಳಗೊಂಡಿದೆ.

      ನಿಗಮಕ್ಕೆ ನಿತ್ಯ 2,500 ದರ್ಶನ ಟಿಕೆಟ್‌ಗಳಿದ್ದು ಟಿಟಿಡಿ ಒದಗಿಸಲಿದೆ. ಯಾವುದೇ ಅಡೆತಡೆ ಇಲ್ಲದೆ ತಿಮ್ಮಪ್ಪನ ದರ್ಶನ ಪಡೆಯಲು ಇದು ಸಹಕಾರಿಯಾಗಲಿದೆ.

      APTDC launches vovlo service to Tirupati

      ವಾರಾಂತ್ಯದಲ್ಲಿ ಟಿಕೆಟ್ ದರ ವಯಸ್ಕರಿಗೆ 2,450 ರೂ. ಹಾಗೂ ಮಕ್ಕಳಿಗೆ 2,170 ರೂ. ನಿಗದಿಪಡಿಸಲಾಗಿದೆ. ಪ್ರಯಾಣ ದರದಲ್ಲಿ ಬೆಳಗಿನ ತಿಂಡಿ ವ್ಯವಸ್ಥೆ ಒದಗಿಸಲಾಗುತ್ತದೆ. ನಿತ್ಯ ರಾತ್ರಿ 9ಗಂಟೆಗೆ ಬೆಂಗಳೂರಿನಿಂದ ಬಸ್ ಹೊರಡಲಿದೆ. ಎಪಿಟಿಡಿಸಿ ಪ್ರವಾಸ ಪ್ಯಾಕೇಜ್‌ಗಳಿಂದ ಮೇ ತಿಂಗಳಲ್ಲಿ 3 ಕೋಟಿ ರೂ. ಆದಾಯ ಗಳಿಸಿದೆ. ಪ್ರಸಕ್ತ ವರ್ಷದಲ್ಲಿ 25 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ಸುದರ್ಶನ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+