ಸಾಧಕ ಮಕ್ಕಳಿಂದ ರಾಷ್ಟ್ರಪ್ರಶಸ್ತಿಗೆ ಅರ್ಜಿ ಆಹ್ವಾನ

Written By:
Subscribe to Oneindia Kannada

ಬೆಂಗಳೂರು, ಜುಲೈ, 02: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ "ರಾಷ್ಟ್ರ ಪ್ರಶಸ್ತಿ" ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿ ಪಡಿಸಿರುವ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕ ಕಚೇರಿ ಮತ್ತು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಡೆದು ಜುಲೈ 20ರೊಳಗೆ ಸಲ್ಲಿಸಬೇಕು.

ಅರ್ಜಿಯನ್ನು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ಕಲೆ, ಸಾಂಸ್ಕೃತಿಕ ಕ್ಷೇತ್ರ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಕ್ಕಳು ಅರ್ಜಿ ಸಲ್ಲಿಕೆ ಮಾಡಬಹುದು. ಪೂರಕ ದಾಖಲೆಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ.[ನಕಲಿ ರೇಶನ್ ಕಾರ್ಡ್ ಹುಡುಕಿಕೊಡಿ, ಬಹುಮಾನ ಗೆಲ್ಲಿ]

children
Photo Credit:

* ಮಕ್ಕಳು ಭಾರತದಲ್ಲಿ ನೆಲೆಸಿರುವರಾಗಿರಬೇಕು
* ಮಕ್ಕಳು 9 ರಿಂದ 16 ವರ್ಷದ ಒಳಗಿನವರಾಗಿರಬೇಕು
* ವಯಸ್ಸಿನ ದೃಢೀಕರಣ ಪತ್ರ ಸಲ್ಲಿಕೆ ಮಾಡಬೇಕು.[ಕೊಪ್ಪಳ : ಟೊಯೋಟಾದಿಂದ ಜುಲೈ 5ಕ್ಕೆ ಕ್ಯಾಂಪಸ್ ಸಂದರ್ಶನ]

ಮಹಿಳಾ ಸಾಧಕಿಯರ ಸಾಕ್ಷ್ಯಚಿತ್ರಕ್ಕೆ ಮಾಹಿತಿ ನೀಡಿ
ಕಲೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಅಭಿವೃದ್ಧಿ, ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರ ಜೀವನ - ಸಾಧನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಉದ್ದೇಶಿಸಿದೆ.

ಈ ಸಂಬಂಧ ವಿಶೇಷ ಸಾಧನೆಗೈದ ನಾಡಿನ ಮಹಿಳೆಯರ ಮಾಹಿತಿಯನ್ನು, ಅವರ ಸಾಧನೆಯ ವಿವರ, ಪಡೆದಿರುವ ಪ್ರಶಸ್ತಿಗಳ ವಿವರ ಹಾಗೂ ಇನ್ನಿತರ ಮಾಹಿತಿಯನ್ನು ಪೂರಕ ದಾಖಲೆಯೊಡನೆ ಜುಲೈ 15 ರೊಳಗೆ ಸಲ್ಲಿಕೆ ಮಾಡಬೇಕು.

ಸಲ್ಲಿಸಬೇಕಾದ ವಿಳಾಸ
ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು
560 001.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Union Government has invited applications for 'National awards' to Children for the achievements of art, music etc. Last date for submission of application is July 20. 2016.
Please Wait while comments are loading...