Apple iPhone 18 Pro ಕ್ರೇಜ್: ಪತ್ನಿಗೆ ಗಿಫ್ಟ್ ಮಾಡಲು ಚಿನ್ನವನ್ನೇ ಮಾರಾಟ ಮಾಡಿದ ಪತಿರಾಯ

ನವದೆಹಲಿ: ಟೆಕ್ ದೈತ್ಯ ಆ್ಯಪಲ್ ಕಂಪನಿಯ ಬಹುನಿರೀಕ್ಷಿತ 'ಐಫೋನ್ 18 ಪ್ರೋ' ಮತ್ತು 'ಐಫೋನ್ 18 ಪ್ರೋ ಮ್ಯಾಕ್ಸ್' ಸ್ಮಾರ್ಟ್‌ಫೋನ್‌ಗಳ ಅಧಿಕೃತ ಮಾರಾಟ ಶುಕ್ರವಾರದಿಂದ (ಸೆಪ್ಟೆಂಬರ್ 18) ಭಾರತದಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಐಫೋನ್ ಎಂದಾಕ್ಷಣ ಟೆಕ್ ಪ್ರಿಯರಲ್ಲಿ ಎಲ್ಲಿಲ್ಲದ ಕ್ರೇಜ್ ಇರುತ್ತದೆ. ಹೊಸ ಮಾಡೆಲ್ ಮಾರುಕಟ್ಟೆಗೆ ಬರುತ್ತಿದ್ದಂತೆ ಅದನ್ನು ಖರೀದಿಸಲು ಮುಗಿಬೀಳುವ ಜನರ ಉತ್ಸಾಹ ಈ ಬಾರಿಯೂ ಎದ್ದುಕಾಣುತ್ತಿದೆ.

ದೆಹಲಿ, ನೋಯ್ಡಾ, ಮುಂಬೈ ಹಾಗೂ ಬೆಂಗಳೂರಿನ ಆ್ಯಪಲ್ ಸ್ಟೋರ್‌ಗಳ ಮುಂದೆ ಬೆಳಂಬೆಳಗ್ಗೆಯೇ ಗ್ರಾಹಕರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಐಫೋನ್ ಖರೀದಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ನೋಯ್ಡಾದ ಆ್ಯಪಲ್ ಸ್ಟೋರ್‌ನ ಹೊರಗೆ ಕಂಡುಬಂದ ದೃಶ್ಯವೊಂದು ಆ್ಯಪಲ್ ಐಫೋನ್ ಕ್ರೇಜ್‌ಗೆ ಸಾಕ್ಷಿಯಾಗಿದೆ.

Apple iPhone 18 Pro Craze In India Delhi Man Sells Gold To Buy Phone For Wife Others Wait Hours

ಹೌದು, ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಐಫೋನ್ ಖರೀದಿಸಲು ಚಿನ್ನವನ್ನೇ ಮಾರಾಟ ಮಾಡಿರುವ ಅಚ್ಚರಿಯ ಘಟನೆ ನಡೆದಿದೆ.

ಪತ್ನಿಗಾಗಿ ಚಿನ್ನ ಮಾರಿ ಐಫೋನ್ 18 ಪ್ರೋ ಖರೀದಿ

ಶುಕ್ರವಾರ ಬೆಳಗ್ಗೆ 8 ಗಂಟೆಗೆ ನೋಯ್ಡಾದ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆ್ಯಪಲ್ ಸ್ಟೋರ್ ಬಾಗಿಲು ತೆರೆಯುವ ಮುನ್ನವೇ ನೂರಾರು ಮಂದಿ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಈ ಸಾಲಿನಲ್ಲಿ ಮೊದಲಿಗೆ ನಿಂತಿದ್ದ ದೆಹಲಿಯ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದರು. ತಾನು ತನ್ನ ಪತ್ನಿಗಾಗಿ ಹೊಸ ಐಫೋನ್ 18 ಪ್ರೋ ಖರೀದಿಸಲು ಬಂದಿರುವುದಾಗಿ ಅವರು ತಿಳಿಸಿದರು.

ಈ ಮೊದಲು ಐಫೋನ್ ಬಳಸದ ತಮ್ಮ ಪತ್ನಿಗೆ, ಅವರ ಆಸೆಯಂತೆ ಹೊಸ ಬರ್ಗಂಡಿ (Burgundy) ಬಣ್ಣದ ಮಾಡೆಲ್ ಅನ್ನ ಗಿಫ್ಟ್ ಮಾಡಲು ಅವರು ನಿರ್ಧರಿಸಿದ್ದರು. ಇದಕ್ಕಾಗಿ ಬರೋಬ್ಬರಿ 1.64 ಲಕ್ಷ ರೂಪಾಯಿ ಹಣ ಹೊಂದಿಸಲು ಅವರು ತಮ್ಮ ಬಳಿಯಿದ್ದ ಚಿನ್ನವನ್ನೇ ಮಾರಾಟ ಮಾಡಿದ್ದಾರೆ.

"ಚಿನ್ನ ಮಾರಿಯೇ ಈ ಫೋನ್ ತೆಗೆದುಕೊಳ್ಳಲು ಬಂದಿದ್ದೇನೆ. ಇಂದು ನನ್ನ ಬಳಿ ಹಣವಿದೆ, ಹಿಂದೆ ಇರಲಿಲ್ಲ. ಮುಂದೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಂದಿನ ಕ್ಷಣವನ್ನು ಎಂಜಾಯ್ ಮಾಡಬೇಕು" ಎಂದು ಅವರು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಪಂಜಾಬ್‌ನಿಂದ ಬಂದು 3.5 ಲಕ್ಷ ರೂ. ಮೌಲ್ಯದ ಫೋನ್ ಖರೀದಿ

ಕೇವಲ ದೆಹಲಿ ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದಲೂ ಐಫೋನ್ ಪ್ರಿಯರು ನೋಯ್ಡಾಗೆ ಆಗಮಿಸಿದ್ದರು. ಪಂಜಾಬ್‌ನ ಗುರ್ದಿತಾ ಸಿಂಗ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ನೋಯ್ಡಾಕ್ಕೆ ಬಂದು, ಮದುವೆಯಾಗಲಿರುವ ತಮ್ಮ ಭಾವಿ ಪತ್ನಿಗೆ ಉಡುಗೊರೆಯಾಗಿ ನೀಡಲು ಐಫೋನ್ 18 ಪ್ರೋ ಖರೀದಿಸಿದ್ದಾರೆ. ಇದಕ್ಕಾಗಿ ಅವರು ಬೆಳಗಿನ ಜಾವ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಜೊತೆಗೆ ತಮಗಾಗಿಯೂ ಒಂದು ಐಫೋನ್ 18 ಪ್ರೋ ಮ್ಯಾಕ್ಸ್ ಖರೀದಿಸಿದ್ದು, ಒಟ್ಟು 3.5 ಲಕ್ಷ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ.

ಮತ್ತೊಂದೆಡೆ ದಂಪತಿ ಮೊದಲೇ ಬುಕ್ ಮಾಡಿದ್ದ ಎರಡು ಐಫೋನ್‌ಗಳನ್ನು ಒಟ್ಟಿಗೆ ಖರೀದಿಸಿ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹಾಂಗ್‌ಕಾಂಗ್‌ನಲ್ಲಿರುವ ತಮ್ಮ ಸ್ನೇಹಿತನ ಮೂಲಕ ಆ್ಯಪಲ್‌ನ ಹೊಸ 'ಐಫೋನ್ ಡುಯೊ' ಅನ್ನು ಮುಂದಿನ ತಿಂಗಳು ತರಿಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಹರಿಯಾಣದಿಂದ ಬಂದಿದ್ದ ಮತ್ತೊಬ್ಬ ಗ್ರಾಹಕ ವಿಶಾಲ್ ಎಂಬುವವರು ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿ, "ಬೆಲೆ ಎಷ್ಟೇ ಹೆಚ್ಚಾದರೂ ನಮಗೆ ಯಾವುದೇ ತೊಂದರೆಯಿಲ್ಲ, ಅದನ್ನು ನಾವು ಮ್ಯಾನೇಜ್ ಮಾಡುತ್ತೇವೆ" ಎಂದು ಹೇಳಿದ್ದಾರೆ.

ಭಾರತದಲ್ಲಿ ಐಫೋನ್ 18 ಪ್ರೋ ಬೆಲೆ ಎಷ್ಟು?

ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಐಫೋನ್ 18 ಪ್ರೋ (256GB) ಮಾಡೆಲ್‌ನ ಆರಂಭಿಕ ಬೆಲೆ 1,64,900 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇಷ್ಟು ದುಬಾರಿ ಬೆಲೆಯಾಗಿದ್ದರೂ ಕೂಡ ಗ್ರಾಹಕರ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಸೆಪ್ಟೆಂಬರ್ 12ರಂದೇ ಪ್ರೀ-ಬುಕಿಂಗ್ ಆರಂಭವಾಗಿತ್ತು. ಮೊದಲೇ ಫೋನ್ ಬುಕ್ ಮಾಡಿದ್ದವರಿಗೆ ಮಾತ್ರ ಶುಕ್ರವಾರ ಸ್ಟೋರ್ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

ಐಫೋನ್ ಖರೀದಿಸುವ ಸಲುವಾಗಿ ಕೆಲವು ಉದ್ಯೋಗಿಗಳು ಕಚೇರಿಗೆ ರಜೆ ಹಾಕಿ ಬಂದಿದ್ದರೆ, ಮೊದಲೇ ಬುಕ್ ಮಾಡದ ಕೆಲವರು ಸ್ಟೋರ್ ಪ್ರವೇಶಿಸಲು ಅವಕಾಶ ಸಿಗದೆ ನಿರಾಸೆಯಿಂದ ಹಿಂದಿರುಗಬೇಕಾಯಿತು. ಒಟ್ಟಿನಲ್ಲಿ ಹೊಸ ಐಫೋನ್ ಬಿಡುಗಡೆಯ ದಿನದಂದು ಕಂಡುಬಂದ ಈ ಘಟನೆಗಳು ಭಾರತದಲ್ಲಿ ಆ್ಯಪಲ್ ಉತ್ಪನ್ನಗಳ ಮೇಲಿನ ಜನರ ಅತೀವ ಕ್ರೇಜ್ ಅನ್ನು ಸಾಬೀತುಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+