Anti Reservation: ಕೇಂದ್ರ ಸರ್ಕಾರಕ್ಕೆ 2 ಹೊಸ ಅಭಿಯಾನಗಳ ತಲೆಬಿಸಿ: ಮೀಸಲಾತಿ ವಿರೋಧಿ ಅಭಿಯಾನ ಶುರು!
Anti Reservation: ಭಾರತದಾದ್ಯಂತ ಜೆನ್‌ಜೀ ನಡೆಸಿದ ಅಭಿಯಾನವು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಭಾರತದಾದ್ಯಂತ ಮತ್ತೆರಡು ಹೊಸ ಅಭಿಯಾನಗಳು ಅಥವಾ ಪಾರ್ಟಿ ಪ್ರಾರಂಭವಾಗಿವೆ. ಹೌದು ಭಾರತದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕು ಹಾಗೂ ಉದ್ಯೋಗ ಖಾತರಿ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಒಟ್ಟಾರೆ ಸುಧಾರಣೆ ತರಬೇಕು ಎಂದು ಆಗ್ರಹಿಸಿ, ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ದೇಶವ್ಯಾಪ್ತಿ ಪ್ರತಿಭಟನೆ ನಡೆಸಿದ್ದರು.
ದೇಶದಾದ್ಯಂತ ಜೆನ್‌ಜೀಗಳು ನಡೆಸಿದ ಹೋರಾಟವು ಮೊದಲ ಹಂತದಲ್ಲಿ ಯಶಸ್ಸು ಗಳಿಸಿದೆ. ದೇಶ ವ್ಯಾಪ್ತಿ ಜೆನ್‌ಜೀ ನಡೆಸಿದ್ದ ಹೋರಾಟವು ಮೊದಲ ಹಂತದಲ್ಲಿ ಯಶಸ್ಸು ಗಳಿಸಿದೆ. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆನ್‌ಜೀ ಹಾಗೂ ಕಾಕ್ರೋಚ್ ಜನತಾ ಪಾರ್ಟಿಯ ಬೇಡಿಕೆಗಳನ್ನು ಈಡೇರಿಸುವುದಾಗಿಯೂ ಕೇಂದ್ರ ಸರ್ಕಾರವು ಭರವಸೆ ನೀಡಿದೆ.

ಇದೀಗ ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನ ಯಶಸ್ಸು ಸಾಧಿಸಿದ ಬೆನ್ನಲ್ಲೇ ಇದೇ ಮಾದರಿಯ ಇನ್ನೆರಡು ಪಾರ್ಟಿಗಳು ಅಥವಾ ಅಭಿಯಾನ ಪ್ರಾರಂಭವಾಗಿದೆ. ಒಂದು ಇ20 ಜನತಾ ಪಾರ್ಟಿ (E20 JANTA PARTY) ಹಾಗೂ ಮತ್ತೊಂದು Reservation Hatao Andolan (RHA) ಎನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಇದನ್ನು ಕೆಲವರು ಉದ್ದೇಶಪೂರ್ವಕವಾಗಿ ಟ್ರೆಂಡ್ ಮಾಡುತ್ತಿದ್ದಾರೆ ಎಂದೂ ಹೇಳಲಾಗಿದೆ. ಮೊದಲನೆಯದಾಗಿ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನವು ದೇಶದಲ್ಲಿ ಯಶಸ್ಸು ಗಳಿಸಿದ ಬೆನ್ನಲ್ಲೇ ಹಲವು ಅಭಿಯಾನಗಳು ದೇಶದಲ್ಲಿ ಪ್ರಾರಂಭವಾಗಿವೆ.
ಇ20 ಜನತಾ ಪಾರ್ಟಿ (E20 JANTA PARTY)
ದೇಶದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಜೆನ್‌ಜೀಗಳ ಹೋರಾಟ ಕಾವು ಪಡೆದುಕೊಳ್ಳುವುದಕ್ಕೂ ಮುಂಚೆ ದೇಶದಾದ್ಯಂತ ಎಥನಾಲ್ ಪೆಟ್ರೋಲ್ / E20ಗೆ ಭಾರೀ ಚರ್ಚೆ ನಡೆದಿತ್ತು. ಒಂದು ಹಂತದಲ್ಲಿ ಎಥನಾಲ್ ಮಿಶ್ರಿತ ಪೆಟ್ರೋಲ್ ಬೇಡ ಹಾಗೂ ಸಚಿವ ಸ್ಥಾನಕ್ಕೆ ನಿತಿನ್ ಗಡ್ಕರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದ್ದರು.
ಆದರೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಚಾರ; ಜೆನ್‌ಜೀ ಹೋರಾಟ ಹೆಚ್ಚಾದ ಮೇಲೆ ಎಥನಾಲ್ ವಿಚಾರವು ಹಿಂದೆ ಸರಿದಿತ್ತು. ಇದೀಗ ಎಥನಾಲ್ ಮಿಶ್ರಿತ ಪೆಟ್ರೋಲ್ ವಿಚಾರವು ಮುನ್ನೆಲೆಗೆ ಬಂದಿದೆ. ಇ20 ಜನತಾ ಪಾರ್ಟಿ (E20 JANTA PARTY) ಎನ್ನುವ ಅಭಿಯಾನವು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
ಮೀಸಲಾತಿ ವಿರೋಧಿ ಅಭಿಯಾನ Reservation Hatao Andolan (RHA)
ಭಾರತದಲ್ಲಿ ಇದೀಗ ಮೀಸಲಾತಿ ವಿರೋಧ ಅಭಿಯಾನವನ್ನು ಕೆಲವರು ಪ್ರಾರಂಭಿಸಿದ್ದಾರೆ. ಮೀಸಲಾತಿ ಹಟಾವೋ ಆಂದೋಲನ (RHA) ಎನ್ನುವ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಅಭಿಯಾನದ ರುವಾರಿಗಳು ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಹಲವರಂತೆ ಸರ್ಕಾರದಲ್ಲಿನ ಬದಲಾವಣೆಯು ಮೀಸಲಾತಿ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ತರಬಹುದು ಎಂದು ನಾವು ನಂಬಿದ್ದೆವು. ಆದರೆ ಬಿಜೆಪಿ ಹಾಗೆ ಮಾಡುವಲ್ಲಿ ವಿಫಲವಾಯಿತು.
ಬದಲಾಗಿ, ಮೀಸಲಾತಿ ನೀತಿಗಳು ವಿಕಸನಗೊಂಡು ವಿಸ್ತರಿಸುತ್ತಲೇ ಇದ್ದಾವೆ. ನಮ್ಮ ತೀರ್ಮಾನ ಸರಳವಾಗಿದೆ: ಈ ಸಮಸ್ಯೆಯನ್ನು ಪಕ್ಷ ರಾಜಕೀಯಕ್ಕೆ ಸೀಮಿತ ಮಾಡಲು ಸಾಧ್ಯವಿಲ್ಲ. ನಮ್ಮ ಗಮನವು ಪಕ್ಷದ ಮೇಲಲ್ಲ, ನೀತಿಯ ಮೇಲಿದೆ. ಇದು ಸಾರ್ವಜನಿಕರ ಚಳವಳಿಯಾಗಿದ್ದು, ಪ್ರತಿಯೊಂದು ರಾಜಕೀಯ ಪಕ್ಷದಿಂದ ಸ್ವತಂತ್ರವಾಗಿದೆ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಲಾಗಿದೆ.


Click it and Unblock the Notifications
