ದೆಹಲಿಯಲ್ಲಿ ಶ್ರದ್ಧಾ ಮಾದರಿಯ ಮತ್ತೊಂದು ಕೊಲೆ, 20 ಬಾರಿ ಇರಿದ ಗೆಳೆಯ

ದೆಹಲಿ ಮೇ 29: 16 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಕೆಯ ಪ್ರಿಯಕರ ಸುಮಾರು 20 ಬಾರಿ ಇರಿದು ಪರಾರಿಯಾಗಿದ್ದಾನೆ. ಈ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾಹಿತಿಯ ಪ್ರಕಾರ, ಪ್ರಕರಣ ರೋಹಿಣಿಯ ಶಹಬಾದ್ ಡೈರಿ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ಒಬ್ಬ ಹುಡುಗಿ ಬೀದಿಯಲ್ಲಿ ಹೋಗುತ್ತಿದ್ದಳು. ಅವಳ ಗೆಳೆಯ ಅಲ್ಲಿಗೆ ತಲುಪುತ್ತಾನೆ. ಏಕಾಏಕಿ ಹುಡುಗಿಯ ಮೇಲೆ ಆತ ಚಾಕುವಿನಿಂದ ಇರಿಯಲು ಪ್ರಾರಂಭಿಸುತ್ತಾನೆ. ಸುತ್ತಲೂ ಅನೇಕ ಜನರು ಇದ್ದರೂ ಯಾರೂ ಅವನನ್ನು ತಡೆಯಲು ಪ್ರಯತ್ನಿಸಸುವುದಿಲ್ಲ.

Another Shraddha-style murder in Delhi, boyfriend stabbed to girl friend 20 times

ಮೃತ ಬಾಲಕಿಯನ್ನು ಸಾಕ್ಷಿ ಎಂದು ಗುರುತಿಸಲಾಗಿದ್ದು, ಆರೋಪಿಯ ಹೆಸರು ಸಾಹಿಲ್ ಎಂದು ಗುರುತಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಸಂಬಂಧ ಹೊಂದಿದ್ದರು. ಭಾನುವಾರ ಅವರ ನಡುವೆ ಜಗಳ ನಡೆದಿದ್ದು, ನಂತರ ಆರೋಪಿ ಬಾಲಕಿಯ ಇ-36 ಜೆಜೆ ಕಾಲೋನಿ ಮನೆ ಬಳಿ ತೆರಳಿದ್ದರು.

ಈ ವೇಳೆ ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಬಾಲಕಿಯ ಮೇಲೆ ಹಲ್ಲೆ ನಡೆಸಲಾಗಿದೆ. ಸುಮಾರು 20 ಬಾರಿ ಆಕೆಗೆ ಚುಚ್ಚಿ ಕೊಲೆ ಮಾಡಲಾಗಿದೆ. ಚಾಕು ಬಾಲಕಿಯ ತಲೆಗೆ ಸಿಕ್ಕಿಕೊಂಡಿದೆ. ಬಳಿಕ ಆರೋಪಿ ಕಲ್ಲು ಎತ್ತಿಕೊಂಡು ಅವಳ ಮುಖಕ್ಕೆ ಎಸೆದಿದ್ದಾರೆ. ಅಷ್ಟರಲ್ಲಿ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಘಟನಾ ಸ್ಥಳದಲ್ಲಿ ತಂಡವೊಂದು ಅಲ್ಲಿಗೆ ತಲುಪಿತು, ಆದರೆ ಅಷ್ಟು ಹೊತ್ತಿಗೆ ತಡವಾಗಿತ್ತು.

ಅಪ್ರಾಪ್ತ ಹುಡುಗಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಸಾಹಿಲ್ ಅವಳನ್ನು ತಡೆದು ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ಮೃತಳ ತಂದೆಯ ದೂರಿನ ಮೇರೆಗೆ ಪಿಎಸ್ ಶಹಬಾದ್ಯಲ್ಲಿ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ದೆಹಲಿ ಪೊಲೀಸ್ ಪಿಆರ್‌ಒ ಸುಮನ್ ನಲ್ವಾ ಮಾತನಾಡಿ, "ಆರೋಪಿಯನ್ನು ಗುರುತಿಸಲಾಗಿದೆ ಮತ್ತು ನಾವು ಅವನನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಪ್ರಕರಣದ ತನಿಖೆ ಭರದಿಂದ ಸಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರ ವಿವಿಧ ತಂಡಗಳನ್ನು ರಚಿಸಲಾಗಿತ್ತು.

boyfriend stabbed to girl friend 20 times

ಆರೋಪಿ ಸಾಹಿಲ್ ನನ್ನು ಪೊಲೀಸ್ ತಂಡ ಬಂಧಿಸಿದೆ. ಭಾನುವಾರ ನಡೆದ ಕೊಲೆಯ ಬಳಿಕ ಆತ ತಲೆಮರೆಸಿಕೊಂಡಿದ್ದ ಈತನನ್ನು ಪತ್ತೆ ಹಚ್ಚಲು 6 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ದೆಹಲಿಯಲ್ಲಿ ಅಪರಾಧ ಎಸಗಿದ ನಂತರ ಸಾಹಿಲ್ ಬುಲಂದ್‌ಶಹರ್‌ನಲ್ಲಿ ಆಶ್ರಯ ಪಡೆದಿದ್ದನು. ದೆಹಲಿ ಪೊಲೀಸರು ಸೋಮವಾರ ಸಾಕ್ಷಿಯ ಹಂತಕನನ್ನು ಬಂಧಿಸಿದ್ದಾರೆ. ಸಾಕ್ಷಿ ತನ್ನ ಗೆಳೆಯನಿಂದಲೇ ಕೊಲೆಯಾಗಿದ್ದಾಳೆ. ಈ ಹತ್ಯೆ ಮತ್ತೊಮ್ಮೆ ದೆಹಲಿಯನ್ನು ಬೆಚ್ಚಿಬೀಳಿಸಿದೆ.

ಈ ಕ್ರೂರ ಮತ್ತು ಹೇಯ ಹತ್ಯೆಯ ಕುರಿತು ದೆಹಲಿ ಮಹಿಳಾ ಆಯೋಗ ಸ್ವಾತಿ ಮಲಿವಾಲ್ ಅವರು ದೆಹಲಿಯಲ್ಲಿ ಯಾರೂ ಪೊಲೀಸರು ಮತ್ತು ಕಾನೂನಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಕ್ರೌರ್ಯದ ಎಲ್ಲ ಮಿತಿಗಳನ್ನು ದಾಟಲಾಗಿದೆ. ಇಷ್ಟು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇದಕ್ಕಿಂತ ಭಯಾನಕವಾದದ್ದನ್ನು ನಾನು ನೋಡಿಲ್ಲ. ದೆಹಲಿಯಲ್ಲಿ ಬಡವರು ಆತಂಕದಲ್ಲಿ ಬದುಕುತಿದ್ದಾರೆ. ಕ್ರೂರಿಗಳು ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟುತ್ತಲೇ ಇದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಎಂದು ಹೇಳಿದ್ದಾರೆ. ಅಪರಾಧಿಗಳು ನಿರ್ಭೀತರಾಗಿದ್ದಾರೆ, ಪೊಲೀಸರ ಬಗ್ಗೆ ಅವರಿಗೆ ಭಯವಿಲ್ಲ.ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ಜವಾಬ್ದಾರಿ, ಏನಾದರೂ ಮಾಡಿ ಇಂತಹ ಕೃತ್ಯಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಿ. ದೆಹಲಿಯ ಜನರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

ಶ್ರದ್ಧಾ ವಾಕರ್ ಪ್ರಕರಣ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡಿ ದೇಶವನ್ನೇಬೆಚ್ಚಿ ಬೀಳಿಸಿತ್ತು. ಈ ಭಯಾನಕ ಘಟನೆಯು ಮೇ 2022 ರಲ್ಲಿ ಸಂಭವಿಸಿದ್ದರೂ, ಪ್ರಕರಣದ ಹೊಸ ಬೆಳವಣಿಗೆ ಕೇಳಿದಾಗಲೆಲ್ಲಾ ಗೂಸ್‌ಬಂಪ್‌ಗಳನ್ನು ಬರುವಂತಿರುತ್ತವೆ.

18 ಮೇ 2022 ರಂದು ದೆಹಲಿಯ ಮೆಹ್ರೌಲಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರಳಾದ ಶ್ರದ್ಧಾ ವಾಕರ್ ಅನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಮುಂಬೈ ಮೂಲದ ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಲಿವ್-ಇನ್ ಪಾಲುದಾರರಾಗಿದ್ದರು. ಇಬ್ಬರೂ ಮೇ 2022 ರಲ್ಲಿ ಮುಂಬೈನಿಂದ ದೆಹಲಿಗೆ ತೆರಳಿ ಅಲ್ಲಿ ವಾಸವಾಗಿದ್ದರು. ಆದರೆ ಇದಕ್ಕೆ ಇಬ್ಬರ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರು ಕುಟುಂಬದಿಂದ ದೂರ ಉಳಿದಿದ್ದರು. ಹಣದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳಗಳು ಸಂಭವಿಸುತ್ತಿದ್ದವು. ಮೇ 18ರಂದು ಶ್ರದ್ಧಾಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಅಫ್ತಾಬ್ ದೆಹಲಿಯ ವಿವಿಧ ಪ್ರದೇಶಗಳಲ್ಲಿ 18 ದಿನಗಳ ಕಾಲ ಎಸೆದಿದ್ದನು.

ಸುಮಾರು ಎರಡು ತಿಂಗಳಿನಿಂದ ಶ್ರದ್ಧಾ ವಾಕರ್ ತನ್ನೊಂದಿಗೆ ಮಾತನಾಡಿಲ್ಲ ಎಂದು ಶ್ರದ್ಧಾ ಸ್ನೇಹಿತೆಯೊಬ್ಬರು ತಂದೆಗೆ ತಿಳಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಶ್ರದ್ಧಾ ವಾಕರ್ ಅವರ ತಂದೆ ಕಳೆದ ಅಕ್ಟೋಬರ್ 2022 ರಲ್ಲಿ ತಮ್ಮ ಮಗಳನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಬೈ ಪೊಲೀಸರ ತನಿಖೆಯ ನಂತರ ಅವರು ದೆಹಲಿಗೆ ಸ್ಥಳಾಂತರಗೊಂಡಿರುವುದು ಬೆಳಕಿಗೆ ಬಂದಿದ್ದು, ಇಬ್ಬರೂ ದೆಹಲಿಯ ಛತ್ತರ್‌ಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿತ್ತು. ಬಳಿಕ ಅಫ್ತಾಬ್ ಪೂನಾವಾಲಾ ಬಂಧಿಸಿ ವಿಚಾರಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+