• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಖಂಡ ಅಂಕಿತಾ ಹತ್ಯೆ: 'ರೆಸಾರ್ಟ್‌ನಲ್ಲಿ ಡ್ರಗ್ಸ್, ವೇಶ್ಯಾವಾಟಿಕೆ ವ್ಯಾಪಕ' ಮಾಜಿ ಉದ್ಯೋಗಿಗಳು

|
Google Oneindia Kannada News

ರಿಷಿಕೇಶ, ಸೆಪ್ಟೆಂಬರ್ 27: ಉತ್ತರಾಖಂಡದ ರೆಸಾರ್ಟ್‌ನಲ್ಲಿ ಮಾದಕ ವ್ಯಸನ ಮತ್ತು ವೇಶ್ಯಾವಾಟಿಕೆ ವ್ಯಾಪಕವಾಗಿತ್ತು ಎಂದು ಈ ಹಿಂದೆ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ರಿಷಿತಾ ಆರೋಪಿಸಿದ್ದಾರೆ. ಉತ್ತರಖಂಡದ 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ನಾಯಕನ ಮಗ ಪುಲ್ಕಿತ್ ಆರ್ಯ ಅಂಕಿತಾ ಹತ್ಯೆಯ ಆರೋಪಿಗಳಲ್ಲಿ ಪ್ರಮುಖರಾಗಿದ್ದು ಅವರನ್ನು ಬಂಧಿಸಲಾಗಿದೆ. ಅಂಕಿತ ಸಾವಿನ ಒಂದು ದಿನದ ಬಳಿಕ ಆಕೆ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಸಿಎಂ ಆದೇಶದಂತೆ ಧ್ವಂಸ ಮಾಡಲಾಗಿದೆ. ರೆಸಾರ್ಟ್‌ ಅನ್ನೂ ಏಕಾಏಕಿ ಧ್ವಂಸ ಮಾಡಿರುವುದು ಸಾಕ್ಷ್ಯಗಳ ನಾಶ ಮಾಡುವ ಪ್ರಯತ್ನ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ನಡುವೆ ರೆಸಾರ್ಟ್‌ನ ಮಾಜಿ ನೌಕರರಾದ ರಿಷಿತಾ, "ರೆಸಾರ್ಟ್ ಆಡಳಿತ ಅತಿಥಿಗಳಿಗೆ ಅಕ್ರಮ ಮದ್ಯ, ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳನ್ನು ಮತ್ತು ಹುಡುಗಿಯರನ್ನು ಸಹ ನೀಡುತ್ತಿತ್ತು" ಎಂದು ಆರೋಪಿಸಿದ್ದಾರೆ. ಅಲ್ಲಿ ತನ್ನ ಪತಿ ವಿವೇಕ್ ಮನೆಗೆಲಸಗಾರನಾಗಿ ಕೆಲಸ ಮಾಡುತ್ತಿದ್ದರೆ, ಎರಡು ತಿಂಗಳ ಹಿಂದೆ ಅಲ್ಲಿ ರಿಷಿತಾ ಕೆಲಸ ಮಾಡುತ್ತಿದ್ದರು. ಅಂಕಿತಾ ಭಂಡಾರಿ ಆಗಸ್ಟ್‌ನಲ್ಲಿ ಸೇರುವ ಮೊದಲು ರಿಷಿತಾ ಅವರು ರೆಸಾರ್ಟ್ ತೊರೆದಿದ್ದರು.

ಕೆಲವೇ ದಿನಗಳ ನಂತರ ಪುಲ್ಕಿತ್ ಆರ್ಯ ಮತ್ತು ರೆಸಾರ್ಟ್‌ನ ಇಬ್ಬರು ಸಿಬ್ಬಂದಿ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಿದ್ದಾರೆ. ಪೌರಿ ಜಿಲ್ಲೆಯ ರಿಷಿಕೇಶ್ ಬಳಿ ಅಂಕಿತಾ ವೇಶ್ಯಾವಾಟಿಕೆ ಜಾಲದ ಭಾಗವಾಗಲು ನಿರಾಕರಿಸಿದ ನಂತರ ಆಕೆಯನ್ನು ಕೊಲೆ ಮಾಡಲಾಯಿತು ಎಂದು ಪೊಲೀಸ್ ತನಿಖೆಯಲ್ಲಿ ಇಲ್ಲಿಯವರೆಗೆ ಕಂಡುಬಂದಿದೆ. ಆದರೆ ಡ್ರಗ್ಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಕುಟುಂಬಸ್ಥರಿಂದ ಗಂಭೀರ ಆರೋಪ

ಕುಟುಂಬಸ್ಥರಿಂದ ಗಂಭೀರ ಆರೋಪ

ಅಂಕಿತ್ ಭಂಡಾರಿ ನಾಪತ್ತೆಯಾದ ಸುಮಾರು ಒಂದು ವಾರದ ನಂತರ ಕಳೆದ ಶುಕ್ರವಾರ ಬಿಜೆಪಿ ನಾಯಕನ ಮಗ ಪುಲ್ಕಿತ್ ಆರ್ಯ ಅವರೊಂದಿಗೆ ಇನ್ನಿಬ್ಬರನ್ನು ಬಂಧಿಸಲಾಯಿತು. ಆಡಳಿತ ಪಕ್ಷದ ನಾಯಕರೊಬ್ಬರು ಪ್ರಕರಣಕ್ಕೆ ಸಂಬಂಧಿಸಿದ್ದರಿಂದ ಪೊಲೀಸರು ವಿಚಾರಣೆಯಲ್ಲಿ ನಿಧಾನವಾಗಿದ್ದಾರೆ ಎಂಬ ಕುಟುಂಬಸ್ಥರು ದೂರಿದ್ದಾರೆ.


"ಅವರು ನನ್ನನ್ನೂ ಅದರಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ ಎಂದು ನನಗೆ ಅನಿಸಿತು. ಜೊತೆಗೆ ಅವರು ನನ್ನನ್ನು ಕೆಟ್ಟದಾಗಿ ನಿಂದಿಸುತ್ತಿದ್ದರು" ಎಂದು ರಿಷಿತಾ ಹೇಳಿದರು.

ರೆಸಾರ್ಟ್‌ನ ಮಾಜಿ ಉದ್ಯೋಗಿಗಳು ಹೇಳುವುದೇನು?

ರೆಸಾರ್ಟ್‌ನ ಮಾಜಿ ಉದ್ಯೋಗಿಗಳು ಹೇಳುವುದೇನು?

'ನಾನು ನನ್ನ ಹೆಂಡತಿಯನ್ನು ಈ ರೀತಿ ನೋಡುವುದನ್ನು ಆಕ್ಷೇಪಿಸಿದ ನಂತರ ಕೆಲವು ಕಳ್ಳತನದ ಆರೋಪದ ಮೇಲೆ ನನ್ನನ್ನು ಥಳಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ' ಎಂದು ಆಕೆಯ ಪತಿ ವಿವೇಕ್ ಹೇಳಿದ್ದಾರೆ. ಸ್ಥಳೀಯ ಪಟ್ವಾರಿ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ಕಂದಾಯ ಅಧಿಕಾರಿ"ನನ್ನ ಮೇಲೆ ಹಲ್ಲೆ ಮಾಡುವುದಲ್ಲದೆ ಮಾನಸಿಕವಾಗಿಯೂ ಹಿಂಸಿಸಿದ್ದಾರೆ" ಜೊತೆಗೆ ಮಾಲೀಕರ ಪರ ನಿಂತಿದ್ದಾರೆ ಎಂದು ರಿಷಿತಾ ಪತಿ ವಿವೇಕ್ ಅವರು ಆರೋಪಿಸಿದರು.

'ಸುಮಾರು ಒಂದು ತಿಂಗಳು ಅಲ್ಲಿ ಕೆಲಸ ಮಾಡಿದ ನಂತರ, ನಾನು ತಪ್ಪು ಚಟುವಟಿಕೆಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದೆ ಮತ್ತು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದೆ' ಎಂದು ರಿಷಿತಾ ಅವರು ಹೇಳಿದರು.

ಕಳ್ಳತನದ ಆರೋಪದ ಮೇಲೆ ಉದ್ಯೋಗಿ ಬಾಹರ್

ಕಳ್ಳತನದ ಆರೋಪದ ಮೇಲೆ ಉದ್ಯೋಗಿ ಬಾಹರ್

"ನಮ್ಮ ಆರೋಪದ ಬಳಿಕ ಕೆಲವೇ ದಿನಗಳು ಅದು ಮಾದಕ ವಿತರಣೆ ನಿಂತಿತು. ಆದರೆ ಪುಲ್ಕಿತ್ ಆರ್ಯ ಡ್ರಗ್ಸ್ ಮತ್ತು ಹುಡುಗಿಯರನ್ನು ಒದಗಿಸುವುದು ಮತ್ತು ಅತಿಥಿಗಳಿಗಾಗಿ ಇತರ ಕೆಲಸಗಳನ್ನು ಮಾಡುವುದು ಮುಂದುವರೆಸಿದರು" ಎಂದು ವಿವೇಕ್ ಹೇಳಿದ್ದಾರೆ.

ಒಂದೂವರೆ ತಿಂಗಳು ಮುಗಿದ ನಂತರ ಅವರು ಸಂಬಳವನ್ನು ಕೇಳಿದರು ಮತ್ತು ನಾನು ತ್ಯಜಿಸುತ್ತಿದ್ದೇನೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಪುಲ್ಕಿತ್ ಆರ್ಯ ನನ್ನ (ವಿವೇಕ್) ಮೇಲೆ ಸಣ್ಣ ಕಳ್ಳತನದ ಆರೋಪ ಮಾಡಿ ಥಳಿಸಿದನು.

"ನಾನು ಪೊಲೀಸರಿಗೆ ಕರೆ ಮಾಡಿದ್ದೇನೆ, ಆ ಪ್ರದೇಶವು ಸಾಮಾನ್ಯ ಪೊಲೀಸ್ ಅಡಿಯಲ್ಲಿಲ್ಲ. ಆದರೆ ಪಟ್ವಾರಿ (ಭೂ ಕಂದಾಯ ಅಧಿಕಾರಿ) ನಿರ್ವಹಿಸುತ್ತಾನೆ ಎಂದು ಹೇಳಿದರು. ನನ್ನ ದೂರಿನ ಮೇರೆಗೆ ಪಟ್ವಾರಿ ಅಲ್ಲಿಗೆ ಬಂದಾಗ, ಅವರು ಪುಲ್ಕಿತ್ ಆರ್ಯ ಅವರನ್ನು ಕೇಳಿದರು.

'ಪಟ್ವಾರಿ ನನ್ನನ್ನು ನಿಂದಿಸಿದರು ಮತ್ತು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡುವುದಾಗಿ ಬೆದರಿಕೆ ಹಾಕಿದರು. ನಾನು ಕ್ಷಮೆಯನ್ನು ಬರೆಯುವಂತೆ ಒತ್ತಾಯಿಸಲಾಯಿತು. ಅವರು ಆ ಕ್ಷಮೆಯನ್ನು ಬ್ಲ್ಯಾಕ್‌ಮೇಲ್ ಸಾಧನವಾಗಿ ಬಳಸಿಕೊಂಡರು. ಆದರೆ ಅಂತಿಮವಾಗಿ ನಾವು ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧರಿದ್ದೇವೆ' ಎಂದು ಅವರು ಆರೋಪಿಸಿದರು. ಅಂಕಿತಾ ಭಂಡಾರಿ ಅವರನ್ನು ದಹನ ಮಾಡಿದ ಎರಡು ದಿನಗಳ ನಂತರ ಪೊಲೀಸರು ನಿಧಾನವಾಗಿ ವರ್ತಿಸಿದ ಆರೋಪದ ಮೇಲೆ ಭಾರಿ ಪ್ರತಿಭಟನೆಗಳ ನಡುವೆಯೇ ಆರೋಪಗಳನ್ನು ಮಾಡಿದ್ದಾರೆ.

ರೆಸಾರ್ಟ್‌ ಧ್ವಂಸಗೊಳಿಸದ್ದು ಯಾಕೆ?

ರೆಸಾರ್ಟ್‌ ಧ್ವಂಸಗೊಳಿಸದ್ದು ಯಾಕೆ?

ಮೃತ ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಆರಂಭದಲ್ಲಿ ಶವವನ್ನು ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದರು. ಅವರು ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಕೆಡವಿರುವುದನ್ನು ಪ್ರಶ್ನಿಸಿದರು. ಇದು ಸಾಕ್ಷ್ಯ ನಾಶಪಡಿಸುವ ಯತ್ನ ಎಂದು ದೂರಿದರು. ಶವಪರೀಕ್ಷೆಯ ವರದಿಯಲ್ಲಿ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತೋರಿಸುತ್ತದೆ. ಜೊತೆಗೆ ಆಕೆಯ ದೇಹ ಮೊಂಡಾದ ಬಲವಾದ ಗಾಯದ ಲಕ್ಷಣಗಳನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಘಟನೆ ಬೆಳಕಿಗೆ ಬಂದ ಬಳಿಕ ಪುಲ್ಕಿತ್ ಆರ್ಯ ಅವರ ತಂದೆ ಮಾಜಿ ಸಚಿವ ವಿನೋದ್ ಆರ್ಯ ಮತ್ತು ಸಹೋದರ ಅಂಕಿತ್ ಆರ್ಯ ಅವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಿದೆ. ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು "ಕಠಿಣ ಕ್ರಮ"ದ ಭರವಸೆ ನೀಡಿದ್ದಾರೆ. "ಇದು ಅತ್ಯಂತ ಘೋರ ಅಪರಾಧ, ಅಪರಾಧಿ ಯಾರೇ ಆಗಿದ್ದರೂ, ಬಿಡುವುದಿಲ್ಲ" ಎಂದಿದ್ದಾರೆ.

English summary
Rishita, who used to work at the resort, alleged that drug addiction and prostitution were rampant in a resort in Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X