ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳು ಅಳ್ತಾರೆ ಅಂತ ಬಾಯಿಗೆ ಖಾರದಪುಡಿ ಹಾಕಿದ ಅಂಗನವಾಡಿ ಶಿಕ್ಷಕಿ

By Nayana
|
Google Oneindia Kannada News

ಆಂಧ್ರಪ್ರದೇಶ, ಜು.10: ಶಾಲೆಗಳಲ್ಲಿ ಮಕ್ಕಳನ್ನು ನಿಯಂತ್ರಣದಲ್ಲಿಡಲು ಶಿಕ್ಷಕರು ದಂಡಿಸುವುದು ಸರ್ವೇ ಸಾಮಾನ್ಯ ಆದರೆ ಇಲ್ಲೊಬ್ಬ ಮಹಾನ್‌ ಶಿಕ್ಷಕಿ ಮಕ್ಕಳ ಗಲಾಟೆಯನ್ನು ನಿಯಂತ್ರಿಸಲು ಮಕ್ಕಳ ಬಾಯಿಗೆ ಖಾರದಪುಡಿ ಹಾಕಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಕ್ಕಳನ್ನು ನಿಯಂತ್ರಣದಲ್ಲಿಡಲು ಖಾರದಪುಡಿ ಎರಚಿದ ಘಟನೆ ನಡೆದಿದೆ. ಇದರಿಂದ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರಿಂದ ಅಂಗನವಾಡಿಗೆ ಧಾವಿಸಿದ ಪೋಷಕರು ಕಾರ್ಯಕರ್ತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ

ಮಕ್ಕಳು ಅಂಗನವಾಡಿಯಲ್ಲಿ ಅಳುತ್ತಾರೆ ಎನ್ನುವ ಕಾರಣಕ್ಕಾಗಿ ಕೋಪ ತಾಳಲಾರದೆ ಮಕ್ಕಳಿಗೆ ಖಾರದ ಪುಡಿ ಎರಚಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಷಯ ತಿಳಿದ ಬಳಿಕ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿದ್ದು, ತಪ್ಪಿತಸ್ಥೆ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Anganawadi teacher sprays chilly powder on children face

ತಪ್ಪಿತಸ್ಥ ಅಂಗನವಾಡಿ ಕಾರ್ಯಕರ್ತೆಯನ್ನು ಕೂಡಲೇ ವಜಾಗೊಳಿಸಿ ಮಕ್ಕಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಶಾಲೆಗಳಲ್ಲಿ ಅಥವಾ ಅಂಗನವಾಡಿಗಳಲ್ಲಿ ಮಕ್ಕಳನ್ನು ಶಿಕ್ಷಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಕಾರದಪುಡಿ ಎರಚಿರುವ ಘಟನೆ ಪೋಷಕರ ವಲಯದಲ್ಲಿ ದಿಗ್ಭ್ರಾಂತಿಯನ್ನು ಉಂಟು ಮಾಡಿದೆ.

ಇತ್ತೀಚೆಗೆ ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲೂ ಕೂಡ ಇಂಥದ್ದೇ ಒಂದು ಘಟನೆ ಪೋಷಕರನ್ನು ಭಯಭೀತರನ್ನಾಗಿಸಿತ್ತು. ಅಂಗನವಾಡಿ ಕಾರ್ಯಕರ್ತೆಯೊಬ್ಬರು ತನ್ನ ಮೊಮ್ಮಗನ ಜತೆಗೆ ಜಗಳವಾಡಿದ ಬಾಲಕ ಗುತ್ತಿಗೆಯನ್ನು ಬ್ಲೇಡ್‌ನಿಂದ ಕೊಯ್ದಿರುವ ಘಟನೆ ವರದಿಯಾಗಿತ್ತು.

English summary
Angry Anganawadi teacher has sprayed with chilly powder on children face at Gudiwada village in Krishnam district of Andhra Pradesh on Tuesday. The teacher was angry because children were allegedly crying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X