Andhra Pradesh: ಆಂಧ್ರದಲ್ಲಿ 8 ತಿಂಗಳ ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ
ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ಗಂಡ ಹೆಂಡತಿ ಜಗಳ ಮಾಡುವುದು ಮಾತ್ರವಲ್ಲ ಕೊಲೆಗಳಾಗುವುದು ಹೆಚ್ಚಾಗುತ್ತಿವೆ. ಪತಿಯೊಬ್ಬ 8 ತಿಂಗಳ ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದ ಭಯಾನಕ ಘಟನೆ ನಡೆದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಳೆದ ದಿನ ಬೆಳಿಗ್ಗೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದಿದ್ದಾನೆ.
ಇಪ್ಪತ್ತೇಳು ವರ್ಷದ ಅನುಷಾ ಮತ್ತು ಜ್ಞಾನೇಶ್ವರ್ ಕಳೆದ ದಿನ (ಏಪ್ರಿಲ್ 14) ಬೆಳಿಗ್ಗೆ ಜಗಳವಾಡಿದರು. ಈ ಸಂದರ್ಭದಲ್ಲಿ ಜ್ಞಾನೇಶ್ವರ್ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. ಬಳಿಕ ಜ್ಞಾನೇಶ್ವರ್ ಪೊಲೀಸರಿಗೆ ತಾನೇ ಶರಣಾಗಿದ್ದಾರೆ.

ಈ ಘಟನೆ ವಿಶಾಖಪಟ್ಟಣಂನ ಪಿಎಂ ಪಾಲೆಮ್‌ನ ಉಡಾ ಕಾಲೋನಿಯಲ್ಲಿ ನಡೆದಿದೆ. ಆ ವ್ಯಕ್ತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಕೇಂದ್ರವನ್ನು ನಡೆಸುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗಳು ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿಗಾಗಿ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರೇಮ ವಿವಾಹ
ಈ ದಂಪತಿಗಳದ್ದು ಪ್ರೇಮ ವಿವಾಹ. ಅಪರಾಧ ಎಸಗಿದ ನಂತರ ಜ್ಞಾನೇಶ್ವರ್ ಸ್ವತ: ಪೊಲೀಸರ ಮುಂದೆ ಶರಣಾಗಿದ್ದಾರೆ. ಜ್ಞಾನೇಶ್ವರ್ ವಿಶಾಖಪಟ್ಟಣದ ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಫಾಸ್ಟ್ ಫುಡ್ ಸೆಂಟರ್ ಉದ್ಯೋಗಿ. ಇವಿರಿಬ್ಬರು ಪ್ರೀತಿಸಿ ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಇತ್ತೀಚೆಗೆ ಇವರಿಬ್ಬರ ನಡುವೆ ಜಗಳಗಳು ಹೆಚ್ಚಾಗಿದ್ದವು. ಜಗಳ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
20 ವರ್ಷಗಳ ನಂತರ ಮಾಜಿ ಸೇನಾ ಅಧಿಕಾರಿ ಬಂಧನ
ಮತ್ತೊಂದು ಘಟನೆಯಲ್ಲಿ ಸೋಮವಾರ ಮಾಜಿ ಸೇನಾ ಸೈನಿಕನನ್ನು 20 ವರ್ಷಗಳ ನಂತರ ಬಂಧಿಸಲಾಗಿದೆ. ಈ ವ್ಯಕ್ತಿಯ ಮೇಲೆ ಪತ್ನಿಯನ್ನು ಕೊಲೆ ಮಾಡಿದ ಆರೋಪ ಇತ್ತು. ಮೇ 14, 1989 ರಂದು ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಸಂಬಂಧಿಸಿದಂತೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಅನಿಲ್ ಕುಮಾರ್ ತಿವಾರಿ (58) ಅವರನ್ನು ಮೇ 31, 1989 ರಂದು ಬಂಧಿಸಲಾಗಿತ್ತು. ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ನವೆಂಬರ್ 21, 2005 ರಂದು, ದೆಹಲಿ ಹೈಕೋರ್ಟ್ ಅವರಿಗೆ ಮಧ್ಯಂತರ ಎರಡು ವಾರಗಳ ಶಿಕ್ಷೆಯನ್ನು ಅಮಾನತುಗೊಳಿಸಿತು. ಆದರೆ ಆತ ಎರಡು ವಾರದ ಬಳಿಕ ಜೈಲಿಗೆ ವಾಪಸ್ ಆಗದೆ ತಲೆ ಮರಿಸಿಕೊಂಡಿದ್ದನು. ಇದೀಗ ದೆಹಲಿ ಪೊಲೀಸರ ಅಪರಾಧ ಶಾಖೆ-ಅಂತರ ರಾಜ್ಯ ಕೋಶದ ತಂಡ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದೆ.












Click it and Unblock the Notifications