Tirupati laddu controversy: "ಧರ್ಮಪಾಲನೆ" ಜಗನ್‌ಗೆ ಚಂದ್ರಬಾಬು ನಾಯ್ಡು ಕ್ಲಾಸ್‌!

ತಿರುಪತಿ ಲಡ್ಡು ವಿವಾದ ಇದೀಗ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಈ ವಿವಾದ ಸೃಷ್ಟಿಯಾದ ಮೇಲೆ ಆಂಧ್ರಪ್ರದೇಶ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ಏಕಕಾಲಕ್ಕೆ ಆಂಧ್ರದ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿಯನ್ನು ಟಾರ್ಗೆಟ್‌ ಮಾಡಿದ್ದಾರೆ. ಇದೀಗ ನನಗೆ ಹಾಗೂ ನನ್ನ ಪಕ್ಷದ ಮುಖಂಡರಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗದಂತೆ ತಡೆಯಲಾಗುತ್ತಿದೆ ಎಂದು ಜಗನ್‌ ಆರೋಪಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ನ ಅಧ್ಯಕ್ಷ ಜಗನ್‌ಮೋಹನ್‌ ರೆಡ್ಡಿ ಅವರು ಶನಿವಾರ (ಸೆಪ್ಟೆಂಬರ್‌ 28)ದಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಬಿಜೆಪಿ ಹಾಗೂ ಆಂಧ್ರದ ಕೆಲವು ಹಿಂದೂಪರ ಸಂಘಟನೆಗಳು ತಿರುಪತಿಗೆ ಬರುವ ಮುನ್ನ ನಿಮ್ಮ ಶ್ರದ್ಧೆಯನ್ನು ಬಹಿರಂಗಪಡಿಸಿ, ದೇವಾಲಯದ ನಿಯಮವನ್ನು ಪಾಲಿಸಿ ಎಂದು ಸವಾಲು ಹಾಕಿದ್ದವು. ಇದರ ಬೆನ್ನಲ್ಲೇ ತಿರುಪತಿ ಭೇಟಿಯಿಂದ ಜಗನ್‌ ಅವರು ಹಿಂದೆ ಸರಿದಿದ್ದರು. ಆದರೆ, ಇದೀಗ ಚಂದ್ರಬಾಬು ನಾಯ್ಡು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Andhra CM Chandrababu Naidu took class to Jagan Mohan Reddy

ತಿರುಪತಿಗೆ ಹೋಗದಂತೆ ನೋಟಿಸ್‌ ಕೊಟ್ರು

ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಆಂಧ್ರಪ್ರದೇಶದ ಆಡಳಿತರೂಢ ಪಕ್ಷ ತೆಲುಗುದೇಶಂನಿಂದ ತೊಡಕಾಗಿದೆ. ನಾನು ಹಾಗೂ ನನ್ನ ಪಕ್ಷದ ನಾಯಕರು ತಿರುಪತಿ ದೇವಾಲಯಕ್ಕೆ ಭೇಟಿ ನೀಡದಂತೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಜಗನ್‌ ಅವರು ಚಂದ್ರಬಾಬು ನಾಯ್ಡು ಅವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಂದ ಎಚ್ಚರಿಕೆಯ ನೋಟಿಸ್‌ ಸಿಕ್ಕಿದೆ ಎಂದು ಅವರು ದೂರಿದ್ದಾರೆ.

ಆದರೆ, ಈ ಆರೋಪವನ್ನು ಚಂದ್ರಬಾಬು ನಾಯ್ಡು ನಿರಾಕರಿಸಿದ್ದು, ಇದು ಶುದ್ಧ ಸುಳ್ಳು ಎಂದಿದ್ದಾರೆ. ಆಯಾ ಧರ್ಮಕ್ಕೆ ಕೆಲವು ನಿಯಮಗಳು ಇರುತ್ತವೆ. ಅದನ್ನು ಎಲ್ಲರೂ ಪಾಲಿಸಬೇಕು ಎಂದು ಚಂದ್ರಬಾಬು ನಾಯ್ಡು ಹೇಳಿದ್ದು. ಒಂದೊಮ್ಮೆ ಆ ರೀತಿ ನೋಟಿಸ್‌ ನೀಡಿದ್ದರೆ, ಮಾಧ್ಯಮಗಳ ಮುಂದೆ ಜಗನ್‌ ಅವರು ಅದನ್ನು ಯಾಕೆ ಬಹಿರಂಗಪಡಿಸಿಲ್ಲ ಎಂದು ಚಂದ್ರಬಾಬು ನಾಯ್ಡು ಅವರು ಪ್ರಶ್ನಿಸಿದ್ದಾರೆ.

Andhra CM Chandrababu Naidu took class to Jagan Mohan Reddy

ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ (ಅನ್ಯ ಧರ್ಮೀಯರು ಹಾಗೂ ವಿದೇಶಿಗರು ಘೋಷಣೆಗೆ ಸಹಿ ಹಾಕುವ ನಿಯಮ ತಿರುಪತಿಯಲ್ಲಿ ಇದೆ) ಶ್ರದ್ಧೆಯನ್ನು ಘೋಷಿಸುವಂತೆ ತೆಲುಗುದೇಶಂ ಪಕ್ಷ ಹಾಗೂ ಬಿಜೆಪಿ ಆಗ್ರಹಿಸಿದ್ದವು. ಆದರೆ, ಇದರ ಬೆನ್ನಲ್ಲೇ ಜಗನ್ ಮೋಹನ್‌ ಅವರು ತಿರುಪತಿ ಪ್ರವಾಸವನ್ನು ರದ್ದು ಮಾಡಿದ್ದರು. ತಿರುಪತಿ ತಿರುಮಲ ದೇವಸ್ಥಾನಂನ (ಟಿಟಿಡಿ) ನಿಯಮಾನುಸಾರ ತಿರುಪತಿ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವುದಕ್ಕಿಂತಲು ಮುಂಚೆ ವಿದೇಶಿಗರು ಹಾಗೂ ಅನ್ಯಧರ್ಮೀಯರು (ಹಿಂದೂಯೇತರರು) ಶ್ರೀ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಭಕ್ತಿ ಗೌರವವನ್ನು ಘೋಷಿಸಿಕೊಳ್ಳಬೇಕು ಎನ್ನುವ ನಿಯಮವಿದೆ. ಈ ಬಗ್ಗೆ ಮಾತನಾಡಿರುವ ಚಂದ್ರಬಾಬು ನಾಯ್ಡು ಅವರು, ಪ್ರತಿ ಧರ್ಮದಲ್ಲೂ ಕೆಲವೊಂದು ನಿಯಮಗಳಿವೆ. ನೀವೂ ಧಾರ್ಮಿಕ ಕೇಂದ್ರವೊಂದಕ್ಕೆ ಭೇಟಿ ನೀಡುತ್ತೀರಿ ಎಂದಾದರೆ, ಕೆಲವು ನಿಯಮಗಳನ್ನು ಪಾಲಿಸಬೇಕು. ಜನರ ನಂಬಿಕೆ ಹಾಗೂ ದೇವರ ಸಂಪ್ರದಾಯದ ವಿಷಯದಲ್ಲಿ ಯಾರೂ ಅಗೌರವ ತೋರಿಸಬಾರದು ಎಂದು ಹೇಳಿದ್ದಾರೆ.

ಜಗನ್‌ ಮೇಲೆ ಗಂಭೀರ ಆರೋಪ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜಗನ್‌ಮೋಹನ್‌ ಮೇಲೆ ಗಂಭೀರ ಆರೋಪ ಮಾಡುವುದರೊಂದಿಗೆ ತಿರುಪತಿ ಲಡ್ಡು ವಿವಾದ ಪ್ರಾರಂಭವಾಯಿತು. ಆಂಧ್ರಪ್ರದೇಶದ ಪ್ರಸಾದವಾದ ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ. ಇದು ಜಗನ್‌ ಮೋಹನ್‌ ರೆಡ್ಡಿ ಆಡಳಿತಾವಧಿಯಲ್ಲಿ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+