ಜಮ್ಮು-ಕಾಶ್ಮೀರದಲ್ಲಿ 2 ಭಯೋತ್ಪಾದಕರನ್ನು ಸದೆಬಡಿದ ಭಾರತ

ಅನಂತ್ ನಾಗ್, ಜನವರಿ 09: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೊಂಕರ್ ನಾಗ್ ಎಂಬಲ್ಲಿ ಇಂದು(ಜ.09) ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರನ್ನು ಬಲಿಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಇಲ್ಲಿನ ಲಾರ್ನೂ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭಾರತೀಯ ಸೇನೆಯ ನಡುವೆ ಕೆಲ ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಕೊನೆಗೂ ಇಬ್ಬರು ಭಯೋತ್ಪಾದಕರನ್ನು ಬಲಿತೆಗೆದುಕೊಳ್ಳುವಲ್ಲಿ ಸೇನೆ ಸಫಲವಾಯಿತು. ಭಯೋತ್ಪಾದಕರ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Anantnag Encounter: Two terrorists killed by security forces

ಇತ್ತೀಚೆಗಷ್ಟೇ ಪುಲ್ವಾಮದ ಭದ್ರತಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸೇನೆಯ 5 ಸೈನಿಕರು ಮೃತಪಟ್ಟಿದ್ದರು. ಈ ಘಟನೆಯ ನಂತರ ಭಯೋತ್ಪಾದಕರ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತ ನಿನ್ನೆ(ಜ.08) ತಾನೇ ಒಬ್ಬ ಭಯೋತ್ಪಾದಕನನ್ನು ಸದೆಬಡಿದಿತ್ತು. ಇಂದು ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿದ್ದು, ಕಾರ್ಯಾಚರಣೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+