Modi swearing-in ceremony: ಮೋದಿ ಪ್ರಮಾಣವಚನ ಸಮಾರಂಭ: ಈ ದೇಶದ ಗಣ್ಯರಿಗೆ ಆಹ್ವಾನ
ದೆಹಲಿ ಜೂನ್ 8: ಸತತ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ರಾತ್ರಿ 7.15ಕ್ಕೆ ತಮ್ಮ ಸಂಪುಟ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಪಂಡಿತ್ ಜವಾಹರಲಾಲ್ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ.
ಶುಕ್ರವಾರ ಬೆಳಗ್ಗೆ ಮೋದಿ ಅವರನ್ನು ಎನ್‌ಡಿಎ, ಬಿಜೆಪಿ ಹಾಗೂ ಲೋಕಸಭೆಯಲ್ಲಿನ ಎನ್‌ಡಿಎ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ಸಂಜೆ ಮೋದಿ ಅವರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದನ್ನು ಮನ್ನಿಸಿದ ರಾಷ್ಟ್ರಪತಿ, ಮೋದಿ ಅವರನ್ನು ಪ್ರಧಾನಿಯಾಗಿ ನೇಮಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ನೆರೆಯ ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ವಿದೇಶಿ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಮುಂದಿನ ದಿನದಲ್ಲಿ ಮೋದಿ ಅವರು ಭೇಟಿ ನೀಡುವ ವಿದೇಶದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ನೆರೆ ರಾಷ್ಟ್ರದ ರಾಜಕೀಯ ಗಣ್ಯರಿಗೆ ಆಹ್ವಾನ
ಈ ಸಮಾರಂಭದಲ್ಲಿ ಭಾಗಿಯಾಗಲು ಮಾಲ್ಡೀವ್ಸ್ ಸರ್ಕಾರದ ಹಲವಾರು ಹಿರಿಯ ಅಧಿಕಾರಿಗಳೊಂದಿಗೆ ಸಮಾರಂಭಕ್ಕಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಶನಿವಾರ ನವದೆಹಲಿಗೆ ತೆರಳುವ ಸಾಧ್ಯತೆಯಿದೆ. ಅಲ್ಲದೆ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೀಶೆಲ್ಸ್ ಸರ್ಕಾರಗಳ ಮುಖ್ಯಸ್ಥರು ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟ ನೆರೆಹೊರೆಯವರಲ್ಲಿ ಸೇರಿದ್ದಾರೆ.

ಇವರಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ (Sheikh Hasina), ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ (Ranil Wickremesinghe)ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ (Pushpa Kamal Dahal Prachanda) ತಮ್ಮ ಉಪಸ್ಥಿತಿಯನ್ನು ಖಚಿತಪಡಿಸಿದ್ದಾರೆ. ಇನ್ನೂ ದಹಲ್ ಮತ್ತು ರನಿಲ್ ವಿಕ್ರಮಸಿಂಘೆ ಜೂನ್ 9 ರಂದು ದೆಹಲಿಗೆ ಆಗಮಿಸಲಿದ್ದಾರೆ.
ಇನ್ನೂ ಪ್ರಧಾನಿ ಶೇಖ್ ಹಸೀನಾ ಅವರು ಜೂನ್ 8ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಢಾಕಾದಿಂದ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಜೂನ್ 10ರಂದು ಮಧ್ಯಾಹ್ನ ಮನೆಗೆ ಮರಳಲಿದ್ದಾರೆ. ದಹಲ್ ಮತ್ತು ಪಿಎಂ ಮೋದಿ ಅವರು ಫೋನ್ ಮೂಲಕ ಪರಸ್ಪರ ಮಾತನಾಡಿ ತಮ್ಮ ಹಾಜರಾತಿಯನ್ನು ಖಚಿತಪಡಿಸಿದ್ದಾರೆ ಎನ್ನಲಾಗುತ್ತಿದೆ
ಭಾರತದ ನೈಬರ್‌ಹುಡ್ ಫಸ್ಟ್ ನೀತಿಯ ಭಾಗವಾಗಿ ನವದೆಹಲಿ ಈ ನಾಯಕರನ್ನು ಆಹ್ವಾನಿಸಿದೆ. ಮುಯಿಝು ಭಾರತಕ್ಕೆ ಬಂದರೆ, ಎರಡು ಸಾಂಪ್ರದಾಯಿಕ ಪಾಲುದಾರರ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಮುಯಿಝು ಅವರ ಹಿಂದಿನವರಲ್ಲಿ ಒಬ್ಬರಾದ ಅಬ್ದುಲ್ಲಾ ಯಮೀನ್ ಅವರು ಮೇ 2014 ರಲ್ಲಿ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.
ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ 293 ಸ್ಥಾನಗಳೊಂದಿಗೆ ಜಯಗಳಿಸಿದೆ. ಆಪ್‌ನ ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಗೆದ್ದಿದೆ.












Click it and Unblock the Notifications