ಗುಜರಾತ್ ಮೂಲದ ‘ಅಮುಲ್’ ಲಸ್ಸಿಯಲ್ಲಿ ಫಂಗಸ್?
ನವದೆಹಲಿ: 'ಅಮುಲ್' ಹೆಸರು ಕೇಳಿದರೆ ಸಾಕು ದಕ್ಷಿಣ ಭಾರತೀಯರು ಕೆಂಡವಾಗುತ್ತಿದ್ದಾರೆ. ಈ ಹೊತ್ತಲ್ಲೇ ತಮಿಳುನಾಡು ಮೂಲದ ಸಹಕಾರಿ ಹಾಲು ಒಕ್ಕೂಟ 'ಆವಿನ್' ಜೊತೆಗೂ 'ಅಮುಲ್' ವಾರ್ ಶುರುವಾಗಿದೆ. ಮತ್ತೊಂದ್ಕಡೆ 'ಅಮುಲ್' ಲಸ್ಸಿಯಲ್ಲಿ ಫಂಗಸ್ ಕಂಡುಬಂದಿದೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗುತ್ತಿದ್ದು, ಆ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.
ಹೌದು ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಹಲವು ದೇಶಗಳಲ್ಲಿ 'ಅಮುಲ್' (Amul) ಹೆಸರು ಸಂಪಾದಿಸಿದ್ದು, ತನ್ನ ಮಾರುಕಟ್ಟೆಯನ್ನ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿ ಇತರೆಡೆ ವಿಸ್ತರಣೆ ಮಾಡಲು ಪ್ರಯತ್ನಿಸುತ್ತಿದೆ. ಈಗಾಗಲೇ ತಮಿಳುನಾಡು 'ಅಮುಲ್' ವಿರುದ್ಧ ರೊಚ್ಚಿಗೆದ್ದು, ಸ್ವತಃ ತಮಿಳುನಾಡು ಸಿಎಂ ಎಚ್ಚರಿಕೆ ನೀಡಿದ್ದಾರೆ. ಆದರೆ ಇಷ್ಟೆಲ್ಲದರ ಮಧ್ಯೆ ಉತ್ತರ ಭಾರತದ ರಾಜ್ಯವೊಂದರಲ್ಲಿ 'ಅಮುಲ್' ಲಸ್ಸಿಯಲ್ಲಿ ಫಂಗಸ್ ಕಂಡುಬಂದಿದೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಏನ್ರಪ್ಪಾ ಇದು ಫಂಗಸ್ ವಿಡಿಯೋ?
'ಅಮುಲ್' ಬ್ರ್ಯಾಂಡ್ ಮೂಲಕ ಒಳ್ಳೇ ಸಂಪಾದನೆ ಮಾಡ್ತಿದೆ. ಅದರಲ್ಲೂ ಕನ್ನಡಿಗರ ಬ್ರ್ಯಾಂಡ್ 'ನಂದಿನಿ' ಅನ್ನ ಅಮುಲ್ ಜೊತೆ ವಿಲೀನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆಗ ಕನ್ನಡ ನಾಡಿನ ಜನತೆ 'ನಂದಿನಿ' ಪರ ಹೋರಾಟ ಆರಂಭಿಸಿದ್ದರು. ಈ ಮಧ್ಯೆ ನೆರೆಯ ತಮಿಳುನಾಡಲ್ಲಿ ಇಂತಹದ್ದೇ ಸ್ಥಿತಿ ಎದುರಾಗಿದೆ. ಅಮುಲ್ ಬ್ರ್ಯಾಂಡ್ ತಮಿಳುನಾಡಿನ ಆವಿನ್ ಜೊತೆ ಫೈಟ್‌ಗೆ ಇಳಿದಿದೆ ಎನ್ನುವ ಆರೋಪ ಎದುರಾಗಿರುವ ಸಂದರ್ಭದಲ್ಲೇ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದು ಸುಳ್ಳೋ ಅಥವಾ ಸತ್ಯವೋ? ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ.
Amul lassi
— Haldhar 100%followback (@Haldharkumar4) May 25, 2023
Very dangerous for health, without expire this situation @Amul_Coop pic.twitter.com/G8HJhhYwdK
ಉತ್ತರ ಭಾರತದಲ್ಲೇ ವಿಡಿಯೋ ಮಾಡಿದ್ರಾ?
ಹೌದು, ಮೇಲಿನ ಲಿಂಕ್ ನೋಡಿದ್ರಲ್ಲಾ? ಇದೇ ವಿಡಿಯೋ ಈಗ ದೇಶಾದ್ಯಂತ ವೈರಲ್ ಆಗುತ್ತಿರುವುದು. ಈ ವಿಡಿಯೋದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುವ ವ್ಯಕ್ತಿ ಅಮುಲ್ ಲಸ್ಸಿ ಟೆಟ್ರಾ ಪ್ಯಾಕೇಟ್ ಕತ್ತರಿಸುತ್ತಾನೆ. ಆಗ ಅಮುಲ್ ಲಸ್ಸಿ ಒಳಗೆ ಫಂಗಸ್ ಇದೆ ಎಂದು ಆರೋಪ ಮಾಡುತ್ತಾನೆ. ಈ ವಿಡಿಯೋ ಎಷ್ಟು ಸತ್ಯವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದ್ರೆ ಪ್ಯಾಕೇಟ್ ಓಪನ್ ಮಾಡಿದಾಗ 'ಅಮುಲ್' ಲಸ್ಸಿ ಹಸಿರು ಬಣ್ಣ ಅಂದರೆ ಪಾಚಿ ರೂಪದಲ್ಲಿ ಕಾಣುತ್ತೆ. ಇನ್ನು ಈ ವಿಡಿಯೋ ಬಗ್ಗೆ 'ಅಮುಲ್' ಸಂಸ್ಥೆ ಖಡಕ್ ರಿಯಾಕ್ಷನ್ ಕೊಟ್ಟಿದೆ.

ಸುಳ್ಳು ಎಂದು ರೊಚ್ಚಿಗೆದ್ದ 'ಅಮುಲ್'!
ಅಮುಲ್ ಕುರಿತು ಇಂತಹ ನಕಲಿ ವಿಡಿಯೋ ಹರಡಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಅಲ್ಲದೆ 'ಇಂತಹ ವಿಡಿಯೋ ನಂಬಬೇಡಿ' ಎಂದು ಸಂಸ್ಥೆ ತಿಳಿಸಿದೆ. 'ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಕಂಪನಿಯನ್ನ ಸಂಪರ್ಕ ಮಾಡಿಲ್ಲ. ಘಟನೆ ಎಲ್ಲಿ ನಡೆದಿದೆ ಅನ್ನೋದನ್ನ ಸೂಚಿಸಲು ಸ್ಥಳ ಬಹಿರಂಗಪಡಿಸಿಲ್ಲ. ಈ ಕುರಿತು ಯಾವುದೇ ಸ್ಪಷ್ಟನೆ ಅಥವಾ ಪ್ರಶ್ನೆ ಇದ್ದರೆ ಗ್ರಾಹಕರು ನೇರವಾಗಿ ಸಂಪರ್ಕಿಸಬಹುದು' ಎಂದಿದೆ ಅಮುಲ್. ಹಾಗೇ ಇಂತಹ ನಕಲಿ ವೀಡಿಯೋ ನಂಬಬೇಡಿ ಎಂದಿದೆ 'ಅಮುಲ್'.
Issued in Public Interest by #Amul #AmulLassi pic.twitter.com/SyZKvrBYDr
— Amul.coop (@Amul_Coop) May 25, 2023
ವಿಡಿಯೋ ವಿರುದ್ಧ ಕಚ್ಚಾಟ ಶುರು!
ಅಮುಲ್ ಬಗ್ಗೆ ಹರಿದಾಡುತ್ತಿರುವ ಈ ವಿಡಿಯೋ ಸುಳ್ಳು ಅಂತಾ ಕೆಲವರು ಇದನ್ನು ಶೇರ್ ಮಾಡುತ್ತಿದ್ದಾರೆ. ಅದೇ ರೀತಿ ಇನ್ನೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಅಮುಲ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಹಾಗೇ ಜಗಳ ಕೂಡ ಜೋರಾಗಿದೆ. ಮತ್ತೊಂದ್ಕಡೆ ಬ್ರ್ಯಾಂಡ್ ನೇಮ್ ಹಾಳು ಮಾಡಲು ಕೆಲವರು ಕುತಂತ್ರ ಮಾಡಿದ್ದಾರೆಂದು ಸಂಸ್ಥೆ ಕೂಡ ಆರೋಪಿಸುತ್ತಿದೆ.
ಒಟ್ನಲ್ಲಿ ಕಳೆದ ಕೆಲವು ತಿಂಗಳಿಂದ 'ಅಮುಲ್' ನಿರಂತರವಾಗಿ ಸದ್ದು ಮಾಡುತ್ತಿದೆ. ಮೊದಲಿಗೆ 'ಅಮುಲ್' & 'ನಂದಿನಿ' ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ತಮಿಳುನಾಡು ಮೂಲದ ಸಹಕಾರಿ ಸಂಸ್ಥೆಯ ವಿಚಾರ ಕೂಡ ಚರ್ಚೆಗೆ ಬಂತು. ಈಗ ನೋಡಿದರೆ ಅಮುಲ್ ಲಸ್ಸಿ ಒಳಗೆ ಫಂಗಸ್ ಇದೆ ಎಂಬ ಆರೋಪದ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆಲ್ಲಾ ಅಮುಲ್ ಸಂಸ್ಥೆಯೇ ಉತ್ತರ ನೀಡಿದ್ದು, ಈಗಲಾದರೂ ಪರಿಸ್ಥಿತಿ ತಣ್ಣಗಾಗುತ್ತಾ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications