ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಅಮೂಲ್ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ

|
Google Oneindia Kannada News

ನವದೆಹಲಿ, ಫೆಬ್ರವರಿ 28: ದೇಶಾದ್ಯಂತ ಅಮೂಲ್ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಿದೆ.

ಅಮೂಲ್ ಹಾಲು ಖರೀದಿಸುವುದು ಈಗ ದುಬಾರಿಯಾಗಲಿದೆ, ಅಮೂಲ್ ಗೋಲ್ಡ್ ಗುಜರಾತ್‌ನ ಅಹಮದಾಬಾದ್‌ ಮತ್ತು ಸೌರಾಷ್ಟ್ರ ಮಾರುಕಟ್ಟೆಗಳಲ್ಲಿ ಅರ್ಧ ಲೀಟರ್‌ಗೆ 30 ರೂಪಾಯಿ ನೀಡಬೇಕಾಗುತ್ತದೆ.

ಅದೇ ಅಮೂಲ್ ತಾಜಾ ಹಾಲು ಪ್ರತಿ 500 ಎಂಎಲ್‌ಗೆ 24 ರೂ ಹಾಗೂ ಅಮೂಲ್ ಶಕ್ತಿ 500 ಎಂಎಲ್‌ಗೆ 27ರೂ. ಇದೆ. ಈ ಬೆಲೆಗಳು ಮಾರ್ಚ್ 1ರಿಂದ ಅನ್ವಯವಾಗಲಿದೆ.

Amul Increases Milk Prices By Rs 2 From March 1, 2022

ಗುಜರಾತ್‌ನ ಸಹಕಾರಿ ಹಾಲು ಮಾರಾಟ ಒಕ್ಕೂಟವು ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಹಾಲಿನ ದರವನ್ನು ಹೆಚ್ಚಿಸಿದೆ. ಈ ಹಿಂದೆ ಜುಲೈ 2021ರಲ್ಲಿ ಹಾಲಿನ ದರವನ್ನು ಹೆಚ್ಚಿಸಲಾಗಿತ್ತು.

ಅಮೂಲ್ ಹಾಲಿನ ಎಲ್ಲಾ ಬ್ರ್ಯಾಂಡ್‌ಗಳಿಗೆ ಬೆಲೆ ಏರಿಕೆ ಅನ್ವಯವಾಗಲಿದೆ. ಇವುಗಳಲ್ಲಿ ಟಿ ಸ್ಪೆಷಲ್, ಸೋನಾ, ತಾಜಾ, ಶಕ್ತಿ, ಹಸು ಮತ್ತು ಎಮ್ಮೆ ಹಾಲು ಇತ್ಯಾದಿ ಸೇರಿವೆ. ಸುಮಾರು 7 ತಿಂಗಳು 27ದಿನಗಳ ಬಳಿಕ ಬೆಲೆ ಏರಿಕೆಯಾಗಿದೆ.

ಉತ್ಪಾದನಾ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣ ಎಂದು ಕಂಪನಿ ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ ಅಮೂಲ್ ತನ್ನ ತಾಜಾ ಹಾಲಿನ ಶ್ರೇಣಿಯ ಬೆಲೆಯನ್ನು ವರ್ಷಕ್ಕೆ ಶೇ.4ರಷ್ಟು ಹೆಚ್ಚಿಸಿದೆ. ಪ್ಯಾಕೇಜಿಂಗ್, ಸಾರಿಗೆ, ಪಶು ಆಹಾರದ ವೆಚ್ಚದ ಹೆಚ್ಚಳದಿಂದಾಗಿ ಹಾಲಿನ ಉತ್ಪಾದನಾ ವೆಚ್ಚಳದಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಕಾರ್ಯಾಚರಣೆಯ ಒಟ್ಟು ವೆಚ್ಚ ಹೆಚ್ಚಾಗಿದೆ.

ಆಹಾರ ಹಣದುಬ್ಬರ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಕೆ ಅನಿವಾರ್ಯ ಎಂದು ಸೋದಿ ಹೇಳಿದ್ದಾರೆ. "ಹೆಚ್ಚುವರಿಯಾಗಿ, ಪ್ಯಾಕೇಜಿಂಗ್ ವೆಚ್ಚವು ಶೇಕಡಾ 30 ರಿಂದ 40 ರಷ್ಟು, ಸಾರಿಗೆ ವೆಚ್ಚವು ಶೇಕಡಾ 30 ರಷ್ಟು ಮತ್ತು ವಿದ್ಯುತ್ ವೆಚ್ಚವು ಶೇಕಡಾ 30 ರಷ್ಟು ಏರಿಕೆಯಾಗಿದೆ, ಇದು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಹಾಲಿನ ದರ ಕಂಪನಿಗೆ ಅನಿವಾರ್ಯ," ಎಂದು ಅವರು ಹೇಳಿದರು.

ಇಂಧನ ಮತ್ತು ತರಕಾರಿಗಳ ಬೆಲೆ ಏರುತ್ತಿರುವ ಮಧ್ಯೆ ಬೆಲೆ ಏರಿಕೆ ಅನೇಕ ಗ್ರಾಹಕರಿಗೆ ಆಘಾತ ಉಂಟು ಮಾಡಿದರೂ, ಹಾಲಿನ ದರ ಹೆಚ್ಚಳವು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ.

ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳವು ಎಂಆರ್‌ಪಿ ಯಲ್ಲಿ ಶೇ. 4 ಹೆಚ್ಚಳವಾಗಿದೆ, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ತೀರಾ ಕಡಿಮೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಿದೆ.

ಹಾಲು ಉತ್ಪಾದಕರಿಗೆ ಹಾಲಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ರವಾನಿಸುವುದು ಕಂಪನಿಯ ನೀತಿಯಾಗಿರುವುದರಿಂದ ಬೆಲೆ ಏರಿಕೆಯು ಹಾಲು ಉತ್ಪಾದಕರಿಗೆ ಪ್ರಯೋಜನವನ್ನು ನೀಡುತ್ತದೆ.

English summary
Popular brand Amul on Monday announced that it will be elevating the price of its milk by Rs 2 per litre. The price rise extends to all milk variants by the brand, including Gold, Taaza, Shakti, T-special, as well on cow and buffalo milk etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X