ಇಬ್ಬರು ರಾಷ್ಟ್ರಪಿತ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪತ್ನಿ ವಿವಾದಾತ್ಮಕ ಹೇಳಿಕೆ
ನಾಗಪುರ, ಡಿಸೆಂಬರ್ 21: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಪಿಎಂ ನರೇಂದ್ರ ಮೋದಿಯವರನ್ನು ರಾಷ್ಟ್ರಪಿತ ಎಂದು ಕರೆದು ನಂತರ ಹೇಳಿಕೆ ತಿರುಚಿ ಸಾಮಾನ್ಯವಾಗಿ ಗಾಂಧಿ ಅವರಿಗೂ ನೀಡಲಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾಗಪುರದಲ್ಲಿ ಬರಹಗಾರರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿನ ಸಂದರ್ಶನದ ಸಂದರ್ಭದಲ್ಲಿ, ಅವರು ಪ್ರಧಾನಿ ಮೋದಿಯನ್ನು ರಾಷ್ಟ್ರಪಿತಾ ಎಂದು ನೀವು ಕರೆದರೆ ಮಹಾತ್ಮ ಗಾಂಧಿ ಏನಾಗುತ್ತಾರೆ ಎಂದು ಕೇಳಿದ್ದಕ್ಕೆ ಮೋದಿ ನವ ಭಾರತದ ರಾಷ್ಟ್ರಪಿತ, ಗಾಂಧಿ ಕೂಡ ರಾಷ್ಟ್ರಪಿತ ಎಂದು ಹೇಳಿದರು.
ಮಹಾತ್ಮಾ ಗಾಂಧಿಯವರು ರಾಷ್ಟ್ರಪಿತ ಮತ್ತು ಮೋದಿಜಿ ನವ ಭಾರತದ ಪಿತಾಮಹ. ಇಬ್ಬರು ರಾಷ್ಟ್ರ ಪಿತಾಮಹರು. ಒಬ್ಬರು ಈ ಯುಗದವರು, ಒಬ್ಬರು ಆ ಯುಗದವರು ಎಂದು ಅವರು ಮರಾಠಿಯಲ್ಲಿ ಮಾತನಾಡಿದರು. ಅಮೃತ ಫಡ್ನವಿಸ್ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿರುವುದು ಇದೇ ಮೊದಲಲ್ಲ.

2019ರಲ್ಲಿ ಪ್ರಧಾನ ಮಂತ್ರಿಯ ಸಂದೇಶದಲ್ಲಿ ಅವರು ಟ್ವೀಟ್ ಮಾಡಿ "ನಮ್ಮ ದೇಶದ ಪಿತಾಮಹ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ಸಮಾಜದ ಸುಧಾರಣೆಗೆ ಪಟ್ಟುಬಿಡದೆ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತಾರೆ ಎಂದು ಬರೆದಿದ್ದರು. ತನ್ನ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಮತ್ತು ಸಾರ್ವಜನಿಕ ಹೇಳಿಕೆಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಅಮೃತಾ ಫಡ್ನವಿಸ್ ಈ ವರ್ಷದ ಆರಂಭದಲ್ಲಿ ಶಿವಸೇನಾ ಶಾಸಕರ ಬಂಡಾಯವೆದ್ದಾಗ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಿ ಬಗ್ಗೆಯೂ ಕುಹಕವಾಡಿದ್ದರು.
ಏಕ್ 'ಥಾ' ಕಪತಿ ರಾಜಾ... (ಒಮ್ಮೆ ದುಷ್ಟ ರಾಜನಿದ್ದನು)," ಎಂದು ಟ್ವೀಟ್‌ನಲ್ಲಿ ಬರೆದು ನಂತರ ಅವರು ಪೋಸ್ಟ್ ಅನ್ನು ಅಳಿಸಿದ್ದರು. ಶೀವಾಸೇನಾ ಶಾಸಕರ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದಾಗ ಅವರ ಪತಿ ಉಪ ಮುಖ್ಯಮಂತ್ರಿಯಾದರು. ಅಮೃತ ಫಡ್ನವಿಸ್ ಅವರ ಹೇಳಿಕೆಯನ್ನು ಮಾಜಿ ಸಚಿವ ಯಶೋಮತಿ ಠಾಕೂರ್ ಖಂಡಿಸಿದ್ದಾರೆ.












Click it and Unblock the Notifications