ರಾಮ್ ರಹೀಮ್ ಗೆ ಶಿಕ್ಷೆ ನೀಡಲು ಹೆಲಿಕಾಪ್ಟರ್ ನಲ್ಲಿ ಪಯಣಿಸಲಿರುವ ಜಡ್ಜ್
ಬಂಧಿತ ಬಾಬಾ ರಾಮ್ ರಹೀಮ್ ಗೆ ಆಗಸ್ಟ್ 29ರಂದು ಶಿಕ್ಷೆಯ ಪ್ರಮಾಣ. ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣ ಜಾರಿಗೊಳಿಸಲಿರುವ ನ್ಯಾಯಾಧೀಶ ಜಗದೀಶ್ ಸಿಂಗ್. ರೋಹ್ಟಕ್ ಜೈಲಿನಲ್ಲೇ ಶಿಕ್ಷೆಯ ಪ್ರಮಾಣ ಪ್ರಕಟ, ಅದಕ್ಕಾಗಿ ರೋಹ್ಟಕ್ ಗೆ ಹೆಲಿಕಾಪ್ಟರ್ ನಲ್ಲಿ
ನವದೆಹಲಿ, ಆಗಸ್ಟ್ 26: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ದೇವ ಮಾನವ ರಾಮ್ ರಹೀಮ್ ಅವರ ಶಿಕ್ಷೆಯ ಪ್ರಮಾಣವನ್ನು ಪಂಚಕುಲಾದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಆಗಸ್ಟ್ 28ರಂದು ಜಾರಿಗೊಳಿಸಲಿ ಇದಕ್ಕಾಗಿ ಆಗಮಿಸಲಿರುವ ನ್ಯಾಯಾಧೀಶರಿಗೆ ಭದ್ರತಾ ದೃಷ್ಟಿಯಿಂದ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.
ಅಂದಹಾಗೆ, ಶಿಕ್ಷೆಯನ್ನು ಜಾರಿಗೊಳಿಸುವ ಜವಾಬ್ದಾರಿ ಪಂಚಕುಲಾದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಆಗಿದ್ದರೂ, ಶಿಕ್ಷೆ ಜಾರಿಗೊಳ್ಳಲಿರುವುದು ರೋಹ್ಟಕ್ ನಲ್ಲಿ. ಅಂದರೆ, ಪಂಚಕುಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಸಿಂಗ್ ಅವರು ರೋಹ್ಟಕ್ ಗೆ ತೆರಳಲಿದ್ದು, ಅಲ್ಲಿ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.

ಹೀಗಾಗಿ, ರೋಹ್ಟಕ್ ನಲ್ಲಿರುವ ಜೈಲಿನಲ್ಲೇ ರಾಮ್ ರಹೀಮ್ ಅವರನ್ನು ಬಂಧಿಸಿಡಲಾಗಿದೆ. ಹಾಗಾಗಿ, ಅಲ್ಲೇ ಜೈಲಿನಲ್ಲೇ ನ್ಯಾಯಾಲಯದ ವ್ಯವಸ್ಥೆ ಮಾಡಿ, ಅಲ್ಲಿಯೇ ರಾಮ್ ರಹೀಮ್ ಸಮ್ಮುಖದಲ್ಲೇ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಓದಲಿದ್ದಾರೆ.












Click it and Unblock the Notifications