Amitabh Bachchan Viral Video: ಅಭಿಮಾನಿಗಳೊಂದಿಗೆ ಅಮಿತಾಬ್ ಬಚ್ಚನ್ ನಡೆದುಕೊಂಡ ರೀತಿಗೆ ವಿರೋಧ, ವೈರಲ್ ವಿಡಿಯೋದಲ್ಲೇನಿದೆ ?
Amitabh Bachchan Viral Video: ನಟ ಅಮಿತಾಬ್ ಬಚ್ಚನ್ ಅವರೊಂದಿಗೆ ಅವರ ಅಭಿಮಾನಿಗಳು ನಡೆದುಕೊಂಡ ರೀತಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ಸಂಭ್ರಮವು ಅನಿರೀಕ್ಷಿತ ತಿರುವು ಪಡೆದುಕೊಂಡಿರುವುದು ವಿಡಿಯೋದಲ್ಲಿದೆ. ತಮ್ಮ ನಿವಾಸದ ಹೊರಗೆ ಅಭಿಮಾನಿಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೆಲವು ಯುವ ಅಭಿಮಾನಿಗಳು ಭದ್ರತಾ ಸಿಬ್ಬಂದಿಯನ್ನು ಮೀರಿ ನಟನ ಬಳಿಗೆ ಹೋಗಲು ಪ್ರಯತ್ನಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರೊಂದಿಗೆ ಅವರ ಅಭಿಮಾನಿಗಳು ನಡೆದುಕೊಂಡಿರುವ ರೀತಿಯು ವೈರಲ್ ಆಗುತ್ತಿದೆ. ಅಮಿತಾಬ್ ಬಚ್ಚನ್ ಅವರು ತಮ್ಮ ಮನೆಯ ಹೊರಗೆ ನೆರೆದಿದ್ದ ಅಭಿಮಾನಿಗಳನ್ನು ಭೇಟಿಯಾಗಲು ಕೆಂಪು ಕುರ್ತಾ ಧರಿಸಿ ಹೊರಬಂದಿರುವುದನ್ನು ವಿಡಿಯೋದಲ್ಲಿದೆ. ಅಭಿಮಾನಿಗಳತ್ತ ನೋಡಿ ಕೈಬೀಸಿ ಸ್ವಾಗತಿಸುತ್ತಿದ್ದಾಗ, ಇಬ್ಬರು ಮಕ್ಕಳು ಭದ್ರತಾ ಸಿಬ್ಬಂದಿಯನ್ನು ದಾಟಿ ಅವರ ಬಳಿಗೆ ಹೋಗಲು ಪ್ರಯತ್ನಿಸಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿ ಮಕ್ಕಳನ್ನು ನಟ ಅಮಿತಾಬ್ ಬಚ್ಚನ್ ಅವರಿಂದ ದೂರ ಸರಿಸಿದ್ದಾರೆ.

ಮುಂದುವರಿದು ಅಮಿತಾಬ್ ಬಚ್ಚನ್ ಅವರು ಕೈಮುಗಿದು, ಕೈಬೀಸುವ ಮೂಲಕ ಅಭಿಮಾನಿಗಳನ್ನು ಸ್ವಾಗತಿಸುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅವರೊಂದಿಗೆ ಕೈಕುಲುಕಲು ಕೇಳಿಕೊಂಡಾಗ, ಅವರು ನಯವಾಗಿ ನಿರಾಕರಿಸಿರುವುದು ಸಹ ವೈರಲ್ ವಿಡಿಯೋದಲ್ಲಿದೆ.
ಅಮಿತಾಬ್ ಬಚ್ಚನ್ ಹುಟ್ಟುಹಬ್ಬದ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಇನ್ನು ನಟ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ದಿನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ಪ್ರಾರಂಭವಾಗಿದೆ. ಅಭಿಮಾನಿಯ ಮನವಿಯನ್ನು ಅಮಿತಾಬ್ ಬಚ್ಚನ್ ಅವರು ಒಪ್ಪಿಕೊಳ್ಳಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇನ್ನು ಕೆಲವರು ಭದ್ರತಾ ನಿಯಮಗಳನ್ನು ಗೌರವಿಸಬೇಕು ಮತ್ತು ಸೆಲೆಬ್ರಿಟಿಗಳಿಗೂ ತಮ್ಮ ವೈಯಕ್ತಿಕತೆ ಕಾಪಾಡಿಕೊಳ್ಳುವ ಹಕ್ಕಿದೆ ಅಂತ ವಾದಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬ ಮತ್ತು ಅವರು ತಮ್ಮ ಮನೆಯ ದ್ವಾರದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲು ಹೊರಗೆ ಬಂದಿದ್ದರು. ಆ ಸಮಯದಲ್ಲಿ, ಅವರ ಯುವತಿಯೊಬ್ಬರು ಫೋಟೋ ತೆಗೆದುಕೊಳ್ಳಲು ಹಲವುಬ ಬಾರಿ ಮನವಿ ಮಾಡಿದ್ದಾರೆ. ತನ್ನ ನೆಚ್ಚಿನ ನಟನೊಂದಿಗೆ ಒಂದೇ ಒಂದು ಫೋಟೋಗಾಗಿ ಅವರು ಪದೇ ಪದೇ ಮನವಿ ಮಾಡಿದಳು. ಆದರೆ, ಅವಳು ಪದೇ ಪದೇ ವಿನಂತಿಸಿದರೂ, ಅಮಿತಾಬ್ ಬಚ್ಚನ್ ಆಕೆಗೆ ಒಂದೇ ಒಂದು ಫೋಟೋವನ್ನು ನೀಡಲಿಲ್ಲ. ತನ್ನ ಭದ್ರತಾ ಸಿಬ್ಬಂದಿ ಅವಳನ್ನು ಹಿಂದಕ್ಕೆ ತಳ್ಳುತ್ತಾ ಅವಳು ತನ್ನ ಬಳಿಗೆ ಬರಲು ಪ್ರಯತ್ನಿಸಿದಾಗಲೆಲ್ಲಾ ಅವಳನ್ನು ದೂರ ಸರಿಸುವಾಗ ಅವನು ಮೌನವಾಗಿ ನಿಂತಿದ್ದರು ಎಂದು ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.
ಅಮಿತಾಬ್ ಬಚ್ಚನ್ ಅವರಿಗೆ ಸ್ವಲ್ಪ ಕರುಣೆ ತೋರಿಸಲು ಸಾಧ್ಯವಾಗಲಿಲ್ಲವೇ. ಅವಳು ತಮ್ಮ ನೆಚ್ಚಿನ ನಟನೊಂದಿಗೆ ಒಂದು ಫೋಟೋ ಕೇಳಿದ್ದಾರೆ ಕೊಡಬಹುದಿತ್ತು ಎಂದಿದ್ದಾರೆ. ಅಮಿತಾಬ್ ಬಚ್ಚನ್ ಒಬ್ಬ ಸೂಪರ್‌ಸ್ಟಾರ್ ಆಗಿರಬಹುದು, ಆದರೆ ಅವನ ಒಂದೇ ಒಂದು ಫೋಟೋದ ದೊಡ್ಡ ಅಭಿಮಾನಿಯಾಗಿರುವ ಹುಡುಗಿಯನ್ನು ಪದೇ ಪದೇ ಬೇಡಿಕೊಂಡರೂ ನಿರಾಕರಿಸುವುದು ಸಂಪೂರ್ಣ ನಿರ್ದಯ. ಅಷ್ಟು ದೊಡ್ಡ ನಟ, ಆದರೆ ಅಷ್ಟು ಸಣ್ಣ ಹೃದಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ವಿಚಾರವು ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
Today is Amitabh Bachchan’s birthday, and he came out to meet fans at the gate of his house. At that moment, one of his girl fans was desperately requesting a photo with him, repeatedly pleading for just one picture with her favourite actor.But despite her repeated requests, Amitabh Bachchan didn’t give her even a single photo. He stood there silently while his security guards kept pushing her back and moving her away whenever she tried to approach him.Couldn’t Amitabh Bachchan show a little compassion? She was simply asking for one picture with her favourite actor. What would he have lost by giving her just one photo?Amitabh Bachchan may be a superstar, but refusing a girl who is such a big fan of his even one picture despite her repeated pleas is absolutely heartless. Such a big actor, yet such a small heart.
— Saffron Chargers (@SaffronChargers) October 11, 2026


Click it and Unblock the Notifications
