ಚುನಾವಣೆ: ಮತ್ತೆ ಯುಪಿಯತ್ತ ಹೊರಟ ಮೋದಿಯ ಬಂಟ

ನವದೆಹಲಿ, ಜೂನ್ 16: ಸರಿಯಾಗಿ ಒಂದು ತಿಂಗಳ ಹಿಂದೆ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದ ಅಮಿತ್ ಶಾ ಎಂಬ ಗೇಮ್ ಪ್ಲಾನರ್ ಈ ವಾರ ಮತ್ತೆ ಉತ್ತರ ಪ್ರದೇಶದತ್ತ ಅಮಿತೋತ್ಸಾಹದೊಂದಿಗೆ ದಂಡೆತ್ತಿ ಹೋಗಲಿದ್ದಾರೆ.

ದೇಶದ ರಾಜಕೀಯದಲ್ಲಿ ಆಯಕಟ್ಟಿನ ಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ 70 ಪ್ಲಸ್ ಸೀಟುಗಳನ್ನು ಬಿಜೆಪಿಯ ಮಡಿಲಿಗೆ ಹಾಕಿ ಸೈ ಅನ್ನಿಸಿಕೊಂಡ ಅಮಿತ್, ಈ ವಾರ ಲಖ್ನೋಗೆ ತೆರಳಲಿದ್ದಾರೆ. (ಅಮಿತ್ ಶಾ ಅಶ್ವಮೇಧ ಕುದುರೆ ಮುಂದಿನ ಓಟ ಎತ್ತ?)

amit-shah-on-warpath-to-make-bjp-sweep-up-assembly-bypolls

ರಾಜ್ಯ ವಿಧಾನಸಭೆಗೆ 11 ಉಪ ಚುನಾವಣೆಗಳು ನಡೆಯಲಿವೆ. ಜತೆಗೆ ಮೈನ್ ಪುರಿ ಸಂಸದೀಯ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಬೇಕಿದೆ. ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಜಯ ಸಾಧಿಸಿದ್ದರು. ಅದಾದ ನಂತರ ಅಜಾಂಗಢ ಕ್ಷೇತ್ರವನ್ನು ಉಳಿಸಿಕೊಂಡು ಮೈನ್ ಪುರಿ ಕ್ಷೇತ್ರಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ರಾಜ್ಯ ವಿಧಾನಸಭೆ ಜತೆ ಜತೆಗೆ ಈ ಕ್ಷೇತ್ರದಲ್ಲಿಯೂ ಮರು ಚುನಾವಣೆ ನಡೆಸಲು ಚುನಾವಣಾ ಆಯೋಗ ಆಲೋಚಿಸುತ್ತಿದೆ.

ಗಮನಾರ್ಹವೆಂದರೆ ನರೇಂದ್ರ ಮೋದಿ ಸಹ ವಡೋದರಾ ಮತ್ತು ಕಾಶಿ ಕ್ಷೇತ್ರಗಳಿಂದ (ವಾರಣಾಸಿ) ಸ್ಪರ್ಧಿಸಿ, ಜಯ ದಾಖಲಿಸಿದ್ದರು. ಆದರೆ ದೊಡ್ಡ ಪೊಲಿಟಿಕಲ್ ಗೇಮ್ ಪ್ರಕಾರ ಕಾಶಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಿಂದ ಆ ಕ್ಷೇತ್ರವನ್ನು ಉಳಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. (ಅಮಿತ್ ಶಾ ಬಿಜೆಪಿಯ ಮುಂದಿನ ಸಾರಥಿಯಾ?)

ಮೂಲಗಳ ಪ್ರಕಾರ ಅಮಿತ್ ಶಾ ಈ ವಾರ ಲಖ್ನೋಗೆ ತೆರಳಲಿದ್ದು, ಪರಿಸ್ಥಿತಿಯ ಅಧ್ಯಯನ ನಡೆಸಿ, ಚುನಾವಣಾ ತಂತ್ರಗಳನ್ನು ಹೆಣೆಯಲಿದ್ದಾರೆ ಎಂದು ತಿಳಿದುಬಂದಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತದ ತೂಗುಕತ್ತಿ ಜೋರಾಗಿ ಓಲಾಡುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಸ್ಟಿನಲ್ಲಿ ನಡೆಯಬಹುದಾದ ಉಪ ಚುನಾವಣೆಗಳು ಮಹತ್ವ ಪಡೆದಿವೆ. ಅಮಿತ್ ಶಾ ಅದಾಗಲೇ ಈ ಕ್ಷೇತ್ರಗಳ ಕುರಿತು ಪ್ರಾಥಮಿಕ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಜಪೈ ತಿಳಿಸಿದ್ದಾರೆ.

ಚುನಾವಣೆಗೆ ಇನ್ನೂ 2 ತಿಂಗಳ ಕಾಲಾವಕಾಶವಿದ್ದರೂ ಸದ್ಯಕ್ಕೆ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಅಮಿತೋತ್ಸಾಹದಲ್ಲಿದ್ದಾರೆ. ಅದನ್ನು ಹಾಗೇಯೇ ಉಳಿಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಅಮಿತ್ ಈಗಿಂದಲೇ ಕಾರ್ಯೋನ್ಮುಖರಾಗಿದ್ದಾರೆ ಎಂದು ಲಕ್ಷ್ಮಿಕಾಂತ್ ಬಜಪೈ ಹೇಳಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು ಮೈನ್ ಪುರಿ ಕ್ಷೇತ್ರದಲ್ಲಿ ಶತಾಯಗತಾಯ ಗೆಲುವು ಸಾಧಿಸುವಂತಾಗಲು ಅಮಿತ್ ಶಾ ಅವರು ಆ ಕ್ಷೇತ್ರದ ಚುನಾವಣಾ ಪ್ರಚಾರವನ್ನು ಖುದ್ದಾಗಿ ನಿರ್ವಹಿಸುವ ಅಂದಾಜಿದೆ. ಮುಲಾಯಂ ಸಿಂಗ್ ಅವರು ಮೈನ್ ಪುರಿ ಕ್ಷೇತ್ರದ 3.64 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ ಅಜಾಂಗಢ ಕ್ಷೇತ್ರದಿಂದ ಕೇವಲ 63,000 ಮತ ಅಂತರದ ಗೆಲುವು ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+