ಚಂದ್ರಬಾಬು ನಾಯ್ಡುಗೆ ಅಮಿತ್ ಶಾ ಬರೆದ ಬಹಿರಂಗ ಪತ್ರದಲ್ಲೇನಿದೆ?

Recommended Video

      ಚಂದ್ರಬಾಬು ನಾಯ್ಡುಗೆ ಅಮಿತ್ ಶಾ ಬರೆದ ಬಹಿರಂಗ ಪತ್ರ | Oneindia Kannada

      ನವದೆಹಲಿ, ಮಾ 24: ದಶಕಗಳಿಂದ ಎನ್ಡಿಎ ಮೈತ್ರಿಕೂಟದ ಜೊತೆ ಗುರುತಿಸಿಕೊಂಡು ಈಗ ಕೂಟದಿಂದ ಹೊರಗೆ ಬಂದಿರುವ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಹಿರಂಗ ಪತ್ರ ಬರೆದಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ನಿಮ್ಮ ನಿರ್ಧಾರ ದುರದೃಷ್ಖಕರ ಮತ್ತು ಏಕಪಕ್ಷೀಯ. ಕೇಂದ್ರ ಸರಕಾರ ಆಂಧ್ರಪ್ರದೇಶಕ್ಕೆ ವಿಶೇಷ ಸವಲತ್ತು ನೀಡಿಲ್ಲ ಎನ್ನುವ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಅಮಿತ್ ಶಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

      ಎಂಟು ಪುಟಗಳ ಪತ್ರದಲ್ಲಿ, ಬಿಜೆಪಿ ' ಸಬ್ ಕಾ ಸಾಥ್ ಸಬ್ ಕ ವಿಕಾಸ್' ತತ್ವದಲ್ಲಿ ನಂಬಿಕೆಯನ್ನು ಇಟ್ಟಿರುವಂತಹ ಪಕ್ಷ. ಮೈತ್ರಿಕೂಟ ತೊರೆಯುವ ನಿರ್ಧಾರ, ಸಂಪೂರ್ಣ ರಾಜಕೀಯದಿಂದ ಕೂಡಿದ್ದೇ ಹೊರತು ಅಭಿವೃದ್ದಿ ವಿಚಾರಕ್ಕಾಗಿ ಅಲ್ಲ ಎಂದು ಅಮಿತ್ ಶಾ, ಚಂದ್ರಬಾಬು ನಾಯ್ಡುಗೆ ಬರೆದ ಪತ್ರದಲ್ಲಿ ಖಾರವಾಗಿ ತಿಳಿಸಿದ್ದಾರೆ.

      Amit Shah writes to Chandrababu Naidu: TDP’s decision to quit NDA over Andhra special status ‘unfortunate, unilateral’

      ಆಂಧ್ರಪದೇಶಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎನ್ನುವ ವಿಚಾರದಲ್ಲಿ ಕೇಂದ್ರದ ಜೊತೆ ಜಟಾಪಟಿ ನಡೆಸಿ, ಟಿಡಿಪಿ ಮೈತ್ರಿಕೂಟದಿಂದ ಹೊರನಡೆದಿತ್ತು. ಅಲ್ಲದೇ, ಮೋದಿ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿತ್ತು.

      ಈಶಾನ್ಯ ಭಾರತದ ರಾಜ್ಯಗಳಂತೆ ಆದಾಯದ ಕೊರತೆಯಿಂದ ಅನುದಾನ ಸ್ವೀಕರಿಸುತ್ತಿರುವ ಏಕೈಕ ರಾಜ್ಯ ಆಂಧ್ರಪ್ರದೇಶ. ಕಳೆದ ಐದು ವರ್ಷದಿಂದ ಅನುದಾನವನ್ನು ಆಂಧ್ರ ಪಡೆಯುತ್ತಿದೆ. ಇದು ಆ ರಾಜ್ಯದ ಅಗತ್ಯಕ್ಕೆ ಕೇಂದ್ರ ಸೂಕ್ಷ್ಮವಾಗಿ ಸ್ಪಂದಿಸುತ್ತಿದೆ ಎನ್ನುವುದನ್ನು ತೋರಿಸುವುದಿಲ್ಲವೇ ಎಂದು ಅಮಿತ್ ಶಾ, ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

      ಆಂಧ್ರಪ್ರದೇಶದ ಅಭಿವೃದ್ದಿಗೆ ನರೇಂದ್ರ ಮೋದಿ ಸರಕಾರ ಸಂಪೂರ್ಣ ಸಹಕಾರವನ್ನು ನೀಡಿದೆ, ಈ ಬಗ್ಗೆ ಯಾವ ಸಂಶಯವೂ ಬೇಡ. ಎರಡೂ ಪಕ್ಷಗಳು ಒಟ್ಟಾಗಿ ಗಳಿಸಿದ ಜನಾದೇಶವನ್ನು ರಾಜಕೀಯ ಕಾರಣಗಳಿಗಾಗಿ ತೊರೆಯಲು ನೀವು ಅನುಮತಿ ನೀಡಿದ್ದೀರಿ ಎಂದು ಅಮಿತ್ ಶಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+