ಜನಗಣತಿಯ ಡಿಜಿಟೀಕರಣ ಯೋಜನೆ ಘೋಷಿಸಿದ ಅಮಿತ್ ಶಾ
ಅಸ್ಸಾಂ, ಮೇ 10: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬರುವ ಜನಗಣತಿಯನ್ನು ಡಿಜಿಟೀಕರಣ (Census Digitisation) ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಅಸ್ಸಾಂ ರಾಜ್ಯದ ಅಮೀನ್‌ಗಾವೋ ಬಳಿ ನೂತನ ಸೆನ್ಸಸ್ ಕಚೇರಿಯ ಉದ್ಘಾಟನೆ ಮಾಡಿದ ಅವರು, ಮುಂದಿನ ಜನಗಣತಿ ಇ-ಸೆನ್ಸಸ್ ಅಗಿರಲಿದೆ ಎಂದಿದ್ದಾರೆ.
"ಸರಕಾರದ ನೀತಿನಿರ್ಧಾರದಲ್ಲಿ ಜನಗಣತಿ ಪಾತ್ರ ಬಹಳ ಮುಖ್ಯ ಇದೆ. ಹೀಗಾಗಿ, ಸೆನ್ಸಸ್ ಅನ್ನು ಆಧುನಿಕ ತಂತ್ರಜ್ಞಾನ ಮೂಲಕ ಬಹು ಆಯಾಮ, ವೈಜ್ಞಾನಿಕ ಮತ್ತು ನಿಖರವಾಗಿ ಜನಗಣತಿಯನ್ನು ಮಾಡಲಾಗುವುದು. ಈ ಸೆನ್ಸಸ್ ಮಾಹಿತಿಯನ್ನು ವಿಶ್ಲೇಷಿಸುವ ಸಮರ್ಪಕ ವ್ಯವಸ್ಥೆ ಕೂಡ ಮಾಡಲಾಗುವುದು" ಎಂದು ಅಮಿತ್ ಶಾ ಹೇಳಿದ್ದಾರೆ. ಇ-ಸೆನ್ಸಸ್ ಬಹಳ ನಿಖರವಾಗಿರಲಿದ್ದು, ಇದರ ಆಧಾರದ ಮೇಲೆ ಮುಂದಿನ 25 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ನಕ್ಷೆ ಮಾಡಲಾಗುವುದು.
"ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸೆನ್ಸಸ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಇ-ಸೆನ್ಸಸ್ ಕಾರ್ಯ ಕೈಗೊಳ್ಳುತ್ತೇವೆ. ಇದು ಬಹಳ ಕರಾರುವಾಕ್ ಆಗಿರುವ ಜನಗಣತಿಯಾಗಿರುತ್ತದೆ" ಎಂದು ಕೇಂದ್ರ ಗೃಹ ಸಚಿವ ಹಾಗು ಸಹಕಾರ ಖಾತೆ ಸಚಿವರೂ ಆದ ಅಮಿತ್ ಶಾ ತಿಳಿಸಿದ್ದಾರೆ.

ಸೆನ್ಸಸ್‌ನಲ್ಲಿ ಜನನ-ಮರಣ ನೋಂದಣಿ:
"ಎಲ್ಲೆಲ್ಲಿ ಕಡಿಮೆ ಅಭಿವೃದ್ಧಿಯಾಗಿದೆ, ಎಸ್ಸಿ ಎಸ್ಟಿ ಸಮುದಾಯಗಳ ಪರಿಸ್ಥಿತಿ ಹೇಗಿದೆ, ವಿವಿಧ ಪ್ರದೇಶಗಳಲ್ಲಿ ಜನಜೀವನ ಪರಿಸ್ಥಿತಿ ಹೇಗಿದೆ ಎಂಬುದನ್ನಷ್ಟೇ ಸೆನ್ಸಸ್ ತೋರಿಸಬಹುದು. ಆದರೆ, ನಾವು ಇ-ಸೆನ್ಸಸ್‌ನಲ್ಲಿ ಜನನ ಮತ್ತು ಮರಣ ನೊಂದಣಿಯನ್ನು (Birth and Death Register) ಸೇರಿಸುವ ಅವಕಾಶ ನೀಡುವ ಹೊಸ ಸಾಫ್ಟ್‌ವೇರ್ ತಯಾರಿಸಲಿದ್ಧೇವೆ. ಇದನ್ನು ವಿವಿಧ ರೀತಿಯಲ್ಲಿ ನಾವು ಬಳಸಲಿದ್ದೇವೆ. ಮಗು ಜನಸಿದ ಕೂಡಲೇ ಅದರ ಜನ್ಮದಿನಾಂಕ ಸಮೇತ ಮಾಹಿತಿಯು ಜನಗಣತಿ ರಿಜಿಸ್ಟರ್‌ಗೆ ಹೋಗುತ್ತದೆ. ಈ ಮಗುವಿನ ವಯಸ್ಸು 18 ವರ್ಷ ಆಗುತ್ತಲೇ ಮತದಾರನಾಗಿ ನೊಂದಾಯಿತವಾಗುತ್ತದೆ" ಎಂದು ಅಮಿತ್ ಶಾ ವಿವರಿಸಿದ್ದಾರೆ.
ನಾಗರಿಕ ನೊಂದಣಿ ವ್ಯವಸ್ಥೆ (ಸಿಆರ್‌ಎಸ್- Civil Register System) ಯಲ್ಲಿ 2024ರೊಳಗೆ ಪ್ರತಿಯೊಂದು ಜನನ ಮತ್ತು ಮರಣ ದಾಖಲಾಗಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ. ಈ ಮಾಹಿತಿ ಸೆನ್ಸಸ್‌ನಲ್ಲಿ ಸ್ವಯಂ ಆಗಿ ಸೇರ್ಪಡೆಯಾಗುತ್ತದೆ ಎಂದೂ ಗೃಹ ಸಚಿವರು ಮಾಹಿತಿ ನೀಡಿದ್ಧಾರೆ.

ಇನ್ನು, ನಿನ್ನೆ ಉದ್ಘಾಟನೆಯಾದ ನೂತನ ಸೆನ್ಸಸ್ ಭವನದಿಂದ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಜನಗಣತಿ ಕಾರ್ಯ ಸುಲಭವಾಗುತ್ತದೆ. ಪ್ರಮುಖ ದತ್ತಾಂಶಗಳನ್ನ ನಿಖರವಾಗಿ ವಿಶ್ಲೇಷಿಸಲು ಇದು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ಒನ್ಇಂಡಿಯಾ ಸುದ್ದಿ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications